ನಿಪ್ಪಾಣಿ : ತಾಲ್ಲೂಕಿನ ಗಡಿಯಲ್ಲಿರುವ ಕೊಗನೊಳ್ಳಿ ಆರ್‌ಟಿಒ ಚೆಕ್ ಪೋಸ್ಟ್ ಮೇಲೆ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಚೆಕ್ ಪೋಸ್ಟ್ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿದ್ದು, ಕರ್ನಾಟಕಕ್ಕೆ ಪ್ರವೇಶ ಕಲ್ಪಿಸುವ ಬೆಂಗಳೂರು- ಮುಂಬೈ ರಾಷ್ಟ್ರೀಯ ಹೆದ್ದಾರಿ ಬಳಿ ಇದೆ.
ಇದೇ ಚೆಕ್ ಪೋಸ್ಟ್ ಮೂಲಕ ಸಾವಿರಾರು ವಾಹನಗಳು ಎರಡೂ ರಾಜ್ಯಗಳ ಮಧ್ಯೆ ಓಡಾಡುತ್ತವೆ.
ಇಲ್ಲಿ ತಪಾಸಣೆ ಮಾಡುವ ವೇಳೆ ಅಧಿಕಾರಿಗಳು ಹಣ ವಸೂಲಿ ಮಾಡುತ್ತಾರೆ ಎಂಬ ಮಾಹಿತಿ ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಶೋಧ ಮುಂದುವರಿದಿದ್ದು, ಅಪಾರ ಹಣ ಹಾಗೂ ಹಲವು ವಾಹನಗಳ ದಾಖಲೆ ಪಾತ್ರಗಳನ್ನು ವಶಕ್ಕೆ ಪಡೆದಿದ್ದಾಗಿ ಮೂಲಗಳು ತಿಳಿಸಿವೆ.