ವಿವೇಕವಾರ್ತೆ : ಬೆಂಗಳೂರು ನಗರದ ತಿರುಮನಹಳ್ಳಿಯ ಬೇಕರಿಯಲ್ಲಿ ಆರ್ಡರ್ ಕೊಟ್ಟ ಕೇಕ್ನಲ್ಲಿ ಹೆಸರಿನ ಸ್ಪೆಲಿಂಗ್ ತಪ್ಪಾಗಿದ್ದ ಹಿನ್ನಲೆ ವ್ಯಕ್ತಿಯೊಬ್ಬ ಬೇಕರಿಯ ಸಿಬ್ಬಂದಿಗೆ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ನಡೆದಿದೆ.
ಚಾಕುವಿನಿಂದ ಬೇಕರಿ ಸಿಬ್ಬಂದಿ ವಂಶಿ ಎಂಬುವವರ ಎರಡು ಕೈಗಳಿಗೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಗಾಯಾಳು ಬೇಕರಿ ಸಿಬ್ಬಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪರಿಚಿತ ವ್ಯಕ್ತಿಯೊಬ್ಬ ರಾತ್ರಿ 8 ಗಂಟೆಯ ಸುಮಾರಿಗೆ ಬೇಕರಿಗೆ ಬಂದು ಕೇಕ್ ಆರ್ಡರ್ ಮಾಡಿದ್ದ.
ಬಳಿಕ ಕೇಕ್ ಕೊಟ್ಟು ಹಣ ಕೇಳಿದಾಗ ಸ್ಪೆಲಿಂಗ್ ಸರಿಯಿಲ್ಲವೆಂದು ಎಂದು ಗಲಾಟೆ ಶುರು ಮಾಡಿ, ಕೊನೆಗೆ ಹಣ ಕೇಳುತ್ತಿಯಾ ಎಂದು ಚಾಕುವಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ.