spot_img
spot_img
spot_img
spot_img
spot_img
spot_img

ತಪ್ಪು ದಿಕ್ಕು ತೋರಿಸಿದ ಜಿಪಿಎಸ್ : ನದಿಯಲ್ಲಿ ಕೊಚ್ಚಿ ಹೋದ ಕಾರು ; ವೈದ್ಯರಿಬ್ಬರು ಸಾವು.!

Published on

spot_img

ವಿವೇಕ ವಾರ್ತೆ : ಕಾರು ನದಿಗೆ ಬಿದ್ದು ಇಬ್ಬರು ವೈದ್ಯರು ಸಾವಿಗೀಡಾದ ಘಟನೆ ಕೇರಳ ರಾಜ್ಯದ ಎರ್ನಾಕುಲಂನ ಗೊತ್ತುರುತ್ ಪ್ರದೇಶದಲ್ಲಿ ನಡೆದಿದೆ. ಇನ್ನೂ ಕಾರಿನಲ್ಲಿದ್ದ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.

ಮೃತರು ಕೊಲ್ಲಂನ ಅದ್ವೈತ್ ಮತ್ತು ಕೊಡುಂಗಲ್ಲೂರಿನ ಅಜ್ಮಲ್ ಎಂದು ವರದಿಯಾಗಿದೆ. ಇಬ್ಬರೂ 28 ವರ್ಷ ವಯಸ್ಸಿನವರಾಗಿದ್ದು ಕೊಡುಂಗಲ್ಲೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.

ವೈದ್ಯ ಖಾಸಿಕ್ ಕಬೀರ್, ನರ್ಸಿಂಗ್ ವಿದ್ಯಾರ್ಥಿ ಜಿಸ್ಮನ್ ಮತ್ತು ಮೆಡಿಕಲ್ ವಿದ್ಯಾರ್ಥಿ ತಮನ್ನ ಅವರನ್ನು ರಕ್ಷಣೆ ಮಾಡಲಾಗಿದೆ. ಅವರ ಸ್ಥಿತಿ ಸಹಜವಾಗಿದೆ.

ಭಾರೀ ಮಳೆ ಮತ್ತು ಗೂಗಲ್ ಮ್ಯಾಪ್‌ ನಲ್ಲಿ ತಪ್ಪು ದಿಕ್ಕು ತೋರಿಸಿದ್ದು ಅಪಘಾತಕ್ಕೆ ಕಾರಣವಾಯಿತು. ಹೀಗಾಗಿ ಕಾರು ರಸ್ತೆಯಿಂದ ನದಿಗೆ ಧುಮುಕಿದೆ‌ ಎನ್ನಲಾಗಿದೆ.

ಘಟನೆಯ ಬಗ್ಗೆ ವಡಕ್ಕೇಕರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ತಿಳಿಸಿದ್ದು, ಕೊಚ್ಚಿಯಲ್ಲಿ ವೈದ್ಯ ಅದ್ವೈತ್ ಅವರ ಬರ್ತ್ ಡೇ ಪಾರ್ಟಿಯಲ್ಲಿ ಭಾಗವಹಿಸಿ ವಾಪಸ್ಸಾಗುತ್ತಿದ್ದರು. ಈ ವೇಳೆ ಎಡಕ್ಕೆ ತಿರುಗುವ ಬದಲು, ಅವರು ಗೂಗಲ್ ನಕ್ಷೆಗಳಲ್ಲಿನ ನಿರ್ದೇಶನಗಳನ್ನು ಆಧರಿಸಿ ಲೇಬರ್ ಜಂಕ್ಷನ್‌ ನಿಂದ ಬಲಕ್ಕೆ ತಿರುಗಿದರು. ಮಧ್ಯರಾತ್ರಿ 12.35 ರ ಸುಮಾರಿಗೆ ಜಲಾವೃತವಾದ ರಸ್ತೆ ಮೇಲೆ ನಾವಿದ್ದೇವೆ ಎಂಬ ಅನಿಸಿಕೆ ಅವರಲ್ಲಿತ್ತು. ನೇರವಾಗಿ ದೇವಸ್ಥಾನದ ದೀಪಗಳನ್ನು ನೋಡಿದ್ದರಿಂದ ಅದು ರಸ್ತೆಯೇ ಎಂದು ಅವರು ತಿಳಿದು ಕಾರನ್ನು ಎದುರು ಚಲಾಯಿಸಿದರು. ಆದರೆ ವಾಸ್ತವವಾಗಿ ದೇವಾಲಯವು ನದಿಯ ಇನ್ನೊಂದು ಬದಿಯಲ್ಲಿತ್ತು ಎಂದು ತಿಳಿಸಿದ್ದಾರೆ.

ಕಾರು ನೀರಿಗೆ ಬೀಳುವುದನ್ನು ಕಂಡ ಸ್ಥಳೀಯರು ಕೂಡಲೇ ಮೂವರನ್ನು ರಕ್ಷಣೆ ಮಾಡಿದ್ದಾರೆ. ಆದರೆ ಇಬ್ಬರು ವೈದ್ಯರು ಕೊಚ್ಚಿ ಹೋಗಿದ್ದರಿಂದ ಅವರನ್ನು ರಕ್ಷಿಸಲು ಆಗಲಿಲ್ಲ. ಅಗ್ನಿ ಶಾಮಕ ದಳದವರು ಬಂದು ಇಬ್ಬರ ಮೃತದೇಹ ಹೊರತೆಗೆದರು ಎಂದು ವರದಿಯಿಂದ ತಿಳಿದುಬಂದಿದೆ.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!