ಡೆಸ್ಕ್ : ಗಣೇಶ ಚತುರ್ಥಿ ನಿಮಿತ್ಯ ಖಾಸಗಿ
ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಸಂಸ್ಥೆಗೆ ಗಣೇಶ ಮೂರ್ತಿಯನ್ನು ಮೆರವಣಿಗೆ ಮೂಲಕ ಕಾಲೇಜಿಗೆ ತರುತ್ತಿದ್ದ ವೇಳೆ ಅವಘಡ ಒಂದು ಸಂಭವಿಸಿದೆ.
ನಿನ್ನೆ ಮಂಗಳವಾರ(ಸೆ.19 ರಂದು) ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಯನ್ನು ಮೆರವಣಿಗೆ ಮೂಲಕ ಕಾಲೇಜಿಗೆ ತರುತ್ತಿದ್ದರು.
ಈ ವೇಳೆ ವಿದ್ಯುತ್ ಅವಘಡ ಸಂಭವಿಸಿದ ಪರಿಣಾಮ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಒಡಿಶಾದ ಕಟಕ್ ನಗರದ ನಾರಾಜ್ ಪ್ರದೇಶದಲ್ಲಿ ನಡೆದಿದೆ.
ಕಾಲೇಜಿಗೆ ವಿದ್ಯಾರ್ಥಿಗಳು ಅದ್ಧೂರಿ ಮೆರವಣಿಗೆ ಮೂಲಕ ಗಣೇಶನ ಮೂರ್ತಿಯನ್ನು ತರುತ್ತಿದ್ದರು. ಈ ವೇಳೆ ವಾಹನದ ಮೇಲಿದ್ದ ವಿದ್ಯಾರ್ಥಿ ಒಬ್ಬ ಬೃಹತ್ ಧ್ವಜವನ್ನು ರಾರಾಜಿಸುತ್ತಿದ್ದ, ಧ್ವಜವನ್ನು ಮೇಲಕ್ಕೆ ಎತ್ತಿದ ವೇಳೆ ಧ್ವಜ 11 ಕೆವಿ ವಿದ್ಯುತ್ ತಂತಿಗೆ ತಗುಲಿಗೆ ಪರಿಣಾಮ ವಿದ್ಯಾರ್ಥಿಗೆ ವಿದ್ಯುತ್ ಶಾಕ್ ತಗುಲಿದೆ.
ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆತನ ಸಂಪರ್ಕಕ್ಕೆ ಬಂದ ನಾಲ್ವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ದುರ್ಘಟನೆಯ ವಿಡಿಯೋ ಮೊಬೈಲ್ ವೊಂದರಲ್ಲಿ ಸೆರೆಯಾಗಿದೆ.
https://twitter.com/PTI_News/status/1704337196214301033?ref_src=twsrc%5Etfw%7Ctwcamp%5Etweetembed%7Ctwterm%5E1704337196214301033%7Ctwgr%5E34f0e4eb0983d4cbd9ea72d6ec0ba559ce6bc27c%7Ctwcon%5Es1_c10&ref_url=https%3A%2F%2Fapi-news.dailyhunt.in%2F