ವಿವೇಕ ವಾರ್ತೆ : ಯುವಕನೊಬ್ಬ ಲಾಡ್ಜ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತ ಯುವಕ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ನಿವಾಸಿ ಶಶಿಧರ್ ಎಂದು ತಿಳಿದುಬಂದಿದೆ.
ಈತ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿದ್ದನು. ಹೀಗಾಗಿ ಶಶಿಧರ್ ಮೇಲೆ ಬಾಲಕಿಯ ಪೋಷಕರು ಬಸವನ ಬಾಗೇವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಪೋಕ್ಸೋ ಕೇಸ್ ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಆರೋಪಿ ಶಶಿಧರ್ನನ್ನು ಬಂಧಿಸಲು ಮುಂದಾಗಿದ್ದರು.
ವಿಷಯ ತಿಳಿಯುತ್ತಿದ್ದಂತೆ ಬೆಂಗಳೂರಿಗೆ ಬಂದು ಶಶಿಧರ್ ತಲೆಮರೆಸಿಕೊಂಡಿದ್ದನು. ಆದರೆ ಮಂಗಳವಾರ ಇನ್ಸ್ಟಾಗ್ರಾಂನಲ್ಲಿ ನನ್ನ ಸಾವಿಗೆ ಬಾಲಕಿ ಅಪ್ಪ, ಅಮ್ಮ ಮತ್ತೆ ಅವರ ಚಿಕ್ಕಪ್ಪ, ಅವರಜ್ಜಿ ಕಾರಣ ಅಂತ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ನನ್ನ ಪತ್ನಿ, ಆಕೆಯ ತಂದೆ-ತಾಯಿ, ಚಿಕ್ಕಪ್ಪ, ಡೆಂಗಿ ಸಾಹುಕಾರ ಮತ್ತು ಅವರ ಸಮಾಜದವರು ಕೊಲೆ ಬೆದರಿಕೆ ಹಾಕಿದ್ದಾರೆ. ನನ್ನ ಸಾವಿಗೆ ಇವರೇ ಕಾರಣ.
ಆರು ವರ್ಷ ಪ್ರೀತಿ ಮಾಡಿ ನನ್ನ ಮದುವೆ ಆಗಿದ್ದಾಳೆ. ಆದ್ರೆ ಕಿರುಕುಳ ನೀಡಿ ಮದುವೆಯಾಗಿ ಅತ್ಯಾಚಾರ ಮಾಡಿದ್ದಾನೆ ಎಂದು ಕುಟುಂಬಸ್ಥರು ದೂರು ಕೊಡಿಸಿದ್ದಾರೆ. ಪೊಲೀಸರು ನನ್ನ ದೂರು ಸ್ವೀಕರಿಸುತ್ತಿಲ್ಲ. ನಮ್ಮಿಬ್ಬರ ಆರು ವರ್ಷದ ಪ್ರೀತಿಗೆ ನನ್ನ ಬಳಿ ಫೋಟೋ ಮತ್ತು ವಿಡಿಯೋಗಳಿವೆ. ಮದುವೆಯಾಗಿರುವ ಬಗ್ಗೆಯೂ ನನ್ನ ಬಳಿ ಫೋಟೋಗಳು ಇವೆ ಎಂದು ಶಶಿಧರ್ ಹೇಳಿದ್ದಾನೆ. ಇತ್ತ ಆಕೆ ಜೊತೆಗಿರುವ ನಗ್ನ ಚಿತ್ರಗಳನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಯುವತಿ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಸೇಡು ತೀರಿಸಿಕೊಳ್ಳಲು ಅಶ್ಲೀಲ ಪೊಟೋಗಳನ್ನು ವೈರಲ್ ಮಾಡಿ ಸೂಸೈಡ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಶಶಿಧರ 6 ವರ್ಷ ಹಿಂದೆ ಪ್ರೀತಿಸಿ ಯುವತಿ ಅಪ್ರಾಪ್ತೆಯಾಗಿದ್ದಾಗಲೇ ಮದುವೆಯಾಗಿದ್ದ . ಬಳಿಕ ಬೆಂಗಳೂರಿಗೆ ಕರೆದುಕೊಂಡು ಬಂದು ರೂಂ ಮಾಡಿಕೊಂಡಿದ್ದ. ಈ ನಡುವೆ ಯುವತಿ ಪೋಷಕರಿಂದ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಯುವತಿಯು ಸಹ ಶಶಿಧರ್ ಜೊತೆಗಿರಲು ವಿರೋಧಿಸಿದ್ದಳಂತೆ. ಇದರಿಂದ ಶಶಿಧರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಇನ್ನೂ ಶಶಿಧರ್ ರೂಮ್ನಿಂದ ಹೊರಗೆ ಬರದೇ ಇರೋದನ್ನು, ಗಮನಿಸಿದ ಸಿಬ್ಬಂದಿ ಅನುಮಾನಗೊಂಡು ಬಾಗಿಲು ತೆರೆದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ, ಶಶಿಧರ್ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.
ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.