ವಿವೇಕವಾರ್ತೆ – ಪತ್ನಿಯೊಬ್ಬಳು ಉಪ್ಪಿಟ್ಟಿನಲ್ಲಿ ವಿಷ ಹಾಕಿ ಗಂಡನನ್ನು ಕೊಲ್ಲಲು ಯತ್ನಿಸಿರುವ ಘಟನೆ ((Murder Attempt)) ಜಿಲ್ಲೆಯ ಸವದತ್ತಿ ತಾಲೂಕಿನ ಗೋರೆಬಾಳ ಗ್ರಾಮದಲ್ಲಿ ನಡೆದಿದೆ. ವಿಷಪೂರಿತ ಉಪ್ಪಿಟ್ಟು ತಿಂದು ಮನೆಯಲ್ಲಿದ್ದ ಬೆಕ್ಕು, ನಾಯಿ ಮೃತಪಟ್ಟಿದ್ದು, ಗಂಡ ಅಸ್ವಸ್ಥನಾಗಿ ಆಸ್ಪತ್ರೆ ಸೇರಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ನಿಂಗಪ್ಪ ಪಕೀರಪ್ಪ ಹಮಾನಿ (35) ಉಪ್ಪಿಟ್ಟು ತಿಂದು ಆಸ್ಪತ್ರೆ ಸೇರಿರುವ ಪತಿ, ಸಾವಕ್ಕ ನಿಂಗಪ್ಪ ಹಮಾನಿ (32) ಪತಿಗೆ ಉಪ್ಪಿಟ್ಟಿನಲ್ಲಿ ವಿಷ ಉಣಿಸಿತ ಪತ್ನಿ. ಉಪ್ಪಿಟ್ಟು ತಿಂದು ಅಸ್ವಸ್ಥನಾಗಿರುವ ಪಕೀರಪ್ಪ ಹಮಾನಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ತನ್ನ ಸಹೋದರ ಪಕೀರಪ್ಪ ಲಕ್ಷ್ಮಣ ಸಿಂದೋಗಿ ಜತೆ ಸೇರಿ ಗಂಡನಿಗೆ ಚಟ್ಟ ಕಟ್ಟಲು ಸಾವಕ್ಕ ಪ್ಲ್ಯಾನ್ ಮಾಡಿದ್ದಳು. ಗಂಡನ ಹೆಸರಿನಲ್ಲಿದ್ದ ಎರಡು ಎಕರೆ ಜಮೀನು ತನಗೆ ಸೇರಬೇಕು ಈ ರೀತಿಯ ತಂತ್ರ ಹೂಡಿದ್ದಳು ಎನ್ನಲಾಗಿದೆ. ಗಂಡ ಸತ್ತರೆ ತನಗೆ ಆಸ್ತಿ ಸೇರುತ್ತದೆ ಎಂಬ ದುರುದ್ದೇಶದಿಂದ ಐನಾತಿ ಪತ್ನಿ ಕೃತ್ಯ ಎಸಗಿದ್ದಾಳೆ.
ಪ್ರಕರಣದಲ್ಲಿ ಪತ್ನಿ ಸಾವಕ್ಕ ಹಾಗೂ ಆಕೆಯ ಸಹೋದರ ಪಕೀರಪ್ಪ ಲಕ್ಷ್ಮಣ ಸಿಂದೋಗಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.