ವಿವೇಕ ವಾರ್ತೆ : ತುಮಕೂರಿನ ಪಾವಗಡದಲ್ಲಿ ಮಹಿಳೆಯೊಬ್ಬಳು ಬ್ಯಾಂಕ್‌ನ ಗೋಡೆ ಹಾರಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್, ಮೊಬೈಲ್ ನಂಬರ್ ಲಿಂಕ್ ಜೋಡಣೆ ಮಾಡಿಸಿದ್ದಾಳೆ.
ಮಹಿಳರ ಹರಸಾಹಸ ಪಟ್ಟು ಪಾವಗಡ ಪಟ್ಟಣದ SBI ಬ್ಯಾಂಕ್‌ನ ಕಂಪೌಂಡ್ ಗೋಡೆ ಹಾರಿ ಮೊಬೈಲ್ ನಂಬರ್ ಲಿಂಕ್ ಮಾಡಿಸಿದ್ದಾಳೆ. ಕಾಂಗ್ರೆಸ್ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆ ಪಡೆಯಲು ಖಾತೆಗೆ ಆಧಾರ್, ಮೊಬೈಲ್ ಲಿಂಕ್ ಮಾಡಬೇಕು.
ಹೀಗಾಗಿ, ಬ್ಯಾಂಕ್ ಮುಂದೆ ಜನರು ಸಾಲುಗಟ್ಟಿ ನಿಂತಿದ್ದರು. ಹೀಗಾಗಿ ಬ್ಯಾಂಕ್ ಮುಂದೆ ನೂಕುನುಗ್ಗಲು ಉಂಟಾಗಿತ್ತು. ಆಧಾರ್ ಕಾರ್ಡ್ ಲಿಂಕ್ ಜೋಡಣೆಗಾಗಿ ಪ್ರಯಾಸಬಿದ್ದು ಬ್ಯಾಂಕ್ ಗೋಡೆ ಏರಿದ್ದಾಳೆ ಎನ್ನಲಾಗಿದೆ.
ಗೃಹ ಲಕ್ಷ್ಮಿ ಅಷ್ಟೇಯಲದೇ ಅನ್ನಭಾಗ್ಯ ಯೋಜನೆಗಳಡಿ ಫಲಾನುಭವಿಗಳಾಗಲು ಬ್ಯಾಂಕ್ ಖಾತೆ ಹೊಂದಿರಬೇಕು. ಅಲ್ಲದೇ ಖಾತೆಗಳಿಗೆ ಆಧಾರ್ ಮತ್ತು ಮೊಬೈಲ್ ನಂಬರ್ ಗಳು ಲಿಂಕ್ ಆಗಬೇಕಿರುವುದು ಅತ್ಯವಶ್ಯಕವಾಗಿದೆ.
ಹೀಗಾಗಿ ಬ್ಯಾಂಕುಗಳ ಮುಂದೆ ಜನ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಜಾತ್ರೆಯಂತೆ ನೆರೆದಿದ್ದಾರೆ. ತಳ್ಳಾಟ-ನೂಕಾಟದ ನಡುವೆ ಕೆಲವರು ಬ್ಯಾಂಕಿನ ಕಂಪೌಂಡ್ ಹಾರುತ್ತಿದ್ದಾರೆ.