ವಿವೇಕವಾರ್ತೆ – 11-2022 ರಂದು ಗೋಕಾಕದ ವಿವೇಕಾನಂದ ನಗರದ ತೋಳಿನವರ ಇವರ ಮನೆಯಲ್ಲಿ ಚಿನ್ನಾಭರಣಗಳು ಕಳ್ಳತನವಾಗಿದ್ದು ಅಲ್ಲದೇ ದಿನಾಂಕಃ ಲಕ್ಷ್ಮಣ 23-05-2023 ರಂದು ತವಗದ ಶ್ರೀ ಬೀರಸಿದ್ದೇಶ್ವರ ಗುಡಿಯಲ್ಲಿ ಚಿನ್ನಾಭರಣಗಳು ಕಳ್ಳತನವಾಗಿದ್ದು, ಇವುಗಳ ಬಗ್ಗೆ ಗೋಕಾಕ ಶಹರ ಮತ್ತು ಗೋಕಾಕ ಗ್ರಾಮೀಣ ಪೊಲೀಸ್ ರಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಸದರಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಮಾನ್ಯ ಎಸ್.ಪಿ.ಸಾಹೇಬರು ಬೆಳಗಾವಿ ಜಿಲ್ಲೆರವರು ಪ್ರಕರಣಗಳ ಪತ್ತೆಗಾಗಿ ಶ್ರೀ ಗೋಪಾಲ .ಆರ್.ರಾಠೋಡ ಸಿ.ಪಿ.ಐ ಗೋಕಾಕ ವೃತ್ತ ಇವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಎಸ್.ಪಿ.ಬೆಳಗಾವಿ ಹಾಗೂ ಸದರಿ ತನಿಖಾ ತಂಡವು ದೂದಪೀ.ಎಚ್.ಮುಲ್ಲಾ ಡಿ.ಎಸ್.ಪಿ. ಎಂ.ವೇಣುಗೋಪಾಲ ಹೆಚ್ಚುವರಿ ಗೋಕಾಕ ಉಪವಿಭಾಗರವರ ಮಾರ್ಗದರ್ಶನದಲ್ಲಿ ಸದರಿ ಪ್ರಕರಣಗಳಲ್ಲಿ ತನಿಖೆ ಕೈಕೊಂಡು ದಿನಾಂಕ: 30-06-2023 ರಿಂದ ದಿನಾಂಕ 24-07-2023 ರವರೆಗೆ 08 ಜನ ಆರೋಪಿತರನ್ನು ಬಂಧಿಸಿ, ಕಳುವಾಗಿದ್ದ 55,60,000 /- ಮೌಲ್ಯದ 810 ಗ್ರಾಂ ತೂಕದ ಚಿನ್ನಾಭರಣಗಳು ಮತ್ತು 8.5 ಕೆ.ಜಿ. ತೂಕದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದು, ಗೋಕಾಕ ಶಹರ ಮತ್ತು ಗೋಕಾಕ ಗ್ರಾಮೀಣ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ. ಪೊಲೀಸ್ ಠಾಣೆಗಳ ಅಪರಾಧ
ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಶ್ರೀ ಗೋಪಾಲ ಆರ್. ರಾಠೋಡ ಸಿ.ಪಿ.ಐ ಗೋಕಾಕ ವೃತ್ತ, ಶ್ರೀ ಬಿ.ಆರ್.ಗಡ್ಡಕಾರ ಪಿ.ಐ ಸಿ.ಇ.ಎನ್.ಬೆಳಗಾವಿ, ಶ್ರೀ ಎಮ್.ಆರ್.ಎಮ್.ತಹಶೀಲ್ದಾರ ಪಿ.ಎ ಹುಕ್ಕೇರಿ, ಶ್ರೀ ಕಿರಣ ಮೋಹಿತೆ ಪಿ.ಎಸ್.ಐ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಎಮ್.ಡಿ.ಘೋರಿ ಪಿ.ಎಸ್.ಐ ಗೋಕಾಕ ಶಹರ ಪೊಲೀಸ ಠಾಣೆ ಹಾಗೂ ಶ್ರೀ ಎಚ್.ಡಿ ಯರಝರ್ವಿ ಪಿ.ಎಸ್.ಐ ಅಂಕಲಗಿ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ಜನರಾದ ಬಿ.ವಿ.ನೇರ್ಲಿ, ವಿ.ಆರ್.ನಾಯಕ, ಡಿ.ಜಿ.ಕೊಣ್ಣೂರ, ಎಸ್.ವಿ.ಕಸ್ತೂರಿ, ಎಸ್.ಬಿ.ಮಾನೆಪ್ಪಗೋಳ, ಎಸ್.ಎಚ್.ಈರಗಾರ, ಎಮ್.ಬಿ.ಗಿಡಗಿರಿ, ಎಮ್.ಎಮ್.ಹಾಲೋಳ್ಳಿ, ಎಸ್.ಎಸ್.ದೇವರ, ಜಿ.ಎಚ್.ಗುಡ್ಡಿ, ಎಮ್.ಬಿ.ತಳವಾರ, ಎಸ್.ಬಿ.ಪೂಜೇರಿ, ಹಾಗೂ ಶ್ರೀಮತಿ ಆರ್.ಎಮ್.ತುಬಾಕಿ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಟೆಕ್ನಿಕಲ್ ಸೆಲ್ ವಿಭಾಗದ ಸಚಿನ ಪಾಟೀಲ ಮತ್ತು ವಿನೋದ ಠಕ್ಕನ್ನವರ ಇವರ ಕಾರ್ಯವನ್ನು ಮಾನ್ಯ ಎಸ್.ಪಿ. ಸಾಹೇಬರು ಮುಕ್ತ ಕಂಠದಿಂದ ಶ್ಲಾಘಿಸಿರುತ್ತಾರೆ. ಹಾಗೂ ಇದೇ ರೀತಿ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಸೂಚಿಸಿರುತ್ತಾರೆ.
ಮಾನ್ಯ ಎಸ್.ಪಿ ಸಾಹೇಬರು ಬೆಳಗಾವಿ ರವರು ಬೆಲೆ ಬಾಳುವ ಚಿನ್ನಾಭರಣಗಳನ್ನು ಬ್ಯಾಂಕ ಲಾಕರಗಳಲ್ಲಿ ಇಡುವಂತೆ ಹಾಗೂ ಮನೆಯಿಂದ ಹೊರಗಡೆ ಹೋದಾಗ ಲಾಕಡ ಹೌಸಗಳ ಬಗ್ಗೆ ಸರಹದ್ದಿನ ಪೊಲೀಸ ಠಾಣೆಗಳಿಗೆ ಮಾಹಿತಿ ನೀಡಲು ಸಾರ್ವಜನಿಕರಲ್ಲಿ ಕೋರಿರುತ್ತಾರೆ.
ವರದಿ- ಗುರುವಚನ ಕುದರಿಮಠ