ವಿವೇಕವಾರ್ತೆ : ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನ NMS ಬಡಾವಣೆಯಲ್ಲಿ ಟಿವಿ ರಿಮೋಟ್ ವಿಚಾರಕ್ಕೆ ಇಬ್ಬರು ಮಕ್ಕಳ ನಡುವೆ ಜಗಳ ನಡೆದಿದ್ದು, ಇದರಿಂದ ಕೋಪಗೊಂಡ ತಂದೆ ಮಗನನ್ನು ಕೊಲೆ ಮಾಡಿದ ಘಟನೆ ನಡೆದಿದೆ.
ಕೊಲೆಯಾದ ಬಾಲಕ ಚಂದ್ರಶೇಖರ್ (16) ಎಂದು ತಿಳಿದುಬಂದಿದ್ದು, ತಂದೆ ಲಕ್ಷ್ಮಣ ಬಾಬು ಎಂಬಾತ ಕೊಲೆ ಮಾಡಿದ್ದಾನೆ.
ಅಣ್ಣ-ತಮ್ಮ ಟಿವಿ ರಿಮೋಟ್ ಗಾಗಿ ಗಲಾಟೆ ಮಾಡುತ್ತಿದ್ದರು. ಈ ವೇಳೆ ತಂದೆ ಕೋಪಗೊಂಡು ಕತ್ತರಿಯಿಂದ ಮಗನಿಗೆ ಹೊಡೆದಿದ್ದಾರೆ.
ಕಿವಿ ಭಾಗದಲ್ಲಿ ತೀವ್ರ ರಕ್ತಸ್ರಾವವಾಗಿ ಬಾಲಕ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಪಿಎಸ್‌ಐ ಪಾಂಡುರಂಗ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.