ವಿವೇಕ ವಾರ್ತೆ : ದಕ್ಷಿಣ ಪ್ಲೋರಿಡಾದ ವನ್ಯಜೀವಿ ತಜ್ಞ ಮತ್ತು ಜೀವಶಾಸ್ತ್ರಜ್ಞ ಗಲಾಂಟೆ ಎಂಬುವರು ಕಾಡು ಪ್ರಾಣಿಗಳ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡುತ್ತಾರೆ.
ಇವರು ಹೀಗೆ ವಿಡಿಯೋ ಮಾಡುವಾಗ ಭಯಾನಕ ಘಟನೆಯೊಂದು ನಡೆದಿದೆ.
ಗಲಾಂಟೆ ಅವರು ಕಾಡಿನಲ್ಲಿರುವ ನದಿಯಲ್ಲಿ ಮೊಣಕಾಲು ಆಳದ ನೀರಿನಲ್ಲಿ ನಿಂತಿದ್ದಾಗ ಸಿಡಿಲು ಬಡಿದಿದೆ. ಇದು ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಸಿಡಿಲು ಬಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಗಲಾಂಟೆ ಕಾಡಿನಲ್ಲಿರುವ ನದಿ ನೀರಿನಲ್ಲಿ ನಿಂತು, ಇದು ಸುಂದರವಾದ ದಿನ. ಶೂಟಿಂಗ್ ಚೆನ್ನಾಗಿ ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ. ಇದು ಫ್ಲೋರಿಡಾ. ಇಲ್ಲಿ ಆಗಾಗ್ಗೆ ಮಳೆಯಾಗುತ್ತದೆ. ಮಿಂಚು, ಗುಡುಗು ಸದಾ ಕಾಣಸಿಗುತ್ತದೆ ಎಂದು ವಿವರಿಸುತ್ತಾ ನಿಂತಿದ್ದಾರೆ. ಅಷ್ಟರಲ್ಲಿ ಪಕ್ಕದಲ್ಲೇ ಸಿಡಿಲು ಬಡಿದಂತಾಯಿತು. ಗಲಾಂಟೆ ಹೆದರಿ ನೀರಿನಲ್ಲಿ ಬಿದ್ದಿದ್ದಾರೆ.
ಈ ಘಟನೆಯ ನಂತರ, ಅವರು ಕೆಲವು ಕ್ಷಣಗಳಲ್ಲಿ ಚೇತರಿಸಿಕೊಂಡರು ಮತ್ತು ಮತ್ತೆ ವಿವರಿಸಲು ಪ್ರಾರಂಭಿಸಿದನು. ‘ಆ ಸಮಯದಲ್ಲಿ ಹಠಾತ್ ಮಿಂಚಿನ ಹೊಡೆತದಿಂದ ಹೆದರಿಕೆ ಆಯಿತು. ಪ್ರಚಂಡ ಬೆಳಕಿನಿಂದ ಸ್ವಲ್ಪ ಕ್ಷಣ ನನಗೆ ಏನೂ ಕಾಣಿಸಲಿಲ್ಲ. ಆದರೆ ಅದೃಷ್ಟವಶಾತ್ ನನ್ನ ತಂಡಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ವಿಡಿಯೋದಲ್ಲಿ ವಿವರಿಸಿದ್ದಾರೆ.