ಗೃಹರಕ್ಷಕದಳದ ಇಲಾಖೆಯ ಬಗ್ಗೆ ನಕಲಿ ದೂರು : ಸ್ಪಷ್ಟನೆ ನೀಡಿದ ಕಮಾಂಡಟ್ ಕಿರಣ ನಾಯಿಕ

Published on

spot_img
spot_img

ಬೆಳಗಾವಿ : ಜಿಲ್ಲಾ ಗೃಹರಕ್ಷಕದಳದ ಇಲಾಖೆಯ ಬಗ್ಗೆ ಸುಳ್ಳು ದೂರು ಅರ್ಜಿ ನೀಡುತ್ತಿರುವ ಕುರಿತು.ಸ್ಪಷ್ಟ ಪಡಿಸಿದ ಕಮಾಂಡಂಟ ಡಾ!ಕಿರಣ ನಾಯಿಕ ಗ್ರಹರಕ್ಷಕದಳಕ್ಕೆ ಸಂಬಂಧಿಸಿದಂತೆ ಕರ್ನಾಟಕ ಗೃಹರಕ್ಷಕದಳ ಸಂಸ್ಥೆಯಲ್ಲಿ ಗೃಹರಕ್ಷಕರು ನಿಷ್ಠಾಮ ಸೇವಕರಾಗಿರುತ್ತಾರೆ. ಗೃಹರಕ್ಷಕರು ವೇತನ ಪಡೆಯುವ ಖಾಯಂ ಸಿಬ್ಬಂದಿಗಳಾಗಿರುವುದಿಲ್ಲ. ಕೇವಲ ತುರ್ತು ಸಮಯದಲ್ಲಿ ಬಂದೋಬಸ್ತ ಕರ್ತವ್ಯಗಳರುವಾಗ ಮಾತ್ರ ಗೌರವ ಧನ ಎಂದು ಪಡೆಯುತ್ತಾರೆ. ಆದ್ದರಿಂದ ಗೃಹರಕ್ಷಕದಳ ಸದಸ್ಯತ್ವ ಹೊಂದಿದ ಮಾತ್ರಕ್ಕೆ ಯಾವುದೇ ತರಹದ ಆರ್ಥಿಕ ಲಾಭ ಇರುವುದಿಲ್ಲ. ಹಾಗೂ ಗೃಹರಕ್ಷಕರಾದ ಮಾತ್ರಕ್ಕೆ ಯಾವುದೇ ರೀತಿಯಿಂದ ಜೀವನ ಆಧಾರ ಇರುವುದಿಲ್ಲ.

ಗೃಹರಕ್ಷಕದಳ ಒಂದು ನಿಷ್ಠಾಮ ಸೇವೆಯಾಗಿದ್ದು, ಈ ಸಂಸ್ಥೆಯಲ್ಲಿ ಅವರ ವೃತ್ತಿ ಜೀವನದ ಜೊತೆಗೆ ಒಂದು ಸಮಾಜ ಸೇವೆ ಮಾಡುವ ಮನೋಭಾವ ಇಚ್ಛೆಯುಳ್ಳವರನ್ನು ನಿಯಮಾನುಸಾರ ನೋಂದಣಿ ಮಾಡಿಕೊಳ್ಳಲಾಗುತ್ತದೆ.

ಗೃಹರಕ್ಷಕರ ಸೇವಾ ಅವಧಿಯು ಮೂರು ವರ್ಷಗಳಾಗಿದ್ದು, ಪ್ರತಿ ಮೂರು ವರ್ಷಗಳಗೊಮ್ಮೆ ನವೀಕರಣ ಪ್ರಕ್ರೀಯೆಯನ್ನು ನಿಯಮಾನುಸಾರ ಕಡ್ಡಾಯವಾಗಿ ಮಾಡಬೇಕಾಗಿರುತ್ತದೆ. ಆದರೆ ಸುಮಾರು 10-15 ವರ್ಷಗಳಿಂದ ನವೀಕರಣ ಪ್ರಕ್ರೀಯೆಯನ್ನು ಕೈಗೊಂಡಿರುವುದಿಲ್ಲ.

ಸದರಿ ವಿಷಯದ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾನ್ಯರವರ ಆದೇಶದ ಮೇರೆಗೆ ಹಾಗೂ ನಿಯಮಾನುಸಾರ ಎಲ್ಲ ಘಟಕಾಧಿಕಾರಿಗಳಿಂದ ಅರ್ಜಿಗಳನ್ನು ಸ್ವೀಕರಿಸಿ ಅವರ ಶಿಫಾರಸ್ಸು ಹಾಗೂ ಕಚೇರಿಯ ಬೋಧಕರ ಪರಿಶೀಲನೆ ಮೇರೆಗೆ ನವೀಕರಣ ಪ್ರಕ್ರೀಯೆ ಮಾಡಲಾಗಿರುತ್ತದೆ.

ನವೀಕರಣ ಪ್ರಕ್ರೀಯೆಲ್ಲ ಕೆಲವು ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಬೆಳಗಾವಿ ಗೃಹರಕ್ಷಕದಳದ ಕೆಲವು ಘಟಕಾಧಿಕಾರಿಗಳು ಹಾಗೂ ಪ್ರಭಾರ ಘಟಕಾಧಿಕಾರಿಗಳು ಅವರವರ ವೈಯಕ್ತಿಕ ಸ್ವಾರ್ಥಕ್ಕೆ ಮತ್ತು ಅವರ ಕರ್ತವ್ಯದ ಲೋಪದೋಷಗಳನ್ನು ಮರೆಮಾಚಲು ದುರುದ್ದೇಶದಿಂದ ಗೃಹರಕ್ಷಕರನ್ನು ಪ್ರಚೋದಿಸಿ ಆಡಳತ ಹಿತದೃಷ್ಟಿಯಿಂದ ಹಾಗೂ ಮಾನಸಿಕವಾಗಿ ನಮಗೆ ತೊಂದರೆ ಉಂಟು ಮಾಡುತ್ತಿರುತ್ತಾರೆ.ಗೃಹರಕ್ಷಕದಳ ಒಂದು ಸಮವಸ್ತ್ರದಾರಿ ಇಲಾಖೆಯಾಗಿದ್ದು, ಇಲ್ಲ ಎಲ್ಲ ಕಾರ್ಯ ಕರ್ತವ್ಯಗಳು ಸರ್ಕಾರದ ನಿಯಮಾನುಸಾರ ಹಾಗೂ ಕಾನೂನು ಬದ್ಧವಾಗಿ ನಡೆಯುತ್ತವೆ. ಈಗಾಗಲೇ ಇಲಾಖೆಯಿಂದ ಸಮಾಲೋಪನೆಗೊಂಡ ಗೃಹರಕ್ಷಕರು ವಿವಿಧ ದಿನಪತ್ರಿಕೆ, ಸಂಘ ಸಂಸ್ಥೆಗಳು, ರಾಜಕೀಯ ವ್ಯಕ್ತಿಗಳ ಹಾಗೂ ಸರ್ಕಾರಿಯ ಹಿರಿಯ ಅಧಿಕಾರಿಗಳಗೆ ಸುಳ್ಳು ದೂರು ನೀಡುತ್ತಿದ್ದಾರೆ’ ಎಂಬ ವಿಷಯ ತಿಳಿದು ಬಂದಿರುತ್ತದೆ.

ಈಗಾಗಲೆ ಹಿಂದಿನ ಘಟಕಾಧಿಕಾರಿಗಳಾದ ಶ್ರೀ ಬಸವರಾಜ ಸಿ. ಹಂಡಗಿ ಸ್ಟಾಪ್ ಆಫೀಸರ್, ಶ್ರೀ. ಸಂಜಯ ಡಿ ನಿಂಬಾಳಕರ, ನಿಪ್ಪಾಣಿ ಘಟಕ, ಶ್ರೀ. ಮಹಾಂತೇಶ ಎಸ್., ಕಿತ್ತೂರ, ಗುರ್ಲಹೊಸೂರ ಘಟಕ, ಶ್ರೀ. ಸುರೇಶ ಡಿ, ಲಾಡರ, ಸವದತ್ತಿ ಘಟಕ, ಚಿಕ್ಕೋಡಿ ಘಟಕದ ಘಟಕಾಧಿಕಾರಿ ಶ್ರೀ ಅಮರಜೀತ ಐ, ಪಟ್ಟ, ಶ್ರೀ. ಸುರೇಶ ಡಿ. ಫಸ್ತಿ, ಗೃಹರಕ್ಷಕ ಯಮಕನಮರ್ಡಿ ಘಟಕ ಹಾಗೂ ಇಲಾಖೆಯ ನಿವೃತ್ತಿಗೊಂಡ ಮತ್ತು ಹಾಲಿಯಲ್ಲಿರುವ ಕೆಲವು ಅಧಿಕಾರಿ ಮತ್ತು ಸಿಬ್ಬಂದಿ, ಸಮಾಲೋಪನೆಗೊಂಡ ಗೃಹರಕ್ಷಕರು ಕೂಡಿಕೊಂಡು ಗುಂಪುಗಾರಿಕೆ ಮಾಡಿ ಇಲಾಖೆಗೆ ಕಪ್ಪು ಚುಕ್ಕೆ ಬರುವಂತೆ ಮಾಡುತ್ತಿರುತ್ತಾರೆ ಎಂಬ ಮಾಹಿತಿ ಬಂದಿರುವುದರಿಂದ ಇವರ ಮೇಲೆ ತನಿಖೆ ಪ್ರಕ್ರಿಯೆಯಲ್ಲಿರುತ್ತದೆ ಎಂಬ ವಿಷಯವನ್ನು ತಿಳಸಬಯಸುತ್ತೇನೆ!

ಚುನಾವಣೆ ಸಂದರ್ಭದಲ್ಲಿ, ತುರ್ತು ಸಮಯದಲ್ಲ. (VVIP) ಗಣ್ಯ ವ್ಯಕ್ತಿಗಳು ಜಿಲ್ಲೆಗೆ ಭೇಟಿ ನೀಡುವ ಸಂದರ್ಭದಲ್ಲ. ಮೇಲೆ ಸೂಚಿಸಿರುವ ಜನರು ರಾಷ್ಟ್ರಪತಿಗಳಿಗೆ, ಪ್ರದಾವಿನಂತಿಸಲಾಗಿದೆ, ಮುಖ್ಯ ಮಂತ್ರಿಗಳಿಗೆ, ಗೃಹ ಮಂತ್ರಿಗಳಿಗೆ, ಚುನಾವಣಾ ಆಯೋಗಕ್ಕೆ ಹೀಗೆ ಹಲವಾರು ಗಣ್ಯ ವ್ಯಕ್ತಿಗಳಿಗೆ ಹಾಗೂ ಸರ್ಕಾರಿಯ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸುಳ್ಳು ದೂರು ನೀಡಿ ಇಲಾಖೆಯ ಹಾಗೂ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಬಗ್ಗೆ ತಪ್ಪು ಭಾವನೆ ಸೃಷ್ಟಿಸಿ ಕಳಂಕ ಬರುವ ಕೆಲಸ ಮಾಡಿ ಮಾನಸಿಕವಾಗಿ ತೊಂದರೆ ನೀಡುತ್ತಿದ್ದಾರೆ. ಈ ಹಿಂದೆಯೂ ಕಮಾಂಡಂಟ್‌ ಹಾಗೂ ಪ್ರಭಾರ ಕಮಾಂಡಂಟ್‌ರಾಗಿ ಕಾರ್ಯ ನಿರ್ವಹಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಿಗೂ ಇದೇ ರೀತಿ ಕಾಡಿರುತ್ತಾರೆ.

ಆದ್ದರಿಂದ ಸದರಿ ವಿಷಯದ ಬಗ್ಗೆ ಯಾವುದೇ ತರಹ, ಯಾರಿಂದಲಾದರೂ ತಮ್ಮಲ್ಲ ದೂರು ಮನವಿ ಬಂದಲ್ಲಿ ಕೂಲಂಕುಶವಾಗಿ ಪರಿಶೀಲಿಸಿ ಇಲಾಖೆಯ ಹಾಗೂ ಇಲಾಖೆಯ ನಿಷ್ಠಾವಂತ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಹಿತದೃಷ್ಟಿಯನ್ನು ಪರಿಗಣಿಸಿ ಸುಳ್ಳು ದೂರುಗಳನ್ನು ನೀಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾನ್ಯರವರಲ್ಲಿ ವಿನಂತಿಸಲಾಗಿ

ಡಾ. ಕಿರಣ ರುದ್ರಾ ನಾಯ್ಕ, ಪಿ.ಹೆಚ್.ಡಿ ಜಿಲ್ಲಾ ಕಮಾಂಡಂಟ
ಗೃಹರಕ್ಷಕದಳ, ಬೆಳಗಾವಿ ಜಿಲ್ಲೆ.

ವರದಿ- ಬ್ರಹ್ಮಾನಂದ ಪತ್ತಾರ

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!