ವಿವೇಕ ವಾರ್ತೆ : ತಾಲ್ಲೂಕಿನ ಕೊಣ್ಣೂರ ಪಟ್ಟಣದ ಹೊರವಲಯದ ಕರೆಮ್ಮದೇವಿ ದೇವಸ್ಥಾನದ ಸಮೀಪ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ಕಬ್ಬಿನಗದ್ದೆಗೆ ನುಗ್ಗಿ ಬಳಿಕ ಪಲ್ಟಿಯಾದ ಘಟನೆ ನಡೆದಿದೆ.
ಕಾರು ಕಬ್ಬಿನಗದ್ದೆಗೆ ನುಗ್ಗಿ ಪಲ್ಟಿಯಾದ ಪರಿಣಾಮ ಕಾರು ನಜ್ಜುಗುಜ್ಜಾಗಿದೆ.
ಮಂಗಳವಾರ ರಾತ್ರಿ ಗೋಕಾಕದಿಂದ ಘೋಡಗೇರಿಗೆ ಹೋಗುವ ವೇಳೆ ಕಾರು ಚಾಲಕ ತಿರುವು ಗಮನಿಸದೆ ಕಾರು ಚಾಲನೆ ಮಾಡಿದ್ದಾರೆ.
ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದಲ್ಲಿರುವ ಕಬ್ಬಿನ ಗದ್ದೆಗೆ ನುಗ್ಗಿದ ಪರಿಣಾಮ ಪಲ್ಟಿಯಾಗಿ ಚಾಲಕ ಮತ್ತು ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯರು ಗಾಯಾಳುಗಳಿಬ್ಬರನ್ನು ಗೋಕಾಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.