ವಿವೇಕ ವಾರ್ತೆ : ಶಾರುಖ್ ಖಾನ್ ಜೊತೆ ಸ್ವದೇಸ್ ಚಿತ್ರದಲ್ಲಿ ಆ್ಯಕ್ಟ್ ಮಾಡಿದ್ದ ನಟಿ ಗಾಯತ್ರಿ ಜೋಶಿ ಅವರ ಕಾರು ಅಪಘಾತಕ್ಕೀಡಾಗಿದೆ. ಅಪಘಾತದ ವೇಳೆ ಗಾಯತ್ರಿ ಅವರ ಪತಿ ವಿಕಾಸ್ ಒಬೆರಾಯ್ ಕೂಡ ಜೊತೆಗಿದ್ದರು.
ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಹಲವಾರು ವಾಹನಗಳು ಏಕಕಾಲಕ್ಕೆ ಡಿಕ್ಕಿ ಹೊಡೆದವು. ಇವುಗಳಲ್ಲಿ ಗಾಯತ್ರಿ ಮತ್ತು ವಿಕಾಸ್ ಅವರ ಕಾರು ಕೂಡ ಇತ್ತು ಎಂದು ವರದಿಯಾಗಿದೆ.
ಸ್ವದೇಸ್ ಖ್ಯಾತಿಯ ಗಾಯತ್ರಿ ಜೋಶಿ ತಮ್ಮ ಪತಿ ವಿಕಾಸ್ ಒಬೆರಾಯ್ ಅವರೊಂದಿಗೆ ಇಟಲಿಯಲ್ಲಿದ್ದಾರೆ. ಅಲ್ಲಿ ಅವರ ಕಾರು ಅಪಘಾತಕ್ಕೀಡಾಯಿತು.
ಈ ಅಪಘಾತದಲ್ಲಿ ಗಾಯತ್ರಿ ಮತ್ತು ಅವರ ಪತಿ ಆರೋಗ್ಯವಾಗಿದ್ದಾರೆ, ಆದರೆ ಇನ್ನೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸ್ವಿಸ್ ದಂಪತಿಗಳು ಮೃತಪಟ್ಟಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.
ವರದಿಗಳ ಪ್ರಕಾರ, ಲ್ಯಾಂಬೋರ್ಗಿನಿ ಮತ್ತು ಸ್ವಿಸ್ ದಂಪತಿಗಳ ಫೆರಾರಿ ಏಕಕಾಲದಲ್ಲಿ ಕ್ಯಾಂಪರ್ ವ್ಯಾನ್ ಅನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಓವರ್ ಟೇಕ್ ಮಾಡುವ ಭರದಲ್ಲಿ ಕಾರುಗಳು ಡಿಕ್ಕಿ ಹೊಡೆದು ಫೆರಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ವ್ಯಾನ್ ಪಲ್ಟಿಯಾಗಿದೆ.
ಈ ಅಪಘಾತ ಸಾರ್ಡಿನಿಯಾ ಸೂಪರ್‌ಕಾರ್ ಪ್ರವಾಸದ ಸಮಯದಲ್ಲಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ಪ್ರವಾಸದಲ್ಲಿ, ಟೆಯುಲಾಡಾದಿಂದ ಓಲ್ಬಿಯಾದವರೆಗೆ ಐಷಾರಾಮಿ ಕಾರುಗಳ ಮೆರವಣಿಗೆ ನಡೆಯಿತು. ಇನ್ನು ಈ ಅಪಘಾತದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Two deaths on a Ferrari in Sardina, Italy pic.twitter.com/skT3CaXg0T
— Globe Clips (@globeclip) October 3, 2023