ವಿವೇಕ ವಾರ್ತೆ : ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಪ್ರಸಿದ್ಧ ಗೋಕಾಕ ಧಭ ಧಭೆ (ಗೋಕಾಕ ಫಾಲ್ಸ್) ಯಲ್ಲಿ ವ್ಯಕ್ತಿಯೋರ್ವ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಾಯಂಕಾಲ ಬೆಳಕಿಗೆ ಬಂದಿದೆ.
ಬುಧುವಾರ ಸಂಜೆ ಮೀನು ಹಿಡಿಯುವ ಮೀನುಗಾರ ನೀರಿನಲ್ಲಿ ತೆಲುತ್ತಿರುವ ಶವ ನೋಡಿ ಘಟಪ್ರಭಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ.
ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೃತ ವ್ಯಕ್ತಿ ಮೂಡಲಗಿ ಪಟ್ಟಣದ ಸುರೇಶ ಈಶ್ವರಪ್ಪ ಪತ್ತಾರ (58) ತಿಳಿದು ಬಂದಿದೆ.
ಸುರೇಶ ಈಶ್ವರಪ್ಪಾ ಪತ್ತಾರ ಎಂಬ ಮೃತ ವ್ಯಕ್ತಿಗೆ ಮದ್ಯ ಸೇವಿಸಬೇಡ, ಮೊದಲೇ ನಿನ್ನ ಆರೋಗ್ಯ ಸರಿ ಇಲ್ಲ. ಈಗಾಗಲೇ ನಿನಗೆ ಸಕ್ಕರೆ ಕಾಯಿಲೆ ಇದೆ ಎಂದು ಮನೆಯವರು ತಿಳಿ ಹೇಳಿದ್ದಾರೆ. ಇಷ್ಟು ಹೇಳಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ಗೋಕಾಕ ಧಭೆ ಧಭೆಯಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಈ ಘಟನೆ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.