ವಿವೇಕವಾರ್ತೆ : ಕುಂಬಳಕಾಯಿ ಬೀಜಗಳು ತುಂಬಾ ಚಿಕ್ಕದಾಗಿದ್ದರೂ, ನಮ್ಮ ವ್ಯವಸ್ಥೆಗಳು ಅವಲಂಬಿಸಿರುವ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಕುಂಬಳಕಾಯಿಯ ಚಿಕ್ಕ ಬೀಜಗಳು ನಾವು ಅಂದಾಜಿಸುವುದಕ್ಕಿಂತ ಹೆಚ್ಚಿನ ಪೋಷಕಾಂಶಗಳಿಂದ ತುಂಬಿವೆ. ಕುಂಬಳಕಾಯಿ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.
* ಕುಂಬಳಕಾಯಿ ಬೀಜದಲ್ಲಿರುವ ಸತುವು ಥೈರಾಯ್ಡ್ ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ನಿಮಗೆ ಥೈರಾಯ್ಡ್ ಕಾಯಿಲೆ ಇದ್ದರೆ, ಕುಂಬಳಕಾಯಿ ಬೀಜಗಳನ್ನು ನಿಮ್ಮ ಆಹಾರದ ಭಾಗವಾಗಿ ಮಾಡಿ.
* ಸತುವಿನ ಅಂಶವು ದೇಹದಲ್ಲಿ ಕಡಿಮೆ ಇದ್ದರೆ ವೀರ್ಯದ ಗುಣಮಟ್ಟ ಕಡಿಮೆಯಾಗುವುದು. ಪುರುಷರಲ್ಲಿ ಬಂಜೆತನವು ಕಾಡುವುದು. ಆದರೆ ಕುಂಬಳಕಾಯಿ ಬೀಜದಲ್ಲಿ ಅಧಿಕ ಮಟ್ಟದ ಸತುವಿನ ಅಂಶವಿದ್ದು, ಇದನ್ನು ಸೇವನೆ ಮಾಡಿದರೆ ಆಗ ವೀರ್ಯದ ಗುಣಮಟ್ಟವು ಹೆಚ್ಚಾಗುವುದು.
* ಹೊಟ್ಟೆ, ಶ್ವಾಸಕೋಶ, ಸ್ತನಗಳು, ಕರುಳು ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಇದು ಕಡಿಮೆ ಮಾಡುವುದು. ಕುಂಬಳಕಾಯಿ ಬೀಜ ಸೇವನೆ ಮಾಡಿದರೆ ಆಗ ಮಹಿಳೆಯರಲ್ಲಿ ಋತುಬಂಧದ ಬಳಿಕ ಕಂಡುಬರುವ ಸ್ತನಗಳ ಕ್ಯಾನ್ಸರ್ ಅಪಾಯ ತಗ್ಗಿಸಬಹುದು.
* ಕುಂಬಳಕಾಯಿ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳಿದ್ದು, ಇದು ಹೊಟ್ಟೆಯನ್ನು ದೀರ್ಘಕಾಲ ತುಂಬಿರುವಂತೆ ಮಾಡುವುದು. ಇದರಲ್ಲಿನ ನಾರಿನಾಂಶವು ಬಯಕೆ ಕಡಿಮೆ ಮಾಡುವುದು. ಅನಾರೋಗ್ಯಕಾರಿ ತಿನ್ನುವುದನ್ನು ತಪ್ಪಿಸುವುದು.
* ಕುಂಬಳಕಾಯಿ ಬೀಜವು ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿ ನಿಯಂತ್ರಣದಲ್ಲಿಡಲು ಸಹಕಾರಿ. ಇದರಲ್ಲಿ ಜೀರ್ಣಿಸಬಲ್ಲ ಪ್ರೋಟೀನ್ ಇದ್ದು, ಇದರಿಂದಾಗಿ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡುವುದು.
* ಈ ಬೀಜದಲ್ಲಿ ಅಧಿಕ ಮಟ್ಟದ ಆಂಟಿಆಕ್ಸಿಡೆಂಟ್ ಮತ್ತು ಫೈಥೋಕೆಮಿಕಲ್ ಇದ್ದು, ಪ್ರತಿರೋಧಕ ಶಕ್ತಿ ವೃದ್ಧಿಸುವುದು.
* ಕುಂಬಳಕಾಯಿ ಬೀಜದಲ್ಲಿ ಆರೋಗ್ಯಕಾರಿ ಕೊಬ್ಬು, ನಾರಿನಾಂಶ ಮತ್ತು ಆಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿದ್ದು, ಇದು ಅಪಧಮನಿ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಏಕಪರ್ಯಾಪ್ತ ಕೊಬ್ಬಿನಾಮ್ಲಗಳು ಇದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು. ಒಳ್ಳೆಯ ಕೊಲೆಸ್ಟ್ರಾಲ್ ನ್ನು ವೃದ್ಧಿಸುವುದು. ಇದರಲ್ಲಿ ಇರುವಂತಹ ಮೆಗ್ನೇಶಿಯಂ ಅಂಶವು ರಕ್ತದೊತ್ತಡ ನಿಯಂತ್ರಣದಲ್ಲಿ ಇಡಲು ಸಹಕಾರಿ.
* ಈ ಬೀಜದಲ್ಲಿ ಅಧಿಕ ಮಟ್ಟದ ಆಂಟಿಆಕ್ಸಿಡೆಂಟ್ ಮತ್ತು ಫೈಥೋಕೆಮಿಕಲ್ ಇದ್ದು, ಪ್ರತಿರೋಧಕ ಶಕ್ತಿ ವೃದ್ಧಿಸುವುದು ಮತ್ತು ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸುವುದು.
* ಕುಂಬಳಕಾಯಿ ಬೀಜದಲ್ಲಿ ಇರುವಂತಹ ಕುಕುರ್ಬಿಟಾಸಿನ್ ಎನ್ನುವ ಅಮಿನೋ ಆಮ್ಲವು ಕೂದಲಿನ ಬೆಳವಣಿಗೆಗೆ ತುಂಬಾ ಸಹಕಾರಿ. ಇದು ವಿಟಮಿನ್ ಸಿಯಿಂದಲೂ ಸಮೃದ್ಧವಾಗಿದ್ದು, ಕೂದಲಿನ ಬೆಳವಣಿಗೆಗೆ ಸಹಕಾರಿ. ಕುಂಬಳಕಾಯಿ ಬೀಜದ ಎಣ್ಣೆಯನ್ನು ತಲೆಗೆ ಹಾಕಬಹುದು ಅಥವಾ ನಿತ್ಯವೂ ಕುಂಬಳಕಾಯಿ ಬೀಜ ಸೇವನೆ ಮಾಡಬಹುದು.