ನಿಮ್ಮ ಸ್ಮಾರ್ಟ್ ಫೋನ್ ನೀರಲ್ಲಿ ಬಿದ್ದರೆ ಹೀಗೆ ಮಾಡಿ.!

Published on

spot_img
spot_img

ವಿವೇಕವಾರ್ತೆ : ನೀರಿನಲ್ಲಿ ಮೊಬೈಲ್‌ಗಳು ಬೀಳುವುದು ಸರ್ವೇ ಸಾಮಾನ್ಯ. ಮೊಬೈಲ್ ನೀರಲ್ಲಿ ಬಿದ್ದ ತಕ್ಷಣ ಮೊಬೈಲ್ ಒಳಗಿನ ಹಾರ್ಡ್‌ವೇರ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ ಆಗುವ ಸಾಧ್ಯತೆಯೇ ಹೆಚ್ಚು. ಬಹಳಷ್ಟು ಮೊಬೈಲ್‌ಗಳು ಇನ್ನು ವಾಟರ್‌ಪ್ರೂಪ್‌ ತಂತ್ರಜ್ಞಾನವನ್ನು ಹೊಂದಿಲ್ಲ. ಹೀಗಾಗಿ ಎಷ್ಟೋ ಜನ ನೀರಲ್ಲಿ ಮೊಬೈಲ್ ಕೆಡವಿ ಅದನ್ನು ಮೂಲೆಗೆ ಬಿಸಾಕಿದ್ದಾರೆ.

ಆದ್ದರಿಂದ ಮೊಬೈಲ್‌ ನೀರಿನಲ್ಲಿ ಬಿದ್ದಾಗ ಒಂದಿಷ್ಟು ಎಚ್ಚರಿಕೆ ಅಂಶಗಳನ್ನು ಅನುಸರಿಸಬೇಕಾಗುತ್ತದೆ.

* ಚಾರ್ಜ್‌ ಹಾಕಬಾರದು : ಸ್ಮಾರ್ಟ್‌ಫೋನ್ ನೀರಿನಿಂದ ಹಾನಿಗೊಳಗಾದಾಗ ಮೊಬೈಲ್‌ನನ್ನು ಚಾರ್ಜ್‌ಗೆ ಹಾಕಬೇಡಿ. ಏಕೆಂದರೆ ಅದು ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗುತ್ತದೆ. ಮತ್ತು ಮೊಬೈಲ್‌ನ್ನು ಇನ್ನಷ್ಟು ಹಾನಿಗೊಳಿಸುತ್ತದೆ. ಇದಲ್ಲದೇ ಯುಎಸ್‌ಬಿ, ಹೆಡ್‌ಪೋನ್ ಸಹ ಕನೆಕ್ಟ್ ಮಾಡಬೇಡಿ. ಇದರಿಂದ ನೀರಿನ ಹನಿಗಳು ಇನ್ನು ಒಳಹೋಗುವ ಸಾಧ್ಯತೆ ಇದೆ.

* ಸ್ವಿಚ್ ಆಫ್ ಮಾಡುವುದು : ಮೊಬೈಲ್ ನೀರಲ್ಲಿ ಬಿದ್ದ ತಕ್ಷಣ ಸ್ವಿಚ್ ಆಫ್ ಮಾಡುವುದು ಒಳ್ಳೆಯದು. ನೀರಿನಲ್ಲಿ ಬಿದ್ದ ಸ್ಮಾರ್ಟ್‌ಫೋನ್‌ನ್ನು ತಕ್ಷಣ ಬಳಸುವುದು ಡೇಂಜರ್. ಇದರಿಂದ ಸ್ಮಾರ್ಟ್‌ಫೋನ್‌ ಅಥವಾ ಮೊಬೈಲ್‌ಗೆ ಇನ್ನಷ್ಟು ಹಾನಿ ಉಂಟಾಗಿ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆಯನ್ನು ನಿಲ್ಲಿಸಬಹುದು.

ಸ್ವಿಚ್‌ ಆಫ್ ಮಾಡಿದ ನಂತರ ಒಣ ಬಟ್ಟೆಯಿಂದ ಸಂಪೂರ್ಣವಾಗಿ ಒರೆಸಬೇಕು ನಂತರ, ಸಾಧ್ಯವಾದಷ್ಟು ಹೆಚ್ಚು ತೇವಾಂಶ ಹೀರಿಕೊಳ್ಳುವ ಕಾಗದದ ಉತ್ಪನ್ನಗಳಲ್ಲಿ ಅಥವಾ ಟವೆಲ್‌ನಲ್ಲಿ ಸ್ಮಾರ್ಟ್‌ಫೋನ್ ಕಟ್ಟಿ ಇಟ್ಟರೆ ಒಳ್ಳೆಯದು.

* ಕೇಬಲ್‌ಗಳನ್ನು ಅನ್‌ಪ್ಲಗ್ ಮಾಡಿ : ಹೆಡ್‌ಫೋನ್, ಕೇಬಲ್‌ಗಳನ್ನು ಅನ್‌ಪ್ಲಗ್ ಮಾಡಿ ಮತ್ತು SIM ಕಾರ್ಡ್, ಮೆಮೊರಿ ಕಾರ್ಡ್‌ಗಳನ್ನು ತೆಗೆದುಹಾಕಬೇಕು. ನಂತರ, ಸ್ಮಾರ್ಟ್‌ಫೋನ್ ಅಲುಗಾಡಿಸಬೇಕು ಹೀಗೆ ಮಾಡಿದ್ರೆ ಒಳ ಇರುವ ನೀರು ಹೊರಬರಲು ಸಾಧ್ಯವಾಗುತ್ತದೆ.

ಸ್ಮಾರ್ಟ್‌ಫೋನ್ ಒಣಗಿಸಲು ಬ್ಯಾಕ್ ಪ್ಯಾನೆಲ್ ತೆಗೆದು ನೇರವಾಗಿ ಸೂರ್ಯನ ಬೆಳಕಿನಲ್ಲಿ ಇರಿಸಬಹುದು. ಈ ಪ್ರಯತ್ನ ಹ್ಯಾಂಡ್‌ಸೆಟ್‌ನ್ನು ಸಂಪೂರ್ಣವಾಗಿ ಒಣಗಿಸಲು ಸಹಾಯ ಮಾಡುತ್ತದೆ.

* ಸ್ಮಾರ್ಟ್‌ಫೋನ್‌ನ್ನು ಅಕ್ಕಿಯಲ್ಲಿ ಇಡಬಹುದು : ತೇವಾಂಶ ಹೀರಿಕೊಳ್ಳುವ ಸಲುವಾಗಿ ಅಕ್ಕಿ ಚೀಲದಲ್ಲಿ ಅಥವಾ ಗಾಳಿ ಬೀಸುವ ಪೆಟ್ಟಿಗೆಯಲ್ಲಿ ಮೊಬೈಲ್ ಇಡುವುದು ಉತ್ತಮ ಪರಿಹಾರ. ಇದರಿಂದ ಬೇಗ ನಿಮ್ಮ ಫೋನ್ ಮೊದಲಿನಂತೆ ಆಗುತ್ತದೆ. ಅಕ್ಕಿ ಪರ್ಯಾಯ ಪರಿಹಾರವಾಗುತ್ತದೆ

ಏಕೆಂದರೆ ಧಾನ್ಯಗಳು ತೇವಾಂಶ ಹೀರಿಕೊಳ್ಳುತ್ತವೆ. ಆದರೂ, ಅಕ್ಕಿಯಲ್ಲಿರುವ ಧೂಳು ಮೊಬೈಲ್ ಸೇರದಂತೆ ನೋಡಿಕೊಳ್ಳಿ. ಕನಿಷ್ಠ 24 ರಿಂದ 48 ಗಂಟೆ ಅಕ್ಕಿಯಲ್ಲಿಯೇ ಮೊಬೈಲ್ ಇದ್ದರೆ ಒಳ್ಳೆದು.

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!