ದಿನಕ್ಕೆ ಐದಾರು ಎಸಳು ಪುದೀನಾ ತಿಂದರೆ ಆಗುವ 10 ಆರೋಗ್ಯ ಪ್ರಯೋಜನಗಳು..!

Published on

spot_img
spot_img

ವಿವೇಕ ವಾಣಿ : ಆಯುರ್ವೇದ ಮತ್ತು ಮನೆ ಮದ್ದಿನಲ್ಲಿ ಪುದೀನ ಎಲೆಯನ್ನು ವಿಶೇಷವಾಗಿ ಬಳಸಲಾಗುವುದು. ಪುದೀನಾ ಸೊಪ್ಪು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಸಸ್ಯವಾಗಿದೆ. ಇದನ್ನು ವೈಜ್ಞಾನಿಕವಾಗಿ ಮೆಂಥಾ ಸ್ಪಿಕಾಟಾ ಎಂದು ಕರೆಯಲಾಗುತ್ತದೆ.

ಪುದೀನಾವನ್ನು ಇಂಗ್ಲಿಷ್‌ನಲ್ಲಿ ಸ್ಪಿಯರ್‌ಮಿಂಟ್ ಎಂದು ಕರೆಯಲಾಗುತ್ತದೆ. ಇದನ್ನು ಭಾರತೀಯ ಮತ್ತು ಇಟಾಲಿಯನ್ ಅಡುಗೆಗಳಲ್ಲಿ ಹೆಚ್ಚು ಬಳಸಲಾಗುತ್ತದೆ.

ಹಾಗಾದರೆ ದಿನವೂ ಐದಾರು ಎಸಳು ಪುದೀನಾವನ್ನು ಸೇವಿಸಿದರೆ ಆಗುವ ಪ್ರಯೋಜನಗಳೇನು ಅಂತ ತಿಳಿಯೋಣ ಬನ್ನಿ.

* ಪುದೀನಾ ಉತ್ತಮ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದೆ. ಪುದೀನಾ ಹೊಟ್ಟೆಯಿಂದ ತುಂಬಿದ ಗ್ಯಾಸ್​ ತೆಗೆದುಹಾಕುತ್ತದೆ.

* ಪುದೀನಾ ಸೊಪ್ಪಿನ ಪರಿಮಳದಿಂದಾಗಿ ಅಡುಗೆಗೆ ಹೊಸ ರುಚಿ ಬರುತ್ತದೆ. ಪಲಾವ್, ಬಿರಿಯಾನಿ, ಚಟ್ನಿ, ಸ್ಮೂಥಿ, ಜ್ಯೂಸ್ ಹೀಗೆ ಹಲವು ರೀತಿಯ ಅಡುಗೆಯಲ್ಲಿ ಪುದೀನಾವನ್ನು ಬಳಸಲಾಗುತ್ತದೆ.

* ಪುದೀನಾವನ್ನು ಸ್ನಾಯು ಸೆಳೆತವನ್ನು ನಿವಾರಿಸಲು ಬಳಸಲಾಗುತ್ತದೆ.

* ಪುದೀನಾವನ್ನು ತಿಂದರೆ ಮೂತ್ರ ವಿಸರ್ಜನೆ ಹೆಚ್ಚಾಗಿ, ಕಿಡ್ನಿ ಕ್ಲೀನ್ ಆಗುತ್ತದೆ.

* ಪುದೀನಾ ಸೇವಿಸುವುದರಿಂದ ಅಸ್ತಮಾದ ಲಕ್ಷಣಗಳು ಕಡಿಮೆಯಾಗುತ್ತವೆ.

* ಜ್ವರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಪುದೀನಾದ ಜ್ಯೂಸ್ ಮಾಡಿಕೊಂಡು ಕುಡಿದರೂ ಒಳ್ಳೆಯದು. ಪುದಿನಾ ಎಲೆಯ ಸಾರವು ರಕ್ತದಲ್ಲಿನ ಗ್ಲೂಕೋಸ್ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.

* ಜೀರ್ಣಕ್ರಿಯೆಯನ್ನು ಪುದೀನಾ ಸರಾಗಗೊಳಿಸುತ್ತದೆ. ಪುದೀನಾ ಕರುಳಿನಿಂದ ವಿಷವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.

* ಪುದೀನಾ ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದೆ. ಇದು ಆಂಟಿಫಂಗಲ್ ಆಗಿದ್ದು, ಅತಿಸಾರವನ್ನು ಕೂಡ ಕಡಿಮೆ ಮಾಡುತ್ತದೆ.

* ಪುದಿನಾದ ಒಣಗಿದ ಸಸ್ಯ ಮತ್ತು ಸಾರಭೂತ ತೈಲಗಳನ್ನು ಆಹಾರ, ಸೌಂದರ್ಯವರ್ಧಕ, ಮಿಠಾಯಿ, ಚೂಯಿಂಗ್ ಗಮ್, ಟೂತ್‌ಪೇಸ್ಟ್ ಮತ್ತು ಔಷಧಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!