ಡಾನ್ಸ್ ಮಾಡುತ್ತಲೇ ಕುಸಿದು ಬಿದ್ದು ಮಗನ ಸಾವು : ಶಾಕ್ ನಿಂದ ತಂದೆ ಸ್ಥಳದಲ್ಲೇ ನಿಧನ

Published on

spot_img
spot_img

ನವರಾತ್ರಿ ಹಬ್ಬದ ಆಚರಣೆಯಲ್ಲಿ ಗರ್ಬಾ ನೃತ್ಯಕ್ಕೆ ವಿಶೇಷ ಮಹತ್ವವಿದೆ. ಗರ್ಬಾ ಗುಜರಾತ್ ಸಂಸ್ಕೃತಿಯಾದರೂ ದೇಶದ ಹಲವು ರಾಜ್ಯಗಳಲ್ಲಿ ಗರ್ಬಾ ನೃತ್ಯದ ಮೂಲಕ ನವರಾತ್ರಿ ಆಚರಣೆ ಮಾಡಲಾಗುತ್ತದೆ. ಹೀಗೆ ಮುಂಬೈನ ಪಲ್ಗಾರ್ ಜಿಲ್ಲೆಯ ವಿರಾರ್‌ನಲ್ಲಿ ರಾತ್ರಿ ಆಯೋಜಿಸಿದ ಗರ್ಬಾ ನೃತ್ಯದಲ್ಲಿ ಪಾಲ್ಗೊಂಡ 35 ಹರೆಯದ ಮನೀಶ್ ನರಾಪ್ಜಿ ಸೋನಗ್ರ ಡ್ಯಾನ್ಸ್ ಮಾಡುತ್ತಲೇ ಕುಸಿದು ಬಿದ್ದಿದ್ದಾನೆ.

ತಕ್ಷಣೆ ಕಾರ್ಯಪ್ರವೃತ್ತರಾದ ಮನೀಶ್ ತಂದೆ, ಮಗನನ್ನು ಆಸ್ಪತ್ರೆ ದಾಖಲಿಸಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಕೆಲ ಹೊತ್ತಿನ ಬಳಿ ನಿಮ್ಮ ಮಗ ಬದುಕುಳಿಯಿಲ್ಲ ಎಂದು ತಂದೆಗೆ ಹೇಳಿದ್ದಾರೆ. ಈ ಸುದ್ದಿ ಕೇಳಿದ ತಂದೆ ಸ್ಥಳದಲ್ಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮನೀಶ್ ಕುಟುಂಬಕ್ಕೆ ಸಂಭ್ರಮ ತರಬೇಕಿದ್ದ ನವರಾತ್ರಿ ಈ ಬಾರಿ ಬರಸಿಡಿಲಿನಂತೆ ಎರಗಿದೆ.

ಮುಂಬೈನ ವಿರಾರ್ ಗ್ಲೋಬಲ್ ಸಿಟಿ ಕಾಂಪ್ಲೆಕ್ಸ್‌ನಲ್ಲಿ ನವರಾತ್ರಿ ಹಬ್ಬದ(navratri Festival) ಪ್ರಯುಕ್ತ ಗರ್ಬಾ ನೃತ್ಯ(garba dance) ಆಯೋಜಿಸಲಾಗಿತ್ತು. ಶನಿವಾರ ಹಾಗೂ ಭಾನುವಾರ ರಾತ್ರಿ ಗರ್ಬಾ ನೃತ್ಯ ಆಯೋಜಿಸಲಾಗಿತ್ತು. ಭಾನುವಾರ ರಾತ್ರಿ ಮನೀಶ್ ತನ್ನು ಕುಟುಂಬದ ಜೊತೆ ಗರ್ಬಾ ನೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಆರಂಭದಲ್ಲಿ ನೃತ್ಯ ಮಾಡಿ ಕೆಲ ಹೊತ್ತು ವಿಶ್ರಾಂತಿ ಪಡೆದ ಮನೀಶ್, ಸುಧಾರಿಸಿಕೊಂಡು ಮತ್ತೆ ಗರ್ಬಾ ನೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಇತ್ತ ಮನೀಶ್ ಕುಟುಂಬ ಕೂಡ ನೃತ್ಯದಲ್ಲಿ ಪಾಲ್ಗೊಂಡು ನವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದೆ.

ಮನೀಶ್ ನೃತ್ಯ ಮಾಡುತ್ತಲೇ ಅಸ್ವಸ್ಥರಾಗಿದ್ದಾರೆ. ಆದರೆ ನೃತ್ಯದ ನಡುವೆ ಯಾರೂ ಮನೀಶ್ ಗಮನಿಸಲಿಲ್ಲ. ಕೆಲ ಹೊತ್ತಲ್ಲೇ ತೀವ್ರ ಅಸ್ವಸ್ಥಗೊಂಡ ಮನೀಶ್ ನೃತ್ಯ ಮಾಡುತ್ತದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಮನೀಶ್ ಎಬ್ಬಿಸಲು ಕೆಲವರು ಯತ್ನಿಸಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮನೀಶ್ ತಂದೆಗೆ ಪರಿಸ್ಥಿತಿಯ ಗಂಭೀರತೆ ಅರಿವಾಗಿದೆ. ಹೀಗಾಗಿ ತಡಮಮಾಡದೇ ಪುತ್ರನನ್ನು ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ.

ತುರ್ತು ಚಿಕಿತ್ಸಾ ಘಟಕ್ಕೆ ದಾಖಲಿಸಿದ ತಂದೆ ಚಿಂತಾಕ್ರಾಂತರಾಗಿದ್ದರು. ಇತ್ತ ಮನೀಶ್ ತಪಾಸಣೆ ನಡೆಸಿದ ವೈದ್ಯರು ಆಸ್ಪತ್ರೆ ದಾಖಲಿಸುವ ಮುನ್ನವೇ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಈ ಮಾಹಿತಿಯನ್ನು ಮನೀಶ್ ತಂದೆಗೆ ಆಸ್ಪತ್ರೆ ಸಿಬ್ಬಂಧಿಗಳು ನೀಡಿದ್ದಾರೆ. ಆಸ್ಪತ್ರೆ ಆವರಣದಲ್ಲಿ ನಿಂತಿದ್ದ ಮನೀಶ್ ತಂದೆಗೆ ಆಘಾತವಾಗಿದೆ. ಮಗನ ಸಾವಿನ ಸುದ್ದಿ ಕೇಳಿದ ತಂದೆ ಶಾಕ್‌ನಿಂದ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ತುರ್ತು ಚಿಕಿತ್ಸಾ ಘಟಕದ ಮುಂದೆ ಕುಸಿದ ಬಿದ್ದ ತಂದೆಯ ನೆರವಿಗೆ ವೈದ್ಯರು ಧಾವಿಸಿದ್ದಾರೆ. ಆದರೆ ಅಷ್ಟರಲ್ಲೇ ಮನೀಶ್ ತಂದೆಯ ಪ್ರಾಣ ಪಕ್ಷಿಯೂ ಹಾರಿಹೋಗಿದೆ. ಮಗನ ಬದುಕಿಸಲು ಮಿಂಚಿನಂತೆ ಕಾರ್ಯಪ್ರವೃತ್ತಿಸಿದ ತಂದೆಯೂ ನಿಧನರಾಗಿದ್ದಾರೆ. ಇಬ್ಬರ ಸಾವಿನ ಸುದ್ದಿ ಕೇಳಿದ ಮನೀಶ್ ಕುಟುಂಬ ಆಘಾತದಿಂದ ಇನ್ನೂ ಹೊರಬಂದಿಲ್ಲ. ವಿರಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕಸ್ಮಿಕ ಸಾವು ಎಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.

ಗುಜರಾತ್‌ನಲ್ಲಿ 21 ವರ್ಷದ ಯುವಕ ಸಾವು
ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ಗರ್ಬಾ ನೃತ್ಯ ಮಾಡುತ್ತಿದ್ದ 21 ವರ್ಷದ ಯುವಕ ಇದೇ ರೀತಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಯುವಕನ ಸ್ನೇಹಿತರು ವಿಡೀಯೋ ಮಾಡುತ್ತಿದ್ದಂತೆ ಯುವಕ ಕುಸಿದು ಬಿದ್ದಿದ್ದಾನೆ. ತಕ್ಷಣೇ ಆಸ್ಪತ್ರೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!