ವಿವೇಕವಾರ್ತೆ : ಇಲ್ಲೊಬ್ಬಳು ತುಂಬು ಗರ್ಭಿಣಿಯಾಗಿರುವ ಮಹಿಳೆ ತನ್ನ ಗುರುವಿನ ಸಹಾಯದಿಂದ ಬುಗುರಿಯಂತೆ ಸುತ್ತಲೂ ಸುತ್ತುತ್ತಿರುವ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿ ತುಂಬಾ ವೈರಲ್ ಆಗಿದೆ.
ಪ್ರತಿ ಕುಟುಂಬದಲ್ಲಿಯೂ ಗರ್ಭಿಣಿಯಾದ ಮಹಿಳೆಯ ಬಗ್ಗೆ ಜಾಗರೂಕರಾಗಿರುತ್ತಾರೆ. ಇಡಿ ಮನೆಯರೆಲ್ಲರೂ ಆಕೆಯ ಬಗ್ಗೆ ಬಹಳ ಕಾಳಜಿ ತೋರುತ್ತಾರೆ. ಪ್ರತಿ ಹೆಜ್ಜೆ ಇಡುವಾಗಲೂ ನಿಧಾನಿಸುವಂತೆ ಜೋಪಾನವಾಗಿ ನಡೆಯುವಂತೆ ಸಲಹೆ ನೀಡುತ್ತಾರೆ.
ಆದರೆ ಇಲ್ಲೊಬ್ಬಳು ಮಹಿಳೆ ಇದಕ್ಕೆ ತದ್ವಿರುದ್ಧವಾಗಿ ನಡೆದಂತೆ ಭಾಸವಾಗುತ್ತದೆ. ಮೂಲತಃ ನೃತ್ಯಗಾರ್ತಿಯಾಗಿರಬಹುದಾದ ಈಕೆ, ನೃತ್ಯಶಾಲೆಯಲ್ಲಿ ತನ್ನ ಗುರುವಿನ ಸಹಾಯದಿಂದ ಬುಗುರಿಯಂತೆ ಸುತ್ತಲೂ ಸುತ್ತುತ್ತಿದ್ದಾಳೆ.
ವಿಡಿಯೋ ನೋಡಿದ ಅನೇಕರು ಅವರ ವಿವೇಚನೆಯಂತೆ ಕಾಮೆಂಟ್ ಮಾಡಿದ್ದು, ಕೆಲವರು ಮಾಡಿರುವ ಕಾಮೆಂಟ್‌ಗಳು ನಗ್ಗು ಉಕ್ಕಿಸುತ್ತಿದೆ.
ಮೂಲತಃ ಈ ವಿಡಿಯೋವನ್ನು @videospvcagado ಎಂಬ ಟ್ವಿಟ್ಟರ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ನಿನ್ನೆ ಪೋಸ್ಟ್ ಆದ ಈ ವೀಡಿಯೋವನ್ನು ಈಗಾಗಲೇ ಮೂರು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.
https://twitter.com/i/status/1706979765326926262