Wednesday, September 27, 2023

ಚಂದ್ರಯಾನ-3 ಯಶಸ್ವಿ ಉಡಾವಣೆಗೆ ಹರ್ಷ

ವಿವೇಕವಾರ್ತೆ : ಭಾರತೀಯ ವಿಜ್ಞಾನ ಸಂಸ್ಥೆಯ ಮೂರನೆಯ ಚಂದ್ರಯಾನ-3 ಉಡಾವಣೆ ಯಶಸ್ವಿಗೆ ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಅವರು ಹರ್ಷ ವ್ಯಕ್ತಪಡಿಸಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ನಮೆಲ್ಲರ ಕನಸು, ನಿರೀಕ್ಷೆಗಳು ಚಂದ್ರನೆಡೆಗೆ ಸಾಗುತ್ತಿವೆ.ಭಾರತ ಹೆಮ್ಮೆಪಡುತ್ತದೆ.45 ದಿನಗಳ ಐತಿಹಾಸಿಕ ಚಂದ್ರಯಾನ-3 ಯಶಸ್ವಿಯಾಗಿ ಆರಂಭವಾಗಿದೆ. 2.35ಕ್ಕೆ ಆಂಧ್ರದ ಶ್ರೀಹರಿಕೋಟಾದಿಂದ ಚಂದಿರನ ಅಂಗಳಕ್ಕೆ ನೌಕೆಯನ್ನು ಉಡ್ದಯನ ಮಾಡಿದ ಇಸ್ರೋ ಈ ಪ್ರಯತ್ನದಲ್ಲಿ ಪೂರ್ಣ ಯಶಸ್ಸು ಸಾಧಿಸಲಿದೆ ಎಂಬ ವಿಶ್ವಾಸ ನನ್ನದು.ಇಸ್ರೋದ ಪ್ರತಿ ಯೋಜನೆಗೂ ಕರ್ನಾಟಕದ ಕೊಡುಗೆ ಇರುತ್ತದೆ.

ಅದೇ ರೀತಿ, ಚಂದ್ರಯಾನ-3ಕ್ಕೂ ಕರುನಾಡಿನ ಕಾಣಿಕೆ ಅಪಾರ. ಈ ಜಗತ್ತು, ಭಾರತವನ್ನು ಕರ್ನಾಟಕದ ಮೂಲಕ ನೋಡುವ ಈ ಅವಿಸ್ಮರಣೀಯ ಕ್ಷಣದ ದೃಶ್ಯವನ್ನು ನಾನೂ ಕಣ್ತುಂಬಿಕೊಂಡೆ. ಉಡಾವಣೆಯಾದ ಕೆಲ ಕ್ಷಣಗಳಲ್ಲೇ ಚಂದ್ರಯಾನ-3 ನೌಕೆ ನಿಗದಿತ ಕಕ್ಷೆ ಸೇರಿದ್ದು, ಈ ಮೂಲಕ ಉಪಗ್ರಹವನ್ನು ಚಂದ್ರನ ಮೇಲೆ ಇಳಿಸುವ 6 ವಾರಗಳ ರೋಮಾಂಚನಕಾರಿ ಮಿಷನ್’ಗೆ ಚಾಲನೆ ದೊರೆತಿದೆ. ಚಂದ್ರನತ್ತ ಹೊರಟ GSLV-Mk3 ರಾಕೆಟ್.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು 3 ನೆಯ ಬಾರಿ ಚಂದ್ರನತ್ತ ಇಸ್ರೋ ತನ್ನ ಪಯಣ ಆರಂಭಿಸಿದೆ.ಕೋಟ್ಯಾಂತರ ಭಾರತೀಯರ ಹಾರೈಕೆಯೊಂದಿಗೆ ನಭಕ್ಕೆ ಚಿಮ್ಮಿದ ಚಂದ್ರಯಾನ 3 ರಾಕೆಟ್ ಆಗಸ್ಟ್ 23 ರಕ್ಕೆ ಚಂದ್ರನ ಅಂಗಳದಲ್ಲಿ ಕಾಲಿಡಲಿದೆ.ಈ ಮಿಷನ್ ಸಾಧ್ಯವಾಗಿಸಲು ಹಗಲಿರುಳು ಶ್ರಮಿಸಿದ ಸಾವಿರಾರು ವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ತಂತ್ರಜ್ಞರಿಗೆ ಅವರು ಅಭಿನಂದನೆಗಳು ಸಲ್ಲಿಸಿದ್ದಾರೆ.

ವರದಿ: ಅಪ್ಪಾರಾಯ ಬಡಿಗೇರ

RELATED ARTICLES

ಹಳೆಯ ವಿದ್ಯಾರ್ಥಿಗಳೇ ಕೆಬಿಎನ್ ವಿವಿಯ ಬೆನ್ನೆಲುಬು : ಡಾ. ನಿಶಾತ ಆರೀಫ್ ಹುಸೇನಿ

ವಿವೇಕವಾರ್ತೆ : ಯಾವುದೇ ವಿಶ್ವವಿದ್ಯಾಲಯದ ಗುಣಮಟ್ಟ ಹಳೆಯ ವಿದ್ಯಾರ್ಥಿಗಳಿಂದಲೇ ತಿಳಿಯುತ್ತದೆ. ಹಳೆಯ ವಿದ್ಯಾರ್ಥಿಗಳ ಯಶಸ್ಸು ವಿವಿಗಳ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತದೆ ಎಂದು ಖಾಜಾ ಬಂದಾನವಾಜ್ ವಿವಿಯ ಕಲಾ, ಭಾಷಾ, ಮಾನವಕತೆ, ಸಮಾಜ ವಿಜ್ಞಾನ...

ಚೈತ್ರಾ ಕಾರು ಮುಧೋಳದಲ್ಲಿ ಪತ್ತೆ..! ಇದರ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ

ವಿವೇಕವಾರ್ತೆ :ಉದ್ಯಮಿಗೆ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಚೈತ್ರಾ ಕುಂದಾಪುರ(Chaitra Kundapur) ಅವರ ಆಸ್ತಿಯನ್ನು ಸಿಸಿಬಿ (CCB) ಮುಟ್ಟುಗೋಲು ಹಾಕಿಕೊಂಡಿದೆ . ಇದರ ಜೊತೆಗೆ ಇನ್ನೊಂದು ಸ್ಪೋಟಕ ಮಾಹಿತಿ ಸಿಕ್ಕಿದೆ. ಈ ವಂಚನೆ...

ಸಂಕ್ರಾಂತಿ ವೇಳೆಗೆ ರಾಜ್ಯದಲ್ಲಿ ಕೆಲ ಅವಘಢ ; ದೇಶದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ : ಕೋಡಿಮಠ ಶ್ರೀ.!

ವಿವೇಕ ವಾರ್ತೆ : ಲೋಕಸಭಾ ಚುನಾವಣೆ ಬಗ್ಗೆ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪ್ರಮುಖ ಭವಿಷ್ಯವೊಂದನ್ನು ನುಡಿದಿದ್ದಾರೆ. https://youtu.be/u6lq_pUsNkA?si=YWlDzZ4FEqGXLL4M ಮುಂದಿನ ಚುನಾವಣೆಯಲ್ಲಿ ದೇಶದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ. ಅಮಾವಾಸ್ಯೆಯ ಬಳಿಕ ಕರ್ನಾಟಕದಲ್ಲಿ ಭಾರೀ...
- Advertisment -

Most Popular

ಗೋಕಾಕ : ಹಣಕಾಸಿನ ವಿಚಾರಕ್ಕೆ ಯೋಧನಿಂದಲೇ ಮತ್ತೋರ್ವ ಯೋಧನ ಮೇಲೆ ಫೈರಿಂಗ್.!

ವಿವೇಕ ವಾರ್ತೆ : ಓರ್ವ ಯೋಧನಿಂದ ಮತ್ತೊಬ್ಬ ಯೋಧನ ಮೇಲೆ ಪೈರಿಂಗ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ರಾಜನಕಟ್ಟಿಯಲ್ಲಿ ನಡೆದಿದೆ. ರಾಜನಕಟ್ಟೆ ಗ್ರಾಮದ ಇಬ್ಬರು ವ್ಯಕ್ತಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ....

ಬ್ಯಾಕ್ ಪ್ಲಿಪ್ ಮಾಡಲು ಹೋಗಿ ಫೇಲ್ ಆದ ಯುವಕ : ‘ಇದರ ಅಗತ್ಯ ಇತ್ತೇ’ ಎಂದ ನೆಟ್ಟಿಗರು ; ವಿಡಿಯೋ ವೈರಲ್.!

ವಿವೇಕವಾರ್ತೆ : ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಕೆಲ ಯುವಕ ಯುವತಿಯರ ಹುಚ್ಚಾಟದ ವಿಡಿಯೋಗಳು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರೈಲಿನ ಬೋಗಿಯೊಳಗೆ ವಿಡಿಯೋ ಚಿತ್ರೀಕರಣದ ನಿಷೇಧದ ಹೊರಾತಗಿಯೂ ಇಂಥ ಪ್ರವೃತ್ತಿಗಳು ಮುಂದುವರೆಯುತಲೇ ಇವೆ. ಆ...

ಕಾರಿಗೆ ಡಿಕ್ಕಿ ಹೊಡೆದ ಲಾರಿ : ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವು..!

ವಿವೇಕವಾರ್ತೆ : ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಕಾರಿಗೆ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾದ ನಡೆದಿದೆ. ಮೃತ ದುರ್ದೈವಿಗಳನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆಕಾಶ್ (20), ಹೇಮಂತ್ (28)...

ಕುಂಬಳಕಾಯಿ ಬೀಜ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು.!

ವಿವೇಕವಾರ್ತೆ : ಕುಂಬಳಕಾಯಿ ಬೀಜಗಳು ತುಂಬಾ ಚಿಕ್ಕದಾಗಿದ್ದರೂ, ನಮ್ಮ ವ್ಯವಸ್ಥೆಗಳು ಅವಲಂಬಿಸಿರುವ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಕುಂಬಳಕಾಯಿಯ ಚಿಕ್ಕ ಬೀಜಗಳು ನಾವು ಅಂದಾಜಿಸುವುದಕ್ಕಿಂತ ಹೆಚ್ಚಿನ ಪೋಷಕಾಂಶಗಳಿಂದ ತುಂಬಿವೆ.‌ ಕುಂಬಳಕಾಯಿ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು...
error: Content is protected !!