ವಿವೇಕ ವಾರ್ತೆ : ಖ್ಯಾತ ಬಹುಭಾಷಾ ನಟಿ, ಮಾಜಿ ಸಂಸದೆ ಜಯಪ್ರದಾ ಅವರಿಗೆ ಚೆನ್ನೈನ ನ್ಯಾಯಾಲವು 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ, 5 ಸಾವಿರ ರೂಪಾಯಿ ದಂಡವನ್ನು ಹಾಕಲಾಗಿದೆ.
ನಟಿ ಜಯಪ್ರದಾ ಅವರು ನಡೆಸುತ್ತಿದ್ದ ಚಿತ್ರಮಂದಿರದ ಕೆಲಸಗಾರರಿಗೆ ಸೂಕ್ತ ಇಎಸ್ಐ ಹಣ ನೀಡಿಲ್ಲ ಎಂದು ಕೇಸ್ ದಾಖಲಾಗಿತ್ತು. ಅದರ ವಿಚಾರಣೆ ನಡೆಸಿರುವ ನ್ಯಾಯಾಲಯವು ಈ ತೀರ್ಪು ನೀಡಿದೆ.
ಹಣ ಪಾವತಿಸದ ಕಾರಣ ಜಯಪ್ರದಾ ವಿರುದ್ಧ ಕಾರ್ಮಿಕರು ಅಸಮಾಧಾನಗೊಂಡಿದ್ದರು.
ಈ ಹಿಂದೆ ಕೂಡ ನಟಿ ಜಯಪ್ರದಾ ಥಿಯೇಟರ್ ಕಾಂಪ್ಲೆಕ್ಸ್ಗೆ ಸಂಬಂಧಿಸಿದಂತೆ ಸುಮಾರು 20 ಲಕ್ಷ ರೂಪಾಯಿ ತೆರಿಗೆ ಪಾವತಿಸಿರಲಿಲ್ಲ. ಆಗ ಸಿಟಿ ಸಿವಿಲ್ ನ್ಯಾಯಾಲಯದ ಆದೇಶದಂತೆ ಪಾಲಿಕೆ ಅಧಿಕಾರಿಗಳು ಥಿಯೇಟರ್ನ ಕುರ್ಚಿ, ಪ್ರೊಜೆಕ್ಟರ್ಗಳನ್ನು ಜಪ್ತಿ ಮಾಡಿದ್ದರು.
ನಟಿ ಜಯಪ್ರದಾ ಅವರು ರಾಮ್ ಕುಮಾರ್ ಮತ್ತು ರಾಜ ಬಾಬು ಜೊತೆ ಸೇರಿ ಚೆನ್ನೈನಲ್ಲಿ ಎರಡು ಚಿತ್ರಮಂದಿರಗಳನ್ನು ನಡೆಸುತ್ತಿದ್ದರು. ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಬಳದಲ್ಲಿ ಚಿತ್ರಮಂದಿರದ ಆಡಳಿತ ಮಂಡಳಿಯವರು ಇಎಸ್ಐ ಹಣ ಕಡಿತ ಮಾಡಿಕೊಳ್ಳುತ್ತಿದ್ದರು. ಆದರೆ ಅದನ್ನು ಸರ್ಕಾರಿ ಕಾರ್ಮಿಕರ ವಿಮಾ ನಿಗಮಕ್ಕೆ ಜಯಪ್ರದಾ ಪಾವತಿಸುತ್ತಿರಲಿಲ್ಲ.
ತಮಗೆ ತಮ್ಮ ಪಾಲಿನ ಇಎಸ್ಐ ಸಿಗುತ್ತಿಲ್ಲ ಎಂದು ಕಾರ್ಮಿಕರೊಬ್ಬರು ತಕರಾರು ತೆಗೆದಿದ್ದರು. ಆಗ ಸರ್ಕಾರಿ ಕಾರ್ಮಿಕರ ವಿಮಾ ನಿಗಮವು ನಟಿ ಜಯಪ್ರದಾ ವಿರುದ್ಧ ದೂರು ದಾಖಲಿಸಿತ್ತು.