ವಿವೇಕ ವಾರ್ತೆ : ಮೈಸೂರು ಜಿಲ್ಲೆಯ ಜಿಲ್ಲೆಯ ಟಿ ನರಸೀಪುರ ತಾಲೂಕಿನ ಹನುಮನಹಾಳು ಗ್ರಾಮದಲ್ಲಿ ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಮನುರಾಣಿ ಎಂದು ತಿಳಿದುಬಂದಿದೆ.
ಕುಳ್ಳನಕೊಪ್ಪಲು ಗ್ರಾಮದ ಮನುರಾಣಿಯನ್ನು ಕಳೆದ ಐದಾರು ವರ್ಷಗಳ ಹಿಂದೆ ಮಂಜು ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು. ಆಕೆಯ ಕುಟುಂಬಸ್ಥರು ಮಂಜು ಕೇಳಿದಷ್ಟು ವರದಕ್ಷಿಣೆ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ. ಆದರೆ ಒಂದೆರಡು ವರ್ಷದಲ್ಲೇ ಮಂಜುವಿನ ನಿಜ ಬಣ್ಣ ಬಯಲಾಗಿದೆ.
ಮಂಜು ಅದೇ ಗ್ರಾಮದ ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನು. ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ವಿಚಾರವಾಗಿ ಮನುರಾಣಿ ಮೊದಲಿಗೆ ಗಂಡನನ್ನ ಪ್ರಶ್ನಿಸಿದ್ದಾಳೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ವಿಚಾರವನ್ನು ಕುಟುಂಬಸ್ಥರ ಮುಂದೆಯು ಹೇಳಿಕೊಂಡಿದ್ದಾಳೆ. ಆಬಳಿಕ ಗ್ರಾಮಸ್ಥರ ಜೊತೆ ಸೇರಿ ರಾಜಿ ಪಂಚಾಯಿತಿ ಮಾಡಿದ್ದಾರೆ.
ಆದರೂ ಮಂಜು ಮಾತ್ರ ಇಷ್ಟೆಲ್ಲ ಆದರೂ ತನ್ನ ಹಳೆ ಚಾಳಿ ಬಿಟ್ಟಿರಲಿಲ್ಲ. ಇದರಿಂದ ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತ ಮಗಳು ಆತ್ಮಹತ್ಯೆ ದಾರಿ ಹಿಡಿದ್ದಾಳೆ. ಆದ್ರೆ, ಇದು ಆತ್ಮಹತ್ಯೆ ಅಲ್ಲ, ಗಂಡನೆ ವಿಷ ಕುಡಿಸಿ ಸಾಯಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಅಲ್ಲದೇ ಮನುರಾಣಿ ಅಕ್ರಮ ಸಂಬಂಧದ ಕುರಿತು ಪ್ರಶ್ನೆ ಮಾಡಿದ ಮೇಲೆ ಗಂಡ ವರದಕ್ಷಿಣಿ ಕೇಳುವುದಕ್ಕೆ ಶುರು ಮಾಡಿದ್ದನಂತೆ. ಹಸು ಸಾಕಬೇಕು, ವ್ಯವಸಾಯಕ್ಕೆ ಬೇಕು ಎಂದು ಆಗಾಗ ಹಣ ಕೇಳೋಕೆ ಶುರುಮಾಡಿದ್ದ. ಹೀಗಾಗಿ ಮಗಳು ಚೆನ್ನಾಗಿರಲಿ ಎಂದು ಫೋಷಕರು ಸಾಲ ಮಾಡಿ ಮಂಜುವಿಗೆ ಹಣವನ್ನು ಕೊಟ್ಟಿದ್ದರಂತೆ. ಆದ್ರೆ, ಇದೀಗ ಮಗಳನ್ನೆ ಕೊಂದಿದ್ದಾನೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ ಎಂದು ತಿಳಿದುಬಂದಿದೆ.