Sunday, October 1, 2023

ಕೊಲೆ ನಡೆದು ಕೆಲವೇ ತಾಸೀನಲ್ಲಿ ಆರೋಪಿಯ ಬಂಧಿಸಿದ ಪೊಲೀಸರು

ವಿವೇಕವಾರ್ತೆ : ಮಹದೇವಪುರದ ಮಹೇಶ್ವರಿನಗರದಲ್ಲಿ ನಡೆದಿದ್ದ ಯುವತಿಯ ಕೊಲೆ ಪ್ರಕರಣವನ್ನು ಘಟನೆ ನಡೆದ ಕೆಲವೇ ತಾಸೀನಲ್ಲಿ ಭೇದಿಸಿರುವ ಮಹದೇವಪುರ ಠಾಣೆ ಪೊಲೀಸರು, ಪಕ್ಕದ ಮನೆಯಲ್ಲೇ ನೆಲೆಸಿದ್ದ ಹಂತಕನನ್ನು ಬಂಧಿಸಿದ್ದಾರೆ.

ಒಡಿಶಾ ಮೂಲದ ಹಾಗೂ ಮಹೇಶ್ವರಿನಗರ ನಿವಾಸಿ ಕೃಷ್ಣ ಚಂದ್ರ ಸೇತಿ(೨೮) ಬಂಧಿತ. ಆರೋಪಿಯು ಗುರುವಾರ ರಾತ್ರಿ ಪಕ್ಕದ ಮನೆಯ ಮಹಾನಂದ(೨೧) ಎಂಬ ಯುವತಿಯನ್ನು ಬಲವಂತವಾಗಿ ಮನೆಯೊಳಗೆ ಎಳೆದುಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವೇಳೆ ಆಕೆ ಜೋರಾಗಿ ಚೀರಾಡಿ ಪ್ರತಿರೋಧವೊಡ್ಡಿದಾಗ ಆಕೆಯ ಕುತ್ತಿಗೆಗೆ ಧರಿಸಿದ್ದ ದಾರವನ್ನು ಬಿಗಿಯಾಗಿ ಹಿಡಿದು ಬಾಯಿ ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಮುಂಜಾನೆ ಮೃತದೇಹವನ್ನು ಆಕೆಯ ಮನೆ ಎದುರು ಎಸೆದು ಮನೆ ಸೇರಿಕೊಂಡಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಘಟನೆ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾದದ ಧೂಳು ನೀಡಿದ ಸುಳಿವು:
ತನಿಖೆಗೆ ಇಳಿದ ಪೊಲೀಸರು, ಮೃತದೇಹವನ್ನು ಕೂಲಂಕಷವಾಗಿ ತಪಾಸಣೆ ಮಾಡಿದಾಗ, ಮಹಾನಂದಳ ಚಪ್ಪಲಿಗಳು ಮನೆ ಬಳಿಯೇ ಇದ್ದವು. ಇನ್ನು ಮೃತದೇಹ ಪಾದಗಳಲ್ಲಿ ಯಾವುದೇ ಧೂಳು ಇಲ್ಲದಿರುವುದು ಕಂಡು ಬಂದಿತ್ತು. ಮನೆಯ ಸುತ್ತಮುತ್ತಲೇ ಮಹಾನಂದಳ ಕೊಲೆಯಾಗಿದ್ದು, ಹಂತಕರು ಸಮೀಪದಲ್ಲೇ ಇರಬಹುದು ಎಂದು ಶಂಕಿಸಿದ್ದರು. ಈ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದ ಪೊಲೀಸರು, ಅಕ್ಕಪಕ್ಕದ ಮನೆಯವರನ್ನು ವಿಚಾರಣೆ ಮಾಡಿದಾಗ, ನೆರೆ ಮನೆಯ ಕೃಷ್ಣ ಚಂದ್ರ ಸೇತಿ ನಡವಳಿಕೆ ಬಗ್ಗೆ ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರಮ್‌ನಲ್ಲಿ ಇಟ್ಟಿದ್ದ:
ಆರೋಪಿಯು ನಗರದ ಟೆಕ್ ಪಾರ್ಕ್‌ವೊಂದರಲ್ಲಿ ಸೆಕ್ಯೂರಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈತನ ಪತ್ನಿ ಭಾಗ್ಯಶ್ರೀ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಗುರುವಾರ ರಾತ್ರಿ ೧೨ ಗಂಟೆ ವರೆಗೆ ಪತ್ನಿ ಭಾಗ್ಯಶ್ರೀಗೆ ಕೆಲಸವಿತ್ತು. ಹೀಗಾಗಿ ಮನೆಯಲ್ಲಿ ಒಬ್ಬನೇ ಇದ್ದಳು. ರಾತ್ರಿ ೮ ಗಂಟೆ ಸುಮಾರಿಗೆ ಮಹಾನಂದ ಮನೆಯಿಂದ ಹೊರಗೆ ಬಂದಾಗ, ಆರೋಪಿ ಏಕಾಏಕಿ ಆಕೆಯನ್ನು ತನ್ನ ಮನೆಯೊಳಗೆ ಎಳೆದುಕೊಂಡು ಬಾಗಿಲು ಹಾಕಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಆಕೆ ಕಿರುಚಾಡಲು ಮುಂದಾದಾಗ, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಮನೆಯಲ್ಲಿದ್ದ ಡ್ರಮ್ ಒಳಗೆ ಬಚ್ಚಿಟ್ಟಿದ್ದ. ಮುಂಜಾನೆ ೪ ಗಂಟೆ ಸುಮಾರಿಗೆ ಮೃತದೇಹವನ್ನು ಡ್ರಮ್ ನಿಂದ ಹೊರಗೆ ತೆಗೆದು ಮಹಾನಂದಳ ಮನೆ ಎದುರು ಎಸೆದು ಮನೆ ಸೇರಿಕೊಂಡಿದ್ದಾನೆ. ಬೆಳಗ್ಗೆ ಮೃತದೇಹ ಪತ್ತೆಯಾಗಿ ಜನ ಜಮಾಯಿಸಿದ್ದರೂ ಆರೋಪಿ ಮಾತ್ರ ಮನೆಯಿಂದ ಹೊರಗೆ ಬಂದಿಲ್ಲ. ಪೊಲೀಸರು ವಠಾರದಲ್ಲಿರುವ ಪ್ರತಿಯೊಬ್ಬರನ್ನು ವಿಚಾರಣೆ ಮಾಡುವಾಗ, ಕೃಷ್ಣ ಚಂದ್ರನನ್ನು ಕರೆದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆತ ಅನುಮಾನಾಸ್ಪದವಾಗಿ ವರ್ತಿಸಿದಾಗ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

ಭಾರತದಲ್ಲಿ ಈ ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಹೆಚ್ಚು ʻಅಶ್ಲೀಲ ಚಿತ್ರʼ ವೀಕ್ಷಿಸುತ್ತಾರೆ : ತಜ್ಞರಿಂದ ಆತಂಕಕಾರಿ ಮಾಹಿತಿ.!

ವಿವೇಕ ವಾರ್ತೆ : ಭಾರತದಲ್ಲಿ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪೋರ್ನ್ ವೀಕ್ಷಿಸುತ್ತಿದ್ದಾರೆ. ಚಿಕ್ಕ ಮಕ್ಕಳು ಪೋರ್ನ್ ನೋಡುತ್ತಿದ್ದು, ಅಶ್ಲೀಲತೆಗೆ ಗುರಿಯಾಗುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಪೋರ್ನ್ ಸೈಟ್‌ಗಳನ್ನು ನಿರ್ಬಂಧಿಸುವ ನಿಯಮಗಳ ಹೊರತಾಗಿಯೂ,...

ಬುದ್ದಿಮಾತು ಹೇಳಿದ ಪೋಷಕರು ; ವಿಷ ಕುಡಿದು ಸಾವಿಗೀಡಾದ 19 ರ ಯುವತಿ.!

ವಿವೇಕವಾರ್ತೆ : ಪೋಷಕರು ಬುದ್ಧಿವಾದ ಹೇಳಿದ್ದರಿಂದ ನೊಂದ ಬಿ.ಎ ಪದವಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರು ಗ್ರಾ.ಪಂ. ವ್ಯಾಪ್ತಿಯ ಹರಾವರಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು...

ಲೋಕಾಯುಕ್ತ ಬಲೆಗೆ ಬಿದ್ದ BBMP ಸಹಾಯಕ ಕಂದಾಯ ಅಧಿಕಾರಿ.!

ವಿವೇಕವಾರ್ತೆ : ಬಿಬಿಎಂಪಿಯ ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ ಚಂದ್ರಪ್ಪ ಬೀರಜ್ಜನವರ್ ಮತ್ತು ಗೋಪಾಲ್...
- Advertisment -

Most Popular

ನೋಡ ನೋಡುತ್ತಿದ್ದಂತೆಯೇ ಹೂವು ನುಂಗುವ ಗಣೇಶ ಮೂರ್ತಿ ; ಅಚ್ಚರಿಯ ವಿಡಿಯೋ ವೈರಲ್.!

ವಿವೇಕವಾರ್ತೆ : ಗಣೇಶನ ಮೂರ್ತಿ ಹಾಲು ಕುಡಿಯೋದನ್ನ ಕೇಳಿದ್ದೇನೆ, ನೀರು ಕುಡಿಯೋದನ್ನು ಕೇಳಿದ್ದೇವೆ. ಆದರೆ ಇಲ್ಲೋಬ್ಬ ಗಣೇಶ ತನಗೆ ಇಡಿಸಿದ ಹೂವನ್ನೇ ನುಂಗುತ್ತಿದ್ದಾನೆ. ಹೌದು, ಇಂಥದೊಂದು ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಲೋಕಾಯುಕ್ತ ಬಲೆಗೆ ಬಿದ್ದ BBMP ಸಹಾಯಕ ಕಂದಾಯ ಅಧಿಕಾರಿ.!

ವಿವೇಕವಾರ್ತೆ : ಬಿಬಿಎಂಪಿಯ ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ ಚಂದ್ರಪ್ಪ ಬೀರಜ್ಜನವರ್ ಮತ್ತು ಗೋಪಾಲ್...
error: Content is protected !!