ವಿವೇಕವಾರ್ತೆ : ಮನುಷ್ಯ ತನ್ನ ದೇಹದ ಈ ಮೂರು ಭಾಗಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ರೆ ಚರ್ಮದ ಶುಷ್ಕತೆ, ಬ್ಯಾಕ್ಟೀರಿಯಾದ ರಚನೆ ಮತ್ತು ಕೆಲವು ಗಂಭೀರವಾದ ಚರ್ಮದ ಸೋಂಕುಗಳಿಗೆ ಕಾರಣವಾಗಬಹುದು ಎಂದು ಚರ್ಮಶಾಸ್ತ್ರಜ್ಞರು ತಿಳಿಸುತ್ತಾರೆ.
ಹಾಗಾದ್ರೆ ದೇಹದ ಆ ಮೂರು ಭಾಗಗಳು ಯಾವುವು? ಅಂತ ತಿಳಿಯೋಣ ಬನ್ನಿ.
1) ಉಗುರುಗಳ ಒಳಗೆ :
ಕೆಲವರು ಉಗುರುಗಳ ಅಡಿಯಲ್ಲಿ ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ. ಉಗುರುಗಳ ಒಳಭಾಗದಲ್ಲಿರುವ ಕೊಳೆ ನೀವು ಸೇವಿಸುವ ಆಹಾರದ ಜೊತೆಗೆ ಹೊಟ್ಟೆಯನ್ನು ಸೇರಿ ಸಾಕಷ್ಟು ಆರೋಗ್ಯ ಸಮಸ್ಯೆಯನ್ನುಂಟು ಮಾಡಬಹುದು.
ಉಗುರು ಸ್ವಚ್ಛ ಮಾಡುವುದು ಹೇಗೆ.?
* ಕೊಳಕು ಮತ್ತು ಬ್ಯಾಕ್ಟೀರಿಯಾ ತೆಗೆದುಹಾಕಲು ಸರಿಯಾಗಿ ಸ್ಕ್ರಬ್ ಮಾಡಬೇಕು.
* ಉಗುರುಗಳ ಕೆಳಗೆ ಸರಿಯಾಗಿ ಸ್ವಚ್ಛಗೊಳಿಸಲು ಸೋಪ್ ಅನ್ನು ಸಹ ಬಳಸಬಹುದು.
2) ಕಿವಿಯ ಹಿಂಭಾಗ :
ಹೆಚ್ಚಿನ ಜನರು ಕಿವಿಯ ಹಿಂದೆ ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ ಎಂದು ಚರ್ಮರೋಗ ತಜ್ಞರು ಹೇಳುತ್ತಾರೆ. ಆದ್ದರಿಂದ ಕಿವಿಯ ಹಿಂದೆ ಬೆರಳಿಂದ ಉಜ್ಜಬೇಕು. ಬಳಿಕ ಬರುವ ವಾಸನೆಯನ್ನು ಗಮನಿಸಬೇಕು.
ಕಿವಿಗಳ ಹಿಂದೆ ತಲೆಹೊಟ್ಟು ಮತ್ತು ಚರ್ಮದ ಶುಷ್ಕತೆ ಸಾಮಾನ್ಯವಾಗಿರುತ್ತದೆ. ಕೆಲವೊಮ್ಮೆ ಕಿವಿಯ ಹಿಂದೆ ಬೆರಳನ್ನು ಉಜ್ಜಿದಾಗಲೂ ಬೆರಳಿನ ಮೇಲೆ ಕಪ್ಪು ತ್ಯಾಜ್ಯ ಸಂಗ್ರಹವಾಗುವುದನ್ನು ಗಮನಿಸಬಹುದು. ಆದ್ದರಿಂದ ಪ್ರತೀ ಸ್ನಾನದ ನಂತರ ಒದ್ದೆ ಟವೆಲ್ನಿಂದ ಕಿವಿಯ ಹಿಂಭಾಗದಲ್ಲಿ ಕೊಳೆ ನಿಲ್ಲದಂತೆ ಸ್ವಚ್ಛಗೊಳಿಸಬೇಕು.
3) ಹೊಕ್ಕುಳ :
ದೇಹದ ಕೊಳಕು ಮತ್ತು ಬೆವರು ಸಾಮಾನ್ಯವಾಗಿ ಹೊಕ್ಕುಳಲ್ಲಿ ಸಂಗ್ರಹವಾಗುತ್ತದೆ. ಹೊಕ್ಕುಳಲ್ಲಿ ಸುಮಾರು 67 ವಿಧದ ಬ್ಯಾಕ್ಟೀರಿಯಾಗಳಿರುತ್ತವೆ ಎಂದು ಸಂಶೋಧನೆಗಳು ಬಹಿರಂಗಪಡಿಸಿದೆ.
ನಾವು ತೊಡುವ ಬಟ್ಟೆಯಿಂದ ಹೊಕ್ಕಳು ಭಾಗ ಮರೆಯಾಗುತ್ತದೆ. ಇದರಿಂದಾಗಿ ಕೊಳೆ ಸಂಗ್ರಹವಾಗುವುದು ಕಡಿಮೆ, ಆದ್ದರಿಂದ ನೀವು ವಾರಕ್ಕೊಮ್ಮೆಯಾದರೂ ಹೊಕ್ಕಳನ್ನು ಸ್ವಚ್ಛಗೊಳಿಸಬೇಕಾಗುತ್ತದೆ.