ವಿವೇಕವಾರ್ತೆ : ದಾಂಪತ್ಯಗಳು ಮುರಿದು ಬೀಳೋದಕ್ಕೆ ಹಲವಾರು ಕಾರಣಗಳು ಇರಬಹುದು. ಅದ್ರಲ್ಲಿ ಒಂದು ಕಾರಣ ಅಂದ್ರೆ ಗಂಡಸರು ಸುಂದರವಾದ ಪತ್ನಿ ಇದ್ದರೂ ಕೂಡ ಬೇರೆ ಹೆಂಗಸರ ಮೇಲೆ ಕಣ್ಣು ಹಾಕುತ್ತಾರೆ. ಬೇರೆ ಹೆಣ್ಣು ಮಕ್ಕಳ ಮೇಲೆ ಹೆಚ್ಚಿನ ಆಸಕ್ತಿಯನ್ನು ತೋರುತ್ತಾರೆ. ಇದುವೇ ಸಂಸಾರ ಹಾಳಾಗೋದಕ್ಕೆ ಮೂಲ ಕಾರಣವಾಗುತ್ತದೆ.
ಅಷ್ಟಕ್ಕೂ ಮದುವೆಯಾಗಿದ್ದರೂ ಕೂಡ ಗಂಡಸರು ಬೇರೆ ಹೆಂಗಸರನ್ನು ನೋಡೋದ್ಯಾಕೆ ಅನ್ನೋದನ್ನು ತಿಳಿಯೋಣ.
1. ಗಂಡಸರಲ್ಲಿ ಈ ಗುಣ ಸಾಮಾನ್ಯವಾಗಿರುತ್ತದೆ
ಮಹಿಳೆಯರನ್ನು ನೋಡುವ ಗುಣ ಪುರುಷರಲ್ಲಿ ನೈಸರ್ಗಿಕವಾಗಿರುತ್ತಂತೆ. ಅಧ್ಯಯನ ಏನು ಹೇಳುತ್ತೆ ಅಂದ್ರೆ ಒಂದು ಸುಂದರವಾದ ಮಹಿಳೆ ಎದುರಿಗೆ ಬಂದ ತಕ್ಷಣ ಪುರುಷರ ಮೆದುಳು ಕೆಲಸ ಮಾಡೋದಕ್ಕೆ ಶುರು ಮಾಡುತ್ತಂತೆ. ಅವರಿಗೆ ತಿಳಿಯದ ಹಾಗೆ ಅವರ ಕಣ್ಣು ಮಹಿಳೆಯರತ್ತ ಹೋಗುತ್ತಂತೆ. ಇದು ಖಂಡಿತ ನಿಮ್ಮ ಪತ್ನಿಗೆ ಇಷ್ಟ ಆಗೋದಿಲ್ಲ. ಒಂದು ವೇಳೆ ನಿಮ್ಮಲ್ಲಿ ಮಹಿಳೆಯರನ್ನು ನೋಡುವ ಅಭ್ಯಾಸ ಅತಿಯಾದ್ರೆ ಅದು ನಿಮ್ಮ ಸಂಬಂಧಕ್ಕೆ ಕೊಳ್ಳಿ ಇಡಬಹುದು.
2. ಹೆಚ್ಚಿನ ಮಹಿಳೆಯರು ಸುಂದರವಾಗಿರುತ್ತಾರೆ
ಪುರುಷರು ಮಹಿಳೆಯರತ್ತ ಆಕರ್ಷಿತರಾಗಲು ಮುಖ್ಯವಾದ ಕಾರಣ ಏನೆಂದ್ರೆ ಮಹಿಳೆಯರ ಸೌಂದರ್ಯ. ಪುರುಷರು ಮಾತ್ರವಲ್ಲ ಬೇರೆ ಯಾರಿಗಾದರೂ ಸುಂದರವಾದ ವಸ್ತುವಿನ ಮೇಲೆ ಕಣ್ಣಾಡಿಸದೇ ಇರೋದಕ್ಕೆ ಕಷ್ಟ. ಹೀಗಾಗಿ ನಿಮ್ಮ ಪತಿಯ ಕಣ್ಣು ಮಹಿಳೆಯರತ್ತ ಸಹಜವಾಗಿ ಮಹಿಳೆಯತ್ತ ಆಕರ್ಷತವಾಗಿ ಇರಬಹುದು. ಹಾಗೆಂದ ಮಾತ್ರಕ್ಕೆ ನಿಮ್ಮ ಪತಿಗೆ ನಿಮ್ಮಲ್ಲಿ ಆಸಕ್ತಿ ಕಡಿಮೆಯಾಗಿದೆ ಅಂತ ಅಂದುಕೊಳ್ಳುವುದು ತಪ್ಪು.
3. ವೈವಾಹಿಕ ಸಂಬಂಧದಲ್ಲಿ ಕೊರತೆಗಳಿರಬಹುದು!
ಪುರುಷರು ತಮ್ಮ ಪತ್ನಿಯನ್ನು ಬಿಟ್ಟು ಬೇರೆ ಮಹಿಳೆಯರತ್ತ ಕಣ್ಣು ಹಾಕುತ್ತಿದ್ದಾರೆ ಅಂದ್ರೆ ಅದಕ್ಕೆ ಮುಖ್ಯ ಕಾರಣ ಅವರಿಗೆ ಪತ್ನಿಯ ಮೇಲೆ ಆಸಕ್ತಿ ಕಡಿಮೆಯಾಗಿರಬಹುದು. ವೈವಾಹಿಕ ಜೀವನದಲ್ಲಿ ತೃಪ್ತಿ ಇಲ್ಲದಿದ್ದಾಗ ಅವರು ಬೇರೆ ಮಹಿಳೆಯರಲ್ಲಿ ಅದನ್ನು ಹುಡುಕುತ್ತಾರೆ. ನಿಮ್ಮೊಂದಿಗಿನ ಸಂಬಂಧಕ್ಕೆ ತಿಲಾಂಜಲಿ ಇಟ್ಟು ಅವರು ಬೇರೆ ಮಹಿಳೆಯೊಂದಿಗೆ ಹೊಸ ಜೀವನ ಆರಂಭಿಸೋದಕ್ಕೆ ಇಷ್ಟ ಪಟ್ಟಿರಬಹುದು. ಇದೂ ಕೂಡ ಒಂದು ಕಾರಣ ಆಗಿರಬಹುದು.
4. ಪತಿ ನಿಮ್ಮ ಜೊತೆ ಸಂತೋಷವಾಗಿಲ್ಲದಿದ್ದಾಗ!
ಪತಿಯು ದಾಂಪತ್ಯದಲ್ಲಿ ಸಂತೋಷವನ್ನು ಕಂಡುಕೊಳ್ಳೋದಕ್ಕೆ ಸಾಧ್ಯವಾಗದಿದ್ದಾಗ ಆ ಸಂತೋಷವನ್ನು ಆತ ಬೇರೆ ಕಡೆ ಹುಡುಕೋದಕ್ಕೆ ಶುರು ಮಾಡುತ್ತಾನೆ. ಮನೆಯಲ್ಲಿ ಸದಾ ಜಗಳ, ಮನಸ್ಥಾಪಗಳು ಆಗುತ್ತಿದ್ದರೆ ಪತ್ನಿಯಿಂದ ನಾನು ಜೀವನದಲ್ಲಿ ಖುಷಿಯನ್ನು ಕಾಣೋದಕ್ಕೆ ಸಾಧ್ಯವೇ ಇಲ್ಲವೆಂದಾಗ ಬೇರೆ ಮಹಿಳೆಯಲ್ಲಿ ಆ ಖುಷಿಯನ್ನು ಬಯಸೋದು ಸಹಜ.
5. ಬೇರೆ ಮಹಿಳೆಯರಲ್ಲಿ ಕೆಲವೊಂದು ವಿಷಯ ಇಷ್ಟ ಆಗಿರ್ಬಹುದು!
ನಿಮ್ಮ ಪತಿಗೆ ಮಹಿಳಾ ಸೆಲೆಬ್ರಿಟಿ ಇಷ್ಟ ಆಗಿರಬಹುದು. ಹೀಗಾಗಿ ಪದೇ ಪದೇ ಅವರ ಫೋಟೋ ಅಥವಾ ವಿಡಿಯೋಗಳನ್ನು ನೋಡೋದಕ್ಕೆ ಇಷ್ಟ ಪಡುತ್ತಾರೆ. ಅವರು ಧರಿಸುವ ವಿಭಿನ್ನ ಶೈಲಿಯ ಬಟ್ಟೆಗಳು, ಹೇರ್ ಸ್ಟೈಲ್ ಇತ್ಯಾದಿ. ಕೆಲವೊಂದು ಸಲ ನಿಮಗೂ ಕೂಡ ಅವರ ಇಷ್ಟದ ಸೆಲೆಬ್ರಿಟಯನ್ನು ನೋಡಿ ಕೆಲವೊಂದು ಸಲಹೆಯನ್ನು ನೀಡಬಹುದು.
ಆದ್ರೆ ಪತಿಯ ಈ ಗುಣ ನಿಮಗೆ ಇಷ್ಟ ಆಗೋದಿಲ್ಲ. ಪತಿ ಬೇರೆ ಸೆಲೆಬ್ರಿಟಿಯನ್ನು ನೋಡುತ್ತಿದ್ದರೂ ಕೂಡ ನೀವು ಇಷ್ಟ ಪಡೋದಿಲ್ಲ. ಕೆಲವೊಂದು ಸಲ ಮಹಿಳೆಯರು ಎಲ್ಲಾ ವಿಚಾರದಲ್ಲೂ ಪೊಸೆಸಿವ್ ಆಗಿರೋದು ತಪ್ಪು.
6. ಮೈ ಕಾಣಿಸೋ ಹಾಗೆ ಬಟ್ಟೆ ಹಾಕಿದ್ದಾಗ
ಕೆಲವು ಮಹಿಳೆಯರು ಪಾರ್ಟಿ ಅಥವಾ ಇನ್ಯಾವುದೋ ಕಾರ್ಯಕ್ರಮಗಳಲ್ಲಿ ಮೈ ಕಾಣಿಸೋ ಹಾಗೆ ಬೋಲ್ಡ್ ಡ್ರೆಸ್ ಗಳನ್ನು ಹಾಕಿಕೊಂಡು ಬರುತ್ತಾರೆ. ಇಂತಹ ಸಂದರ್ಭದಲ್ಲಿ ಪುರುಷರ ಕಣ್ಣುಗಳು ಇದ್ದಕ್ಕಿದ್ದ ಹಾಗೆ ಮಹಿಳೆಯರತ್ತ ಹೋಗುತ್ತದೆ. ಇದು ಕೂಡ ಪುರುಷರು ಮಹಿಳೆಯರನ್ನು ನೋಡೋದಕ್ಕೆ ಒಂದು ಕಾರಣವಾಗಿರುತ್ತದೆ.
ಪುರುಷರು ಪತ್ನಿಯಿದ್ದರೂ ಮಹಿಳೆಯರನ್ನು ನೋಡೋದಕ್ಕೆ ಅನೇಕ ಕಾರಣಗಳು ಇರಬಹುದು. ಕೆಲವೊಂದು ಸಾರಿ ಕೆಟ್ಟ ಉದ್ದೇಶದಿಂದಲೂ ನಿಮ್ಮ ಪತ್ನಿ ಮಹಿಳೆಯರನ್ನು ನೋಡಬಹುದು. ಹಾಗೆಂದ ಮಾತ್ರಕ್ಕೆ ಎಲ್ಲಾ ಪುರುಷರನ್ನು ಅಪಾರ್ಥ ಮಾಡೊಕೊಳ್ಳೋದು ತಪ್ಪು.
ಕೃಪೆ- Boldsky