ವಿವೇಕ ವಾರ್ತೆ : ಪತ್ನಿಯ ಸಾವಿನ ನೋವಿನಿಂದ ಮನನೊಂದು ಹೆಡ್ ಕಾನ್ಸ್’ಟೇಬಲ್ ಓರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಪಶ್ಚಿಮ ಸಂಚಾರಿ ಪೊಲೀಸ್ ಸ್ಟೇಷನ್ ಮುಖ್ಯಪೇದೆ ಜಯಪ್ಪ ಉಪ್ಪಾರ ಎಂಬುವವರೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸೋಮವಾರ ಬೆಳಗ್ಗೆ ಕೆಲಸಕ್ಕೆ ಬಂದ ಹೆಡ್ ಕಾನ್ಸ್’ಟೇಬಲ್ ಜಯಪ್ಪ ಉಪ್ಪಾರ ಮನೆಗೆ ವಾಪಸ್ ತೆರಳಿ ನೇಣಿಗೆ ಶರಣಾಗಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಜಯಪ್ಪ ಉಪ್ಪಾರ ಅವರ ಪತ್ನಿ ಕ್ಯಾನ್ಸರ್ ಕಾಯಿಲೆಯಿಂದ ಸಾವನ್ನಪ್ಪಿದ್ದರು. ಪತ್ನಿಯ ಸಾವಿನಿಂದ ಮುಖ್ಯಪೇದೆಯವರು ತೀವ್ರವಾಗಿ ನೊಂದಿದ್ದರು.
ಇಂದು ಬೆಳಗ್ಗೆ ಡ್ಯೂಟಿ ಬಳಿಕ ಹಗ್ಗ ಖರೀದಿ ಮಾಡಿಕೊಂಡು ವಿನೋಬನಗರ ಚೌಕಿ ಬಳಿ ಇರುವ ತಮ್ಮ ಮನೆಯ ಶೆಡ್ಗೆ ಹಾಕಿದ್ದ ಬೀಮ್ಗೆ ಸಮವಸ್ತ್ರದಲ್ಲಿಯೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಈ ದುರ್ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸ್ ಸಿಬ್ಬಂದಿ ಸ್ನೇಹಜೀವಿಯಾಗಿದ್ದ ಜಯಪ್ಪ ಉಪ್ಪಾರ ಅವರ ಅಗಲಿಕೆಗೆ ದುಃಖ ವ್ಯಕ್ತಪಡಿಸುತ್ತಿದ್ದಾರೆ.