ವಿವೇಕ ವಾರ್ತೆ : ಸ್ವಾಮಿಯೊಬ್ಬರು ತನ್ನ ಸಮಾಧಿಯನ್ನು ತಾನೇ ತೊಡಿಕೊಳ್ಳುತ್ತಿರುವ ವಿಚಿತ್ರ ಘಟನೆ ಉತ್ತರಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಜಾನಕಿ ಮಠದ ಮುಕುಂದ್ ಪುರಿ ಇದೀಗ ಸಮಾಧಿ ತೆಗೆದುಕೊಳ್ಳಲು ತಮ್ಮದೇ ಸಮಾಧಿಯನ್ನು ಅಗೆಯುತ್ತಿದ್ದಾರೆ. ಈ ಘಟನೆಯು ರಾಮಸಾನೆಹಿಘಾಟ್ ತಹಸಿಲ್ ಪ್ರದೇಶದ ಕಿತ್ತಯ್ಯ ಗ್ರಾಮಕ್ಕೆ ಸಂಬಂಧಿಸಿದಾಗಿದ್ದಾಗಿದೆ ಎನ್ನಲಾಗಿದೆ.
ರಾಮ್ ಜಾನಕಿ ಮಠದ ಜಾಗವನ್ನು ಕೆಲವರು ನಕಲಿ ಉಯಿಲು ಮಾಡಿ ಮಾರಿದ್ದಾರೆ. ಆದರೆ ಆ ಜಾಗ ಮಠಕ್ಕೆ ಸೇರಿದೆ ಎಂದು ಸ್ವಾಮಿಗಳು ಆರೋಪ ಮಾಡಿದ್ದಾರೆ.
ಈ ಬಗ್ಗೆ ಸ್ವಾಮಿಗಳು ಗೃಹ ಸಚಿವಾಲಯ, ಮುಖ್ಯಮಂತ್ರಿ ಪೋರ್ಟಲ್ ಸೇರಿದಂತೆ ಹಲವು ಅಧಿಕಾರಿಗಳಲ್ಲಿ ನ್ಯಾಯಕ್ಕಾಗಿ ಮನವಿ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಇಲ್ಲಿ ತನಕ ಯಾವುದೇ ಕ್ರಮ ಕೈಗೊಂಡಿಲ್ಲ. ಆಗಸ್ಟ್ 30ರೊಳಗೆ ಕ್ರಮ ಕೈಗೊಳ್ಳದಿದ್ದರೆ ಸೆಪ್ಟೆಂಬರ್ 1ರಂದು ಸಮಾಧಿಯಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.
ಶುಕ್ಲಾ ಗ್ರಾಮದ ನಿವಾಸಿಗಳಾದ ಸಂತೋಷ್ ಕುಮಾರ್ ಸಿಂಗ್, ಬಾಬಾ ಭಗತ್ ಸಿಂಗ್, ಉಮಾಶಂಕರ್ ಗೋಸ್ವಾಮಿ, ರಾಮಶಂಕರ್ ಗೋಸ್ವಾಮಿ, ಮಹಾವೀರ್ ಬಾರತಿ ಲಾಲ್ ಹೆಸರಿನಲ್ಲಿ ಭೂಮಿಯನ್ನು ನೋಂದಾಯಿಸಲಾಗಿದ್ದು, ಇದಕ್ಕಾಗಿ ಅಧಿಕಾರಿಗಳಿಗೆ ಹಣ ನೀಡಲಾಗಿದೆ ಎಂದು ಆರೋಪಿಸಿದ್ದಾರೆ ಎಂದು ವರದಿಯಾಗಿದೆ.