ವಿವೇಕವಾರ್ತೆ : ಬಾಗಲಕೋಟೆ ಜಿಲ್ಲೆಯ ಬೀಳಗಿ ಕೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಪತ್ತೆಯಾಗಿದ್ದ ವಕೀಲರೊಬ್ಬರ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ
ಕೊಲೆಯಾದ ವಕೀಲ ಬೀಳಗಿ ತಾಲ್ಲೂಕಿನ ತುಂಬರಮಟ್ಟಿ ಗ್ರಾಮದ ಗಿರೀಶ್ ಕಾಡಣ್ಣವರ್ (38) ಎಂದು ತಿಳಿದುಬಂದಿದೆ.
ಗಿರೀಶ್ ಅವರು ಬೀಳಗಿ ಕೋರ್ಟ್ ನಲ್ಲಿ ವಕೀಲನಾಗಿ ಕಾರ್ಯ ನಿರ್ವಹಿಸುತ್ತಿದ್ದು ಅಕ್ಟೋಬರ್ 15ರಂದು ಮನೆಯಿಂದ ನಾಪತ್ತೆಯಾಗಿದ್ದರು.
ಸದ್ಯ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದೇಹದ ಹಲವು ಭಾಗಗಳಲ್ಲಿ ಗಾಯಗಳಿವೆ.
ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ಕೊಲೆ ವೈಯಕ್ತಿಕ ದ್ವೇಷದಿಂದ ನಡೆದಿದೆಯೇ ಅಥವಾ ವೃತ್ತಿ ಸಂಬಂಧ ವೈಷಮ್ಯದಿಂದ ನಡೆದಿದೆಯೇ ಎನ್ನುವ ಬಗ್ಗೆ ಪೊಲೀಸರ ತನಿಖೆ ಬಳಿಕವಷ್ಟೇ ತಿಳಿಯಲಿದೆ.