ವಿವೇಕ ವಾರ್ತೆ : ದಾವಣಗೆರೆ ನಗರದ ಉಪಕಾರಾಗೃಹದಲ್ಲಿ
ಅತ್ಯಾಚಾರ ಪ್ರಕರಣದ ಆರೋಪಿ ಜೈಲಿನಿಂದ ಪರಾರಿಯಾದ ಘಟನೆ ಶನಿವಾರ ನಡೆದಿದೆ.
ಪರಾರಿಯಾದ ಆರೋಪಿ ವಸಂತ್ (23) ಎಂದು ತಿಳಿದುಬಂದಿದೆ. ಈತ ಕಾರಾಗೃಹದ ಗೋಡೆಯನ್ನು ಹಾರಿ ಎಸ್ಕೇಪ್ ಆಗಿದ್ದಾನೆ.
ಪರಾರಿಯಾಗಿರುವ ವಸಂತ್ ದಾವಣಗೆರೆ ನಗರದ ಹೊರವಲಯದ ಕೂರರ್ ಪ್ರದೇಶದ ನಿವಾಸಿಯಾಗಿದ್ದಾನೆ. ಈ ಆಟೋ ಚಾಲಕನಾಗಿದ್ದಾನೆ. ಕಳೆದ ಎರಡು ದಿನಗಳ ಹಿಂದೆ ಈತನ ವಿರುದ್ಧ ದಾವಣಗೆರೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.
ಅತ್ಯಾಚಾರ ಆರೋಪ ಎದುರಿಸುತ್ತಿದ್ದ ವಸಂತ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು ಮಹಿಳಾ ಪೊಲೀಸ್ ಠಾಣೆ ಪೊಲೀಸರು. ಆದರೆ, ದಾವಣಗೆರೆ ಉಪ ಕಾರಾಗೃಹದಲ್ಲಿದ್ದ ಆರೋಪಿ ಗೋಡೆಯನ್ನು ಹಾರಿ ಪರಾರಿಯಾಗಿದ್ದಾನೆ. ಈ ವೇಳೆ, ಆತನ ಕಾಲಿಗೆ ಪೆಟ್ಟಾಗಿದ್ದರೂ ಲೆಕ್ಕಿಸದೇ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ.
ಆರೋಪಿ ಪರಾರಿಯಾದ ಕೆಲವು ಗಂಟೆಗಳ ಬಳಿಕ ಪೊಲೀಸರಿಗೆ ಗೊತ್ತಾಗಿದೆ. ಕೂಡಲೇ ಜೈಲು ಸಿಬ್ಬಂದಿ ಬಸವನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಸ್ಕೇಪ್ ಆಗಿರುವ ಅತ್ಯಾಚಾರ ಆರೋಪಿಯನ್ನು ಪೊಲೀಸರು ಹುಡುಕುತ್ತಿದ್ದಾರೆ.