ವಿವೇಕ ವಾರ್ತೆ : ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವಿದೇಶಿ ಪ್ರಜೆಯನ್ನು ದೇವನಹಳ್ಳಿ ಪೊಲೀಸರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ವಿಮಾನದಲ್ಲಿ ಗಗನ ಸಖಿಗೆ ಲೈಂಗಿಕ ಕಿರುಕುಳ ನೀಡಿದ್ದ ವಿದೇಶಿ ಪ್ರಜೆ ಅರೆಸ್ಟ್ ಆಗಿದ್ದು, ಅಕ್ರಂ ಅಹಮದ್ ಬಂಧಿತ ಆರೋಪಿಯಾಗಿದ್ದಾನೆ. ಗಗನಸಖಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.
ಈತ ಮಾಲ್ಡೀವ್ಸ್ ನಿಂದ ಬೆಂಗಳೂರಿಗೆ ಬರ್ತಿದ್ದ ವಿಮಾನದಲ್ಲಿ ಗಗನ ಸಖಿಗೆ ನೀನ್ನ ರೇಟ್ ಎಷ್ಟು? ಎಷ್ಟಕ್ಕೆ ಬರ್ತಿಯಾ.? ಎಷ್ಟು ಡಾಲರ್ ಕೊಟ್ರೆ ಬರ್ತಿಯಾ? ಎಂದು ಕೇಳಿದ್ದಾನೆ. 100 ಡಾಲರ್ ಕೊಟ್ರೆ ಸಾಕಾ? ಅಥವಾ ಇನ್ನೂ ಬೇಕೆ ಎಂದೆಲ್ಲಾ ಕೇಳಿದ್ದಾನೆ. ಇಷ್ಟಕ್ಕೇ ಸುಮ್ಮನಾಗದೇ ಗಗನಸಖಿ ತನ್ನ ಸೀಟಿನ ಬಳಿ ಹೋಗುವಾಗ ಬ್ಯಾಡ್ ಟಚ್ ಮಾಡಿದ್ದಾನೆ.
ಬಿಜಿನೆಸ್ ವೀಸಾದಲ್ಲಿ ಅರೋಪಿ ಅಕ್ರಂ ಮಾಲ್ಡೀವ್ಸ್‌ನಿಂದ ಭಾರತಕ್ಕೆ ಪ್ರಯಾಣ ಮಾಡುತ್ತಿದ್ದಾಗ ಹೀಗೆ ಕಿರುಕುಳ ನೀಡಿದ್ದಾನೆ. ಕ್ರೂ ಸರ್ವಿಸ್ ಗೆ 10 ಡಾಲರ್ ಬದಲಾಗಿ 100 ಡಾಲರ್ ನೀಡ್ತಿನಿ. ಅದನ್ನು ನೀನೆ ಇಟ್ಟಿಕೋ ಎಂದು ಹೇಳಿದ್ದಾನೆ. ನಂತ್ರ ಗಗನ ಸಖಿ ದೇಹವನ್ನು ಅಸಭ್ಯವಾಗಿ ಮುಟ್ಟಿದ್ದಾನೆ.
ಇಷ್ಟಕ್ಕೇ ಸುಮ್ಮನಾಗದೇ, ವಿಮಾನ ಲ್ಯಾಂಡ್ ಆಗುವ ಸಮಯದಲ್ಲಿ ಮೇಲೆ ಎದ್ದು ನಿಲ್ಲುತಿದ್ದನು. ಈ ವೇಳೆ ಕುಳಿತುಕೊಳ್ಳಿ ಎಂದು ತಿಳಿಸಿದಾಗ ಮತ್ತೋರ್ವ ಗಗನ ಸಖಿಗೆ I love rough things and you are very rough ಎಂದು ಹೇಳಿ ಮುಜುಗರ ಉಂಟು ಮಾಡಿದ್ದನು ಎನ್ನಲಾಗಿದೆ.