ವಿವೇಕ ವಾರ್ತೆ : ಹಾಸನ (Hassan) ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಕುಣಿಕೇರಿ ಗ್ರಾಮದಲ್ಲಿ ಜೋಕಾಲಿ ಆಡಲು ಹೋಗಿ ಬಾಲಕಿ (Girl) ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.
ಜೋಕಾಲಿ ಆಡಲು ಹೋಗಿ ಸಾವಿಗೀಡಾದ ದುರ್ದೈವಿ ಬಾಲಕಿಯನ್ನು ಬಸವರಾಜು ಬೇಬಿ ದಂಪತಿಯ ಪುತ್ರಿ ಸಾನಿತ (9) ಎಂದು ಗುರುತಿಸಲಾಗಿದೆ.
ಸಾನಿತ ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.
ಪಾಲಕರು ಆಟವಾಡಲೆಂದು ಮನೆಯ ಒಳಗೆ ಸೀರೆಯಲ್ಲಿ (Sarry) ಜೋಕಾಲಿ ಕಟ್ಟಿದ್ದರು. ಜೋಕಾಲಿ ಆಡುವ ಸಂದರ್ಭದಲ್ಲಿ ಆಯತಪ್ಪಿ ಕುತ್ತಿಗಿಗೆ ಸೀರೆ ಬಿಗಿದು ಬಾಲಕಿ ಸಾನಿತ ಸಾವನ್ನಪ್ಪಿದ್ದಾಳೆ.
ಇನ್ನು ಮುದ್ದಿನ ಮಗಳ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಯಸಳೂರು (Yeslur) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.