ವಿವೇಕವಾರ್ತೆ : ಸಾಸಿವೆಯನ್ನು ಅಡುಗೆಗೆ ಬಳಸುತ್ತಾರೆ. ಇದು ಅಡುಗೆಯ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುತ್ತದೆ. ಇದು ಆರೋಗ್ಯಕ್ಕೂ ತುಂಬಾ ಉತ್ತಮ. ಹಾಗೇ ಈ ಸಾಸಿವೆಯನ್ನು ಬಳಸಿ ನಿಮ್ಮ ವ್ಯಾಪಾರದಲ್ಲಾಗುವ ಸಮಸ್ಯೆಯನ್ನು ನಿವಾರಿಸಬಹುದು.
ನಿಮಗಿರುವ ತೊಂದರೆಗಳು ನಿವಾರಣೆಯಾಗಲು ಹೂಜಿಯಲ್ಲಿ ನೀರನ್ನು ತುಂಬಿಸಿ ಅದಕ್ಕೆ ಕೆಲವು ಸಸಿವೆಕಾಳನ್ನು ಹಾಕಿ ಶನಿವಾರದಂದು ಸ್ನಾನ ಮಾಡಿ.ಇದರಿಂದ ರೋಗಗಳು ನಿವಾರಣೆಯಾಗುತ್ತದೆ.
-ನಿಮ್ಮಅಂಗಡಿಯಲ್ಲಿ ವ್ಯಾಪಾರ ಉತ್ತಮವಾಗಿ ನಡೆಯಲು ಕೆಲವು ಸಾಸಿವೆ ಕಾಳುಗಳನ್ನು ಕಪ್ಪು ಎಳ್ಳು ಮತ್ತು ಕೊತ್ತಂಬರಿ ಕಾಳಿನೊಂದಿಗೆ ಪಾತ್ರೆಯಲ್ಲಿ ಹಾಕಿ ಅಂಗಡಿಯಲ್ಲಿ ಇರಿಸಿ. ಇದರಿಂದ ನಿಮ್ಮ ಅಂಗಡಿಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗತೊಡಗುತ್ತದೆ.
-ದೃಷ್ಟಿ ಸಮಸ್ಯೆಯನ್ನು ನಿವಾರಿಸಲು ಮಾವಿನ ಮರದ ತುಂಡಿಗೆ ಬೆಂಕಿ ಹಚ್ಚಿ, ಸಾಸಿವೆ, ಕೆಂಪು ಮೆಣಸಿನ ಕಾಯಿ ಮತ್ತು ಉಪ್ಪನ್ನು ಎಡಗೈಯಲ್ಲಿ ತೆಗೆದುಕೊಂಡು ತಲೆಯ ಮೇಲೆ 7 ಬಾರಿ ಸುತ್ತಿಸಿ ಬೆಂಕಿಯಲ್ಲಿ ಹಾಕಿ.
-ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಲು ಶುಕ್ಲಪಕ್ಷದ ಮೊದಲ ಶನಿವಾರ ರಾತ್ರಿ ಬಲಗೈಯಲ್ಲಿ ಸಾಸಿವೆಯನ್ನು ಹಿಡಿದು ಅದನ್ನು ಎಡಗೈಗೆ ಎಸೆದು ನಂತರ ಪೂರ್ವದಿಕ್ಕಿಗೆ ಎಸೆಯಿರಿ. ನಂತರ ಮನೆಯೊಳಗೆ ಎರಡು ಮುಖದ ದೀಪವನ್ನು ಬೆಳಗಿಸಿ.
ಇದನ್ನು ವಿವೇಕವಾರ್ತೆ ಧೃಡಿಕರಿಸುವುದಿಲ್ಲ, ಅಂತರ್ಜಲದಲ್ಲಿ ಸಿಕ್ಕ ಮಾಹಿತಿಯ ಮೇರೆಗೆ ಈ ಅಂಕಣ ಹಾಕಲಾಗಿದೆ