ವಿವೇಕವಾರ್ತೆ : ಪ್ರಾಣಿಗಳ ಕುರಿತು ಈಗಾಗಲೇ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವುಗಳಲ್ಲಿ ಅನೇಕ ವಿಡಿಯೋಗಳು ಸಂಚಲನವನ್ನೇ ಉಂಟುಮಾಡಿವೆ. ಇನ್ನು ಕೆಲವು ವಿಡಿಯೋಗಳು ಭಾವನಾತ್ಮಕವಾಗಿ ನಮ್ಮನ್ನು ಮತ್ತೊಂದು ಲೋಕಕ್ಕೆ ಕರೆದ್ದೊಯ್ಯೂತ್ತವೆ
ಸಾಮಾಜಿಕ ಜಾಲತಾಣದಲ್ಲಿ ಸದ್ಯ ನರಿ ಮತ್ತು ಹೆಬ್ಬಾವಿನ ವಿಡಿಯೋ ಒಂದು ನೆಟ್ಟಿಗರಿಗೆ ಬಾಯ್ತೆರೆದು ನೋಡುವಂತೆ ಮಾಡಿದೆ.
ವೈರಲ್ ಆಗಿರೋ ಆ ವಿಡಿಯೋದಲ್ಲಿ ಗುಜರಾತಿನ ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ನರಿ ಮತ್ತು ಹೆಬ್ಬಾವಿನ ನಡುವೆ ನಡೆದ ಭೀಕರ ಕಾಳಗದ ವಿಡಿಯೋ ಇದೀಗ ಸಾಕಷ್ಟು ಶೇರ್ ಆಗುತ್ತಿದೆ.
ವಿಡಿಯೋದಲ್ಲಿ ದೈತ್ಯ ಹೆಬ್ಬಾವಿನ ಬಿಗಿ ಹಿಡಿತದಿಂದ ಹೇಗಾದರು ಮಾಡಿ ತನ್ನ ಗೆಳೆಯನ್ನು ಕಾಪಾಡಬೇಕು ಎನ್ನುವ ನರಿಯ ಹಠ ನೋಡುಗರ ಎದೆ ಝಲ್ ಎನಿಸುವಂತಿದೆ. ಹೆಬ್ಬಾವು ನರಿಯ ಉಗ್ರ ದಾಳಿಗೆ ಪ್ರತಿಯಾಗಿ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿತು. ಅಪಾಯದ ನಡುವೆಯೂ ತನ್ನ ಗೆಳೆಯನನ್ನು ಬಿಟ್ಟು ಹಿಂದೆ ಸರಿಯಲಿಲ್ಲ. ಅದೃಷ್ಟವಶಾತ್, ಕೊನೆಯಲ್ಲಿ, ಹೆಬ್ಬಾವು ನರಿಯಿಂದ ತಪ್ಪಿಸಿಕೊಳ್ಳುತ್ತದೆ, ನರಿ ರೋಚಕ ಯುದ್ಧದಲ್ಲಿ ಗೆಲ್ಲುತ್ತದೆ.
KalingaTV24X7 ಎಂಬ ಇನ್ಸ್ಟ್ರಾಂಮ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇನ್ನು, ”ಕ್ಯಾಮರಾದಲ್ಲಿ ಸೆರೆಹಿಡಿದ ಹೃದಯವನ್ನು ನಿಲ್ಲಿಸುವ ದೃಶ್ಯದಲ್ಲಿ, ಧೈರ್ಯಶಾಲಿ ನರಿಯೊಂದು ಗಿರ್ ಅರಣ್ಯದಲ್ಲಿ ಹೆಬ್ಬಾವಿನ ವಿರುದ್ಧ ವೀರಾವೇಶದಿಂದ ಹೋರಾಡುತ್ತಿರುವಾಗ ಗಮನಾರ್ಹವಾದ ಶೌರ್ಯವನ್ನು ಪ್ರದರ್ಶಿಸಿತು. ಹೆಬ್ಬಾವಿನ ಪ್ರಬಲ ಹಿಡಿತಕ್ಕೆ ಬಲಿಯಾದ ತನ್ನ ಸಹಚರನನ್ನು ರಕ್ಷಿಸಲು ನರಿ ಹತಾಶವಾಗಿ ಹೋರಾಡಿದ ಘಟನೆ ಬಯಲಾಯಿತು”. ಎಂದು ಬರೆದುಕೊಂಡಿದ್ದಾರೆ.
https://www.instagram.com/reel/CwCfLW2AzAq/?utm_source=ig_web_copy_link