ವಿವೇಕ ವಾರ್ತೆ : ಜಲಪಾತ ನೋಡಲು ಹೋಗಿದ್ದ ಯುವಕನೋರ್ವ ಕಾಲು ಜಾರಿ ನೀರಿಗೆ ಬಿದ್ದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಕೊಲ್ಲೂರು ಸಮೀಪದ ಅರಶಿಣ ಗುಂಡಿ ನಡೆದಿದೆ.
ನೀರಿಗೆ ಬಿದ್ದ ಯುವಕ ಭದ್ರಾವತಿ ಮೂಲದ ಶರತ್ ಕುಮಾರ್ (23) ಎಂದು ತಿಳಿದುಬಂದಿದೆ.
ಶರತ್, ಸ್ನೇಹಿತನೊಂದಿಗೆ ಕೊಲ್ಲೂರಿಗೆ ಬಂದಿದ್ದ ವೇಳೆ ಅರಶಿನಗುಂಡಿ ಜಲಪಾತಕ್ಕೆ ನೋಡಲು ತೆರಳಿದ್ದರು. ಈ ವೇಳೆ ಬಂಡೆಕಲ್ಲಿನ ಮೇಲೆ ನಿಂತು ಫೋಟೋಶೂಟ್ ಮಾಡುತ್ತಿದ್ದ ವೇಳೆ ಜಾರಿಗೆ ಕೆಳಗೆ ಬಿದ್ದಿದ್ದಾರೆ.
ಇದನ್ನು ಕಂಡ ಸ್ನೇಹಿತ ಕೂಡಲೇ ಸಮೀಪದ ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ, ಅಗ್ನಿಶಾಮಕ ದಳ ಸಿಬ್ಬಂದಿ, ಸ್ಥಳೀಯರ ಸಹಕಾರದಿಂದ ಶರತನಿಗಾಗಿ ಹುಡುಕಿದರೂ ಇದುವರೆಗೆ ಪತ್ತೆಯಾಗಿಲ್ಲ.
ಇನ್ನು ಶರತ್ ಕೆಳಗೆ ಬೀಳುತ್ತಿರುವ ದೃಶ್ಯವು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ವೈರಲ್ ಆಗುತ್ತಿದೆ.
https://twitter.com/KannadaPrabha/status/1683386111924789248?ref_src=twsrc%5Etfw%7Ctwcamp%5Etweetembed%7Ctwterm%5E1683386111924789248%7Ctwgr%5E8da6b3430f9feda41be4899631ee59994152c37d%7Ctwcon%5Es1_c10&ref_url=https%3A%2F%2Fapi-news.dailyhunt.in%2F