ವಿವೇಕ ವಾರ್ತೆ : ಯುವತಿಯೋರ್ವಳು ಕೈಯಲ್ಲಿ ಗನ್ ಹಿಡಿದು ನಡುರಸ್ತೆಯಲ್ಲೇ ಹೈಡ್ರಾಮಾ ಸೃಷ್ಟಿಸಿದ ಘಟನೆ ನ್ಯೂಯಾರ್ಕ್ನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ನ್ಯೂಯಾರ್ಕ್ ಸಮೀಪದ ನಸ್ಸೌ ಕೌಂಟಿಯಲ್ಲಿ ಯುವತಿಯೋರ್ವಳು ಪಾದಚಾರಿ ಮಾರ್ಗದಲ್ಲಿ ಗನ್ ಹಿಡಿದು ಅವಾಂತರ ಸೃಷ್ಟಿಸಿದ್ದರು. ಇದರಿಂದಾಗಿ ಸ್ಥಳೀಯರು ಆತಂಕಗೊಂಡರು.
ಮೊದಲು ಆ ಯುವತಿ ಎದುರಿಗಿದ್ದವರ ಮೇಲೆ ಗನ್ ಗುರಿಯಿಟ್ಟಿದ್ದರು. ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿದ್ದಳು. ನಂತರ ಆಕೆ ತನ್ನ ತಲೆಗೆ ಗನ್ ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಬೆದರಿಕೆಯೊಡ್ಡಿದ್ದರು.
ಅಷ್ಟರಲ್ಲೇ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ವರ್ತಿಸಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಭಾರಿ ಅನಾಹುತ ತಪ್ಪಿಸಲು ಸಕಾಲದಲ್ಲಿ ಸ್ಪಂದಿಸಿದ ಪೊಲೀಸರಿಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಯುವತಿಯೋರ್ವಳು ಗನ್ ಹಿಡಿದು ರಸ್ತೆಯಲ್ಲಿ ಬೆದರಿಕೆ ಹಾಕುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ತಿಳಿದಿತ್ತು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಯುವತಿಗೆ ಎಚ್ಚರಿಕೆ ನೀಡಿದರು ಎಂದು ವರದಿಯಾಗಿದೆ.
ಅಷ್ಟೇ ಅಲ್ಲ ಯುವತಿಯ ಹೈಡ್ರಾಮಾದಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಕಿಲೋ ಮೀಟರ್ಗಳವರೆಗೆ ವಾಹನಗಳು ಸಾಲಿನಲ್ಲಿ ನಿಂತಿದ್ದವು.
ಇನ್ನು ಘಟನೆಯಲ್ಲಿ ಯುವತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ವಿಚಿತ್ರ ವರ್ತನೆ ಹಾಗೂ ಕಾರಣಗಳ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಈ ಘಟನೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗ್ತಿದ್ದು, ಪೊಲೀಸರ ಶೌರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
https://twitter.com/ViralNewsNYC/status/1691577013398560781?ref_src=twsrc%5Etfw%7Ctwcamp%5Etweetembed%7Ctwterm%5E1691577013398560781%7Ctwgr%5E1dbebe43cdf600f4b3973b6617a7bca5bd34f391%7Ctwcon%5Es1_c10&ref_url=https%3A%2F%2Fapi-news.dailyhunt.in%2F