spot_img
spot_img
spot_img
spot_img
spot_img
spot_img

ಚಲಿಸುವ ಬೈಕ್‌ನಲ್ಲೇ ರೊಮಾನ್ಸ್ : ವಿಡಿಯೋ ವೈರಲ್‌ ; ಮುಂದೆನಾಯ್ತು.?

Published on

spot_img

ವಿವೇಕವಾರ್ತೆ : ದಿನ ಕಳೆದಂತೆ ಚಲಿಸುವ ಬೈಕ್‌ನಲ್ಲೇಯೇ ರೊಮಾನ್ಸ್‌ ಮಾಡುವ ಪ್ರೇಮಿಗಳು ಹೆಚ್ಚಾಗುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಪೊಲೀಸರು ದಂಡವನ್ನೂ ಕಟ್ಟಿದರೂ ಸಹ ಇಂತಹ ಪ್ರಕರಣಗಳು ನಿಯಂತ್ರಣಕ್ಕೆ ಬರದಿರುವುದು ಮಾತ್ರ ದುರ್ದೈವ.

ಇದೀಗ ಅಂತಹದ್ದೇ ವಿಡಿಯೋ ಒಂದು ವೈರಲ್‌ ಆಗಿದ್ದು, ನೆಟ್ಟಿಗರು ಎಂದಿನಂತೆ ಮತ್ತೇ ಕೆಂಡ ಕಾರಿದ್ದಾರೆ. ಇಲ್ಲೋಬ್ಬ ಯುವಕ ಹೀರೊ ರೀತಿ ಫೋಸ್‌ ಕೊಟ್ಟ ದಂಡ ಕಟ್ಟಿದ್ದಾನೆ.‌

ಘಟನೆ ಉತ್ತರ ಪ್ರದೇಶದ ಹಾಪುರದಲ್ಲಿ ನಡೆದಿದ್ದು, ಯುವಕನೊಬ್ಬ ರಸ್ತೆಯಲ್ಲಿ ಬೈಕ್‌ ಓಡಿಸುತ್ತಿದ್ದಾನೆ,. ಆತನ ಪ್ರೇಯಸಿ ಆಚೆ-ಈಚೆ ಕಾಲು ಹಾಕಿ ಟ್ಯಾಂಕ್‌ ಮೇಲೆ ಆತನ ಎದುರಿಗೇ ಕುಳಿತಿದ್ದಾಳೆ.

ರಾಷ್ಟ್ರೀಯ ಹೆದ್ದಾರಿ 9ರಲ್ಲಿ ಯುವಕ ಬೈಕ್‌ ಓಡಿಸುತ್ತಲೇ ಪ್ರೇಯಸಿಯನ್ನು ಮುದ್ದು ಮಾಡುತ್ತಿರುವ ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಲವ್‌ಸ್ಟೋರಿಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ಈ ಪ್ರೇಮಿಗೆ ಮೋಟರ್‌ ವೆಹಿಕಲ್‌ ಆ್ಯಕ್ಟ್‌ ಪ್ರಕಾರ ಪೊಲೀಸರು 8 ಸಾವಿರ ರೂ. ದಂಡ ವಿಧಿಸಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಹಾಪುರ್‌ ಪೊಲೀಸರು “ಎಕ್ಸ್‌” ಮೂಲಕ ತಿಳಿಸಿದ್ದಾರೆ.

ವೈರಲ್‌ ಆಗಿರೋ ಈ ವಿಡಿಯೋ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಮಧ್ಯೆ ಅಪಾಯಕಾರಿ ಸಾಹಸ ಪ್ರದರ್ಶಿಸಿದ ಜೋಡಿಯನ್ನು ಹಲವರು ಕಮೆಂಟ್‌ ಮೂಲಕ ಝಾಡಿಸಿದ್ದಾರೆ. ಹುಚ್ಚು ಪ್ರೇಮಿಗಳ ವಿಡಿಯೋ ನೋಡಿದ ಓರ್ವ ನೆಟಿಗ, ʼʼಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಹುಚ್ಚು ಸಾಹಸ ಪ್ರದರ್ಶಿಸುವವರಿಗೆ ತಕ್ಕ ಶಿಕ್ಷೆಯಾಬೇಕು ಎಂದಿದ್ದಾರೆ.

ಹೆದ್ದಾರಿ ʼʼಇಂತಹ ಮೂರ್ಖರ ಕಾರಣದಿಂದ ಇತರ ಪ್ರಯಾಣಿಕರ ಜೀವನವೂ ಅಪಾಯಕ್ಕೀಡಾಗುತ್ತದೆ. ಇಂತಹವರ ಚಾಲನಾ ಪರವಾನಗಿ ರದ್ದು ಪಡಿಸಬೇಕುʼʼ ಎಂದು ಒಬ್ಬರು ಹೇಳಿದ್ದಾರೆ. ʼʼಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಹುಚ್ಚು ಸಾಹಸ ಪ್ರದರ್ಶಿಸುವವರಿಗೆ ತಕ್ಕ ಶಿಕ್ಷೆಯಾಬೇಕುʼʼ ಎಂದು ಇನ್ನೊಬ್ಬರು ಆಗ್ರಹಿಸಿದ್ದಾರೆ.

“ಜೈ ಹೋ. ಉತ್ತರ ಪ್ರದೇಶ ಪೊಲೀಸರು ಮಾಡಿದ ಶ್ಲಾಘನೀಯ ಕೆಲಸಕ್ಕೆ ಅಭಿನಂದನೆಗಳು ಮತ್ತು ಧನ್ಯವಾದಗಳು” ಎಂದು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ʼʼಉತ್ತಮ ಕೆಲಸದಿಂದ ಹಾಪುರ್‌ ಪೊಲೀಸರು ನಮ್ಮ ಹೃದಯ ಗೆದ್ದಿದ್ದಾರೆʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ. (ಏಜೇನ್ಸಿಸ್)

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!