ವಿವೇಕವಾರ್ತೆ: ಬೆಂಗಳೂರು (Bengaluru) ಹೊರವಲಯ ಆನೇಕಲ್‌ನಲ್ಲಿ (Anekal) ಫೇಕ್ ಪೊಲೀಸ್ ಅರೆಸ್ಟ್ ಆಗಿದ್ದಾನೆ. ಕ್ರೈಮ್ ಪೊಲೀಸ್ (Crime Police) ಎಂದು ಪ್ರೇಮಿಗಳ ದೋಚುತ್ತಿದ್ದ ಫೇಕ್ ಪೊಲೀಸ್‌ನನ್ನು (Fake Police) ಸೂರ್ಯನಗರ ಪೊಲೀಸರು ಕಂಬಿ ಹಿಂದೆ ಕಳುಹಿಸಿದ್ದಾರೆ.
ಕನಕಪುರ (Kanakapura) ಮೂಲದ ಶಿವಕುಮಾರ್ ಬಂಧಿತ ಆರೋಪಿ. ಕೃತ್ಯಕ್ಕೆ ಸಾಥ್ ನೀಡುತ್ತಿದ್ದ ರಘು ಮತ್ತು ಪ್ರವೀಣ್ ಎಸ್ಕೇಪ್ ಆಗಿದ್ದು, ಪೊಲೀಸರು ಶೋಧ ನಡೆಸಿದ್ದಾರೆ.
ನಿರ್ಜನ ಪ್ರದೇಶಗಳಲ್ಲಿ ವಿಹರಿಸುವ ಪ್ರೇಮಿಗಳನ್ನು ಟಾರ್ಗೆಟ್ ಮಾಡಿ, ಪ್ರೇಮಿಗಳ ವಿಡಿಯೋ ರೆಕಾರ್ಡ್ ಮಾಡುತ್ತಿದ್ದರಂತೆ. ಬಳಿಕ ಹ್ಯಾಂಡ್ ಕಪ್ ಐಡಿ ಕಾರ್ಡ್ ತೋರಿಸಿ ಬೆದರಿಕೆ ಹಾಕಿ, ಹಣ, ಚಿನ್ನಾಭರಣ ದೋಚಿ ಎಸ್ಕೇಪ್ ಆಗುತ್ತಿದ್ದರಂತೆ. ಈವರೆಗೆ ಬಂಧಿತ ಆರೋಪಿಯ ಮೇಲೆ 20ಕ್ಕೂ ಅಧಿಕ ರಾಬರಿ ಕೇಸ್ ದಾಖಲಾಗಿವೆ.
ಪ್ರೇಮಿಗಳನ್ನು ಬೆದರಿಸುತ್ತಿದ್ದಾಗ ಅಸಲಿ ಪೊಲೀಸರು ಎಂಟ್ರಿ
ಘಟನೆ ಸಂಬಂಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಬಂಧಿತನ ವಿರುದ್ಧ ರಾಮನಗರ, ಜಿಗಣಿ, ಮೈಕೊಲೇಔಟ್, ಕ್ಯಾತಸಂದ್ರ ಸೇರಿದಂತೆ ಐದು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿ ಪ್ರೇಮಿಗಳನ್ನು ಬೆದರಿಸುತ್ತಿದ್ದಾಗ ಅಸಲಿ ಪೊಲೀಸರು ಸ್ಥಳಕ್ಕೆ ಎಂಟ್ರಿ ಕೊಟ್ಟಾಗ ರಿಯಲ್ ಖಾಕಿಯನ್ನು ಕಂಡು ಆರೋಪಿ ಎಸ್ಕೇಫ್ ಆಗಲು ಮುಂದಾಗಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಚೇಸ್ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.