Tuesday, September 26, 2023

ಚಂದ್ರನ ಮೇಲೂ ಖರೀದಿಸಬಹುದು ಭೂಮಿ..! ನಿಗದಿಯಾಗಿದೆ ಎಕರೆಗಿಷ್ಟು ಬೆಲೆ

ವಿವೇಕವಾರ್ತೆ : ಇತ್ತೀಚಿನ ದಿನಗಳಲ್ಲಿ ಚಂದ್ರನ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಭಾರತದ ಚಂದ್ರಯಾನ 3 ಯಶಸ್ಸು ಕೂಡ ಇದಕ್ಕೆ ಕಾರಣ. ಇದು ಚಂದ್ರನ ಅನೇಕ ರಹಸ್ಯಗಳನ್ನು ಬಹಿರಂಗಪಡಿಸಲಿದೆ. ಈ ಮಧ್ಯೆ ಚಂದ್ರನ ಮೇಲೆ ಭೂಮಿ ಖರೀದಿಸಬಹುದೇ ಎಂಬ ಪ್ರಶ್ನೆ ಅನೇಕರ ಮನಸ್ಸಿನಲ್ಲಿರಬಹುದು.

ಈಗಾಗಲೇ ಹಲವು ಕಂಪನಿಗಳು ಚಂದ್ರನ ಮೇಲೆ ಭೂಮಿ ಮಾರಾಟ ಮಾಡಿರುವುದು, ಖರೀದಿಸಿರುವ ಮಾಹಿತಿ ನಿಮಗೂ ಸಿಕ್ಕಿರಬಹುದು. ಆದರೆ ವಾಸ್ತವ ಏನು ಗೊತ್ತಾ? ಭೂಮಿಯ ಮೇಲಿನ ಯಾವುದೇ ದೇಶವು ಬಾಹ್ಯಾಕಾಶದ ಮೇಲೆ ಯಾವುದೇ ಹಕ್ಕನ್ನು ಹೊಂದಿಲ್ಲ.

ಯಾವುದೇ ದೇಶವು ಚಂದ್ರ, ನಕ್ಷತ್ರಗಳು ಮತ್ತು ಇತರ ಬಾಹ್ಯಾಕಾಶ ವಸ್ತುಗಳ ಮೇಲೆ ಯಾವುದೇ ಹಕ್ಕನ್ನು ಹೊಂದಿಲ್ಲ. ಈ ಬಗ್ಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ಕಾನೂನು ಕೂಡ ಇದೆ. ಇದರಲ್ಲಿ ಐದು ಒಪ್ಪಂದಗಳು ಮತ್ತು ನಿಬಂಧನೆಗಳಿವೆ. ಬಾಹ್ಯಾಕಾಶವನ್ನು ಸ್ವಾಧೀನಪಡಿಸಿಕೊಳ್ಳದಿರುವುದು, ಶಸ್ತ್ರಾಸ್ತ್ರ ನಿಯಂತ್ರಣ, ಪರಿಶೋಧನೆಯ ಸ್ವಾತಂತ್ರ್ಯ, ಬಾಹ್ಯಾಕಾಶ ವಸ್ತುಗಳಿಂದ ಉಂಟಾದ ಹಾನಿಯ ಹೊಣೆಗಾರಿಕೆ, ಬಾಹ್ಯಾಕಾಶ ನೌಕೆ ಮತ್ತು ಗಗನಯಾತ್ರಿಗಳ ಸುರಕ್ಷತೆ ಮತ್ತು ಭದ್ರತೆ ಇವನ್ನೆಲ್ಲ ಈ ಕಾನೂನು ಒಳಗೊಂಡಿದೆ.

ಹಾಗಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ಕಾನೂನು, ಚಂದ್ರನ ಮೇಲೆ ಭೂಮಿಯನ್ನು ಖರೀದಿಸುವುದನ್ನು ಕಾನೂನುಬದ್ಧವಾಗಿ ಗುರುತಿಸುವುದಿಲ್ಲ. ಕೆಲವು ಕಂಪನಿಗಳು ಈ ಕಾನೂನನ್ನು ಪರಿಗಣಿಸಲಾಗುವುದಿಲ್ಲವೆಂದು ವಾದಿಸುತ್ತವೆ. ಆ ಕಂಪನಿಗಳು ಚಂದ್ರನ ಮೇಲೆ ಕಾನೂನುಬದ್ಧವಾಗಿ ಭೂಮಿ ಖರೀದಿಸಬಹುದು ಎಂದು ಹೇಳುತ್ತವೆ. ಲೂನಾರ್‌ ಸೊಸೈಟಿ ಇಂಟರ್‌ನ್ಯಾಶನಲ್ ಮತ್ತು ಇಂಟರ್‌ನ್ಯಾಶನಲ್ ಲೂನಾರ್ ಲ್ಯಾಂಡ್ಸ್ ರಿಜಿಸ್ಟ್ರಿ ಚಂದ್ರನ ಮೇಲೆ ಭೂಮಿಯನ್ನು ಮಾರಾಟ ಮಾಡುವುದಾಗಿ ಹೇಳಿಕೊಳ್ಳುತ್ತವೆ. ಅವರ ಮೂಲಕ ಅನೇಕ ಜನರು ಚಂದ್ರನ ಮೇಲೆ ಭೂಮಿ ಖರೀದಿಸಿದ್ದಾರೆ.

ಇನ್ನು ಬೆಲೆಗಳನ್ನು ನೋಡೋದಾದ್ರೆ, Lunarregistry.com ಪ್ರಕಾರ, ಚಂದ್ರನ ಮೇಲೆ ಒಂದು ಎಕರೆ ಭೂಮಿಯ ಬೆಲೆ 37.50 ಡಾಲರ್‌, ಅಂದರೆ ಸುಮಾರು 3,080 ರೂಪಾಯಿ. ಚಂದ್ರನ ಮಾಲೀಕತ್ವವನ್ನು ಹೊಂದಲು ಯಾರಿಗೂ ಹಕ್ಕಿಲ್ಲ. ಬಾಹ್ಯಾಕಾಶ ಕಾನೂನಿನ ಪುಸ್ತಕಗಳ ಲೇಖಕ ಡಾ.ಜಿಲ್ ಸ್ಟುವರ್ಟ್ ಅವರು ದಿ ಮೂನ್ ಎಕ್ಸಿಬಿಷನ್ ಬುಕ್ ಎಂಬ ಪುಸ್ತಕವನ್ನೂ ಬರೆದಿದ್ದಾರೆ. ಜನರು ಈಗ ಚಂದ್ರನಲ್ಲಿ ಭೂಮಿ ಖರೀದಿಸಿ ಉಡುಗೊರೆ ನೀಡುವುದನ್ನು ಫ್ಯಾಷನ್ ಟ್ರೆಂಡ್ ಮಾಡಿಕೊಂಡಿದ್ದಾರೆಂದು ಉಲ್ಲೇಖಿಸಿದ್ದಾರೆ.

ಆದರೆ ಚಂದ್ರನ ಮೇಲೆ ಮಾಲೀಕತ್ವದ ಹಕ್ಕು ಯಾರಿಗೂ ಇಲ್ಲ. ಆದರೂ ಇದು ಕೋಟ್ಯಂತರ ರೂಪಾಯಿ ವ್ಯವಹಾರವಾಗಿಬಿಟ್ಟಿದೆ. ಎಕರೆಗೆ ಕೇವಲ 3 ಸಾವಿರ ರೂಪಾಯಿ ವೆಚ್ಚವಿರುವುದರಿಂದ ಜನರು ಯೋಚನೆ ಮಾಡದೆಯೇ ಖರೀದಿಸುತ್ತಿದ್ದಾರೆ.

RELATED ARTICLES

ನಿಮ್ಮ ಮೊಬೈಲ್ ನಲ್ಲಿ `ಡೇಟಾ’ ಬೇಗನೆ ಖಾಲಿಯಾಗುತ್ತದೆಯೇ? ಜಸ್ಟ್ ಈ ಸೆಟ್ಟಿಂಗ್ ಆಫ್ ಮಾಡಿ!

ವಿವೇಕವಾರ್ತೆ : ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಇಂಟರ್ನೆಟ್ ಅನ್ನು ಬಳಸುತ್ತೀರಾ ಮತ್ತು ಅದು ಬೇಗನೆ ಕೊನೆಗೊಳ್ಳುವುದರಿಂದ ಅಸಮಾಧಾನಗೊಳ್ಳುತ್ತೀರಾ. ಅಂತಹ ಪರಿಸ್ಥಿತಿಯಲ್ಲಿ, ನೀವು ಇನ್ನು ಮುಂದೆ ಚಿಂತಿಸಬೇಕಾಗಿಲ್ಲ. ಈ 5 ಸಲಹೆಗಳು ಮತ್ತು ತಂತ್ರಗಳೊಂದಿಗೆ ಡೇಟಾವನ್ನು...

ರಿಮೋಟ್ ಬೇಡ: ಸ್ಮಾರ್ಟ್​ಫೋನ್ ಮೂಲಕ ಟಿವಿ ಚಾನೆಲ್ ಬದಲಾಯಿಸುವುದು ಹೇಗೆ?

ವಿವೇಕವಾರ್ತೆ : ಇನ್ನುಂದೆ ಟಿವಿ ರಿಮೋಟ್ ಕಳೆದು ಹೋದರೆ ಚಿಂತಿಸಬೇಕಿಲ್ಲ. ನಿಮ್ಮಲ್ಲಿ ಸ್ಮಾರ್ಟ್​ಫೋನ್ ಇದ್ದರೆ ಅದರ ಮೂಲಕ ಮನೆಯ ಟಿವಿಯನ್ನು ನೀವು ನಿಯಂತ್ರಿಸಬಹುದು. ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಟಿವಿ ರಿಮೋಟ್ ಆಗಿ ಬಳಸಬಹುದು. ಹೆಚ್ಚಾಗಿ...

ಮೊಬೈಲ್ ಬಳಕೆದಾರರೇ ಗಮನಿಸಿ : ಈ 4 ಆಯಪ್ ಗಳಿದ್ದರೆ ಬೇಗ ತೆಗೆದುಹಾಕಿ, ಇಲ್ಲದಿದ್ದರೆ ನಿಮ್ಮ ಖಾತೆ ಖಾಲಿಯಾಗಬಹುದು

ವಿವೇಕವಾರ್ತೆ : ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸ್ಮಾರ್ಟ್ಫೋನ್ಗಳಿಗೆ ಸಂಪರ್ಕ ಹೊಂದಿದ್ದಾರೆ. ಇದು ತನ್ನದೇ ಆದ ಪ್ರಯೋಜನಗಳನ್ನು ಸಹ ಹೊಂದಿದೆ, ಬ್ಯಾಂಕ್ ಸಂಬಂಧಿತ ಕೆಲಸಗಳು ಸೇರಿದಂತೆ ಇತರ ಕಾರ್ಯಗಳನ್ನು ಸಹ ನಿಮಿಷಗಳಲ್ಲಿ ಸ್ಮಾರ್ಟ್ಫೋನ್ನಿಂದ ಮಾಡಲಾಗುತ್ತದೆ. ನಿಮ್ಮ...
- Advertisment -

Most Popular

ಗೋಕಾಕ : ಹಣಕಾಸಿನ ವಿಚಾರಕ್ಕೆ ಯೋಧನಿಂದಲೇ ಮತ್ತೋರ್ವ ಯೋಧನ ಮೇಲೆ ಫೈರಿಂಗ್.!

ವಿವೇಕ ವಾರ್ತೆ : ಓರ್ವ ಯೋಧನಿಂದ ಮತ್ತೊಬ್ಬ ಯೋಧನ ಮೇಲೆ ಪೈರಿಂಗ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ರಾಜನಕಟ್ಟಿಯಲ್ಲಿ ನಡೆದಿದೆ. ರಾಜನಕಟ್ಟೆ ಗ್ರಾಮದ ಇಬ್ಬರು ವ್ಯಕ್ತಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ....

ಬ್ಯಾಕ್ ಪ್ಲಿಪ್ ಮಾಡಲು ಹೋಗಿ ಫೇಲ್ ಆದ ಯುವಕ : ‘ಇದರ ಅಗತ್ಯ ಇತ್ತೇ’ ಎಂದ ನೆಟ್ಟಿಗರು ; ವಿಡಿಯೋ ವೈರಲ್.!

ವಿವೇಕವಾರ್ತೆ : ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಕೆಲ ಯುವಕ ಯುವತಿಯರ ಹುಚ್ಚಾಟದ ವಿಡಿಯೋಗಳು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರೈಲಿನ ಬೋಗಿಯೊಳಗೆ ವಿಡಿಯೋ ಚಿತ್ರೀಕರಣದ ನಿಷೇಧದ ಹೊರಾತಗಿಯೂ ಇಂಥ ಪ್ರವೃತ್ತಿಗಳು ಮುಂದುವರೆಯುತಲೇ ಇವೆ. ಆ...

ಕಾರಿಗೆ ಡಿಕ್ಕಿ ಹೊಡೆದ ಲಾರಿ : ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವು..!

ವಿವೇಕವಾರ್ತೆ : ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಕಾರಿಗೆ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾದ ನಡೆದಿದೆ. ಮೃತ ದುರ್ದೈವಿಗಳನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆಕಾಶ್ (20), ಹೇಮಂತ್ (28)...

ಕುಂಬಳಕಾಯಿ ಬೀಜ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು.!

ವಿವೇಕವಾರ್ತೆ : ಕುಂಬಳಕಾಯಿ ಬೀಜಗಳು ತುಂಬಾ ಚಿಕ್ಕದಾಗಿದ್ದರೂ, ನಮ್ಮ ವ್ಯವಸ್ಥೆಗಳು ಅವಲಂಬಿಸಿರುವ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಕುಂಬಳಕಾಯಿಯ ಚಿಕ್ಕ ಬೀಜಗಳು ನಾವು ಅಂದಾಜಿಸುವುದಕ್ಕಿಂತ ಹೆಚ್ಚಿನ ಪೋಷಕಾಂಶಗಳಿಂದ ತುಂಬಿವೆ.‌ ಕುಂಬಳಕಾಯಿ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು...
error: Content is protected !!