ವಿವೇಕ ವಾರ್ತೆ : ನವಜಾತ ಶಿಶುವನ್ನು ಕೊಂದು ಹೂತಿಟ್ಟ 40 ವರ್ಷದ ಮಹಿಳೆಯನ್ನು ಪೊಲೀಸರು ಅರೆಸ್ಟ್ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೀನುಗಾರಿಕಾ ಕೇಂದ್ರದ ಬಳಿ ಬೀದಿ ನಾಯಿಗಳು ಹೊರತೆಗೆದ ಕೊಳೆತ ದೇಹವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಗುವಿನ ಶವವನ್ನು ಪತ್ತೆಹಚ್ಚಿದ ಬಳಿಕ ಜೂಲಿಯನ್ನು ಬಂಧಿಸಲಾಗಿದೆ ಎಂದು ಅಂಕುತೆಂಗು ಪೊಲೀಸರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಜೂಲಿ ಜುಲೈ 14 ರಂದು ತನ್ನ ಮನೆಯ ಸಮೀಪವಿರುವ ವಾಶ್ ರೂಂನಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಬಳಿಕ ಕತ್ತರಿಗಳಿಂದ ಹೊಕ್ಕುಳಬಳ್ಳಿಯನ್ನು ಕತ್ತರಿಸಿದ್ದಳು. ಈ ವೇಳೆ ಮಗು ಅಳಲು ಆರಂಭಿಸಿದಾಗ ಜೂಲಿ ಬಾಯಿ ಮೂಗನ್ನು ಮುಚ್ಚಿದ್ದು, ಉಸಿರುಗಟ್ಟಿ ಮಗು ಸಾವನ್ನಪ್ಪಿದೆ ಎಂದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.
ನಂತರ ಆಕೆಯ ಮನೆಯ ಬಳಿ ಮಗುವಿನ ಶವವನ್ನು ಹೂತು ಹಾಕಿದ್ದಾಳೆ. ಜುಲೈ 18 ರಂದು ಸ್ಥಳಕ್ಕೆ ಬಂದು ನೋಡಿದಾಗ ಮಗುವಿನ ದೇಹ ಇರಲಿಲ್ಲ. ಬೀದಿ ನಾಯಿಗಳು ಅದನ್ನು ಹೊರ ತೆಗೆದು ಎಳೆದುಕೊಂಡು ಹೋಗಿ ಮೀನುಗಾರಿಕಾ ಕೇಂದ್ರದ ಬಳಿ ಹಾಕಿದ್ದವು. ಬಳಿಕ ಸ್ಥಳೀಯರು ಅದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ವರದಿಯಿಂದ ತಿಳಿದುಬಂದಿದೆ.
ಪೊಲೀಸರಿಗೆ ಸಿಕ್ಕ ಸುಳಿವಿನ ಮೇರೆಗೆ ಜೂಲಿಯನ್ನು ಬಂಧಿಸಲಾಯಿತು. ಆರಂಭದಲ್ಲಿ ಆಕೆ ಆರೋಪ ನಿರಾಕರಿಸಿದರೂ, ಪೊಲೀಸರು ವೈಜ್ಞಾನಿಕ ಪುರಾವೆಗಳನ್ನು ಪ್ರಸ್ತುತಪಡಿಸಿದ ನಂತರ ತಾನೂ ಮಾಡಿದ ಅಪರಾಧವನ್ನು ಒಪ್ಪಿಕೊಂಡಳು.
ವಿಧವೆಯಾಗಿದ್ದರೂ ಮಗುವಿನ ತಾಯಿಯಾಗಿದ್ದಾಳೆ ಎಂದು ಅವಮಾನಿಸುತ್ತಾರೆಂದು ಅಂಜಿ ಕೊಲೆ ಮಾಡಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾಳೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಎಂದು ವರದಿಯಾಗಿದೆ.