ವಿವೇಕವಾರ್ತೆ :ಚಂದ್ರನ ಗೆದ್ದ ಭಾರತ ,ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಲಿಟ್ಟ ವಿಕ್ರಮ ,ದಶಕಗಳ ಕನಸು ನನಸಾದ ದಿನ ,ಇಡೀ ವಿಶ್ವವೇ ನಿಬ್ಬೆರಗಾಗಿ ನೋಡುವಂತೆ ಮಾಡಿದ ಇಸ್ರೋ ವಿಜ್ಞಾನಿಗಳಿಗೆ ಶತಕೋಟಿ ನಮನಗಳು ,ಹೌದು ಇಸ್ರೋ ವಿಜ್ಞಾನಿಗಳು ನಾಲ್ಕು ವರ್ಷಗಳ ಸತತ ಪ್ರಯತ್ನದಿಂದ ಜುಲೈ 14ರಂದು ಚಂದ್ರಯಾನ 3 ವಿಕ್ರಂ ಲ್ಯಾಂಡರ್ ಅನ್ನು ಉಡಾವಣೆ ಮಾಡಲಾಗಿತ್ತು ,ಬರೋಬ್ಬರಿ 41 ದಿನಗಳಿಂದ ಕಾತುರದಿಂದ ಕಾಯುತ್ತಿದ್ದ ನಮ್ಮ ಭಾರತೀಯರಿಗೆ ನೆನ್ನೆ ಚಂದ್ರನ ಅಂಗಳದಲ್ಲಿ ವಿಕ್ರಮ ಕಾಲಿಡುತ್ತಿದ್ದಂತೆ ಎಲ್ಲೆಲ್ಲಿ ಸಂಭ್ರಮೋ ಸಂಭ್ರಮ ಅದೇ ರೀತಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಂಗನಕೇರಿ ಗ್ರಾಮದಲ್ಲಿ ತಾಯಿ ಭುವನೇಶ್ವರಿದೇವಿ ಭಾವಚಿತ್ರಕ್ಕೆ ಪೂಜೆ ಮಾಡಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು .
ವರದಿಗಾರ:- ವಿವೇಕಾನಂದ ಕತ್ತಿ