Wednesday, September 27, 2023

ನಿನ್ನನ್ನೇ ಮದುವೆಯಾಗುವೆ ಎಂದು ಹಣ ಪಡೆದು ಬೇರೊಬ್ಬನಿಂದ ತಾಳಿ ಕಟ್ಟಿಸಿಕೊಂಡಳು; 26 ಲಕ್ಷ ಧೋಖಾ

ವಿವೇಕವಾರ್ತೆ :ಪ್ರಿಯಕರನಿಂದ 26 ಲಕ್ಷ ರೂಪಾಯಿ ಹಣ ಪೀಕಿಸಿದ ಯುವತಿ, ಬೇರೊಬ್ಬನನ್ನು ಮದುವೆಯಾದ ಘಟನೆ ವರದಿಯಾಗಿದೆ. ಈ ಕುರಿತು ಯಮುನಾ ಎಂಬಾಕೆಯ ವಿರುದ್ಧ ದೂರು ಕ್ರಿಕೆಟರ್ ಕೀರ್ತಿರಾಜ್‌ ಎಂಬವರು ವಂಚನೆ (Fraud Case) ದೂರು ನೀಡಿದ್ದಾರೆ.

ಕೀರ್ತಿರಾಜ್ ಎಂಬಾತನಿಗೆ 2 ವರ್ಷದ ಹಿಂದೆ ಯಮುನಾ ಪರಿಚಯವಾಗಿದ್ದಳು.

ಪರಿಚಯ ಪ್ರೀತಿಗೆ ತಿರುಗಿ ಮದುವೆ ಹಂತಕ್ಕೆ ಹೋಗಿತ್ತು. ತಾನು ತೀರ ಬಡವಳಿದ್ದೇನೆ, ಮದುವೆ ಖರ್ಚು ನೀನೇ ನೋಡಿಕೊಳ್ಳಬೇಕು ಎಂದು ಯಮುನಾ ಹೇಳಿದ್ದರು. ಹೇಗೂ ಮದುವೆಯಾಗುತ್ತೇವಲ್ಲ ಎಂದು ನಂಬಿ ಕೀರ್ತಿರಾಜ್‌ ಹಂತ ಹಂತವಾಗಿ ಆಕೆಗೆ 26 ಲಕ್ಷ ರೂ. ಹಣ ನೀಡಿದ್ದ.

ಕೆಲವು ದಿನಗಳ ಬಳಿಕ ಅದೇ ಹಣ ಬಳಸಿ ನಾಗೇಂದ್ರ ಎಂಬಾತನನ್ನು ಯಮುನಾ ಮದುವೆ ಮಾಡಿಕೊಂಡಿದ್ದಾಳೆ. ಈ ವಿಚಾರ ತಿಳಿಯುತ್ತಿದ್ದಂತೆ ಯಮುನಾಳನ್ನು ಕೀರ್ತಿರಾಜ್ ವಿಚಾರಿಸಿದ್ದ. ʼಅದೊಂದು ದೊಡ್ಡ ಕತೆ, ನಿನಗೆ ಹಣ ಮರಳಿ ಕೊಡುತ್ತೇನೆʼ ಎಂದು ಯಮುನಾ ಯಾಮಾರಿಸಿದ್ದಳು. ಆದರೆ ನಂತರ ಹಣ ವಾಪಸ್ ಬಾರದ ಹಿನ್ನೆಲೆಯಲ್ಲಿ ಮತ್ತೆ ಹಣ ಕೇಳಲು ಹೋದ ಕೀರ್ತಿರಾಜ್‌ ಮೇಲೆ ಯಮುನಾ, ಆಕೆಯ ತಮ್ಮ ಹಾಗೂ ನಾಗೇಂದ್ರ ಎಂಬಾತ ಹಲ್ಲೆ ನಡೆಸಿದ್ದಾರೆ. ಕೀರ್ತಿರಾಜ್‌ ಕಾರನ್ನೂ ಜಖಂ ಮಾಡಿದ್ದಾರೆ.

ಇದೇ ವೇಳೆ ಯಮುನಾ, ʼಹೌದು, ನಿಮ್ಮ ದುಡ್ಡಲ್ಲೇ ಮದುವೆಯಾಗಿದ್ದು, ಏನು ಮಾಡುತ್ತೀರೋ ಮಾಡಿಕೊಳ್ಳಿʼ ಎಂದು ಧಮಕಿ ಹಾಕಿದ್ದಳು. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕೀರ್ತಿರಾಜ್‌ ದೂರು ದಾಖಲಿಸಿದ್ದಾರೆ.

RELATED ARTICLES

ಬ್ಯಾಕ್ ಪ್ಲಿಪ್ ಮಾಡಲು ಹೋಗಿ ಫೇಲ್ ಆದ ಯುವಕ : ‘ಇದರ ಅಗತ್ಯ ಇತ್ತೇ’ ಎಂದ ನೆಟ್ಟಿಗರು ; ವಿಡಿಯೋ ವೈರಲ್.!

ವಿವೇಕವಾರ್ತೆ : ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಕೆಲ ಯುವಕ ಯುವತಿಯರ ಹುಚ್ಚಾಟದ ವಿಡಿಯೋಗಳು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರೈಲಿನ ಬೋಗಿಯೊಳಗೆ ವಿಡಿಯೋ ಚಿತ್ರೀಕರಣದ ನಿಷೇಧದ ಹೊರಾತಗಿಯೂ ಇಂಥ ಪ್ರವೃತ್ತಿಗಳು ಮುಂದುವರೆಯುತಲೇ ಇವೆ. ಆ...

ಕಾರಿಗೆ ಡಿಕ್ಕಿ ಹೊಡೆದ ಲಾರಿ : ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವು..!

ವಿವೇಕವಾರ್ತೆ : ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಕಾರಿಗೆ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾದ ನಡೆದಿದೆ. ಮೃತ ದುರ್ದೈವಿಗಳನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆಕಾಶ್ (20), ಹೇಮಂತ್ (28)...

ಕುಂಬಳಕಾಯಿ ಬೀಜ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು.!

ವಿವೇಕವಾರ್ತೆ : ಕುಂಬಳಕಾಯಿ ಬೀಜಗಳು ತುಂಬಾ ಚಿಕ್ಕದಾಗಿದ್ದರೂ, ನಮ್ಮ ವ್ಯವಸ್ಥೆಗಳು ಅವಲಂಬಿಸಿರುವ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಕುಂಬಳಕಾಯಿಯ ಚಿಕ್ಕ ಬೀಜಗಳು ನಾವು ಅಂದಾಜಿಸುವುದಕ್ಕಿಂತ ಹೆಚ್ಚಿನ ಪೋಷಕಾಂಶಗಳಿಂದ ತುಂಬಿವೆ.‌ ಕುಂಬಳಕಾಯಿ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು...
- Advertisment -

Most Popular

ಗೋಕಾಕ : ಹಣಕಾಸಿನ ವಿಚಾರಕ್ಕೆ ಯೋಧನಿಂದಲೇ ಮತ್ತೋರ್ವ ಯೋಧನ ಮೇಲೆ ಫೈರಿಂಗ್.!

ವಿವೇಕ ವಾರ್ತೆ : ಓರ್ವ ಯೋಧನಿಂದ ಮತ್ತೊಬ್ಬ ಯೋಧನ ಮೇಲೆ ಪೈರಿಂಗ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ರಾಜನಕಟ್ಟಿಯಲ್ಲಿ ನಡೆದಿದೆ. ರಾಜನಕಟ್ಟೆ ಗ್ರಾಮದ ಇಬ್ಬರು ವ್ಯಕ್ತಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ....

ಬ್ಯಾಕ್ ಪ್ಲಿಪ್ ಮಾಡಲು ಹೋಗಿ ಫೇಲ್ ಆದ ಯುವಕ : ‘ಇದರ ಅಗತ್ಯ ಇತ್ತೇ’ ಎಂದ ನೆಟ್ಟಿಗರು ; ವಿಡಿಯೋ ವೈರಲ್.!

ವಿವೇಕವಾರ್ತೆ : ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಕೆಲ ಯುವಕ ಯುವತಿಯರ ಹುಚ್ಚಾಟದ ವಿಡಿಯೋಗಳು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರೈಲಿನ ಬೋಗಿಯೊಳಗೆ ವಿಡಿಯೋ ಚಿತ್ರೀಕರಣದ ನಿಷೇಧದ ಹೊರಾತಗಿಯೂ ಇಂಥ ಪ್ರವೃತ್ತಿಗಳು ಮುಂದುವರೆಯುತಲೇ ಇವೆ. ಆ...

ಕಾರಿಗೆ ಡಿಕ್ಕಿ ಹೊಡೆದ ಲಾರಿ : ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವು..!

ವಿವೇಕವಾರ್ತೆ : ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಕಾರಿಗೆ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾದ ನಡೆದಿದೆ. ಮೃತ ದುರ್ದೈವಿಗಳನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆಕಾಶ್ (20), ಹೇಮಂತ್ (28)...

ಕುಂಬಳಕಾಯಿ ಬೀಜ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು.!

ವಿವೇಕವಾರ್ತೆ : ಕುಂಬಳಕಾಯಿ ಬೀಜಗಳು ತುಂಬಾ ಚಿಕ್ಕದಾಗಿದ್ದರೂ, ನಮ್ಮ ವ್ಯವಸ್ಥೆಗಳು ಅವಲಂಬಿಸಿರುವ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಕುಂಬಳಕಾಯಿಯ ಚಿಕ್ಕ ಬೀಜಗಳು ನಾವು ಅಂದಾಜಿಸುವುದಕ್ಕಿಂತ ಹೆಚ್ಚಿನ ಪೋಷಕಾಂಶಗಳಿಂದ ತುಂಬಿವೆ.‌ ಕುಂಬಳಕಾಯಿ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು...
error: Content is protected !!