ಕಾರ ಮೇಲೆ ಕುಳಿತ ಪಾರಿವಾಳ : ಬೇಟೆಯಾಡಲು ಸ್ಕೆಚ್ ಹಾಕಿದ 3 ಬೆಕ್ಕುಗಳು ; ಆಮೇಲೇನಾಯ್ತು ಈ ನೋಡಿ.!

Published on

spot_img
spot_img

ವಿವೇಕವಾರ್ತೆ : ಪ್ರಾಣಿ – ಪಕ್ಷಗಳ ಕುರಿತು ಅನೇಕರು ಆಕರ್ಷಿತರಾಗಿರುತ್ತಾರೆ. ಮತ್ತೆ ಕೆಲವರು ಪಾರಿವಾಳ ಮತ್ತು ಬೆಕ್ಕುಗಳನ್ನು ಮನೆಯಲ್ಲಿಯೇ ಸಾಕಿ ಖುಷಿ ಪಡುತ್ತಾರೆ.

ಇನ್ನು ಬೆಕ್ಕುಗಳು ತಮ್ಮ ಕುತೂಹಲಕಾರಿ ಮತ್ತು ತುಂಟ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದು, ಈ ನಡವಳಿಕೆಯೇ ಕೆಲವೊಮ್ಮೆ ಅವುಗಳನ್ನು ತೊಂದರೆಗೆ ಸಿಲುಕಿಸಿ ನಮ್ಮ ಮೊಗದಲ್ಲಿ ನಗು ತರಿಸುತ್ತವೆ. ಬೆಕ್ಕುಗಳು ಬೇಟೆಯಾಡುವುದು ಹೊಸತೇನಲ್ಲ. ಅದರಲ್ಲೂ ನಗರ ಪ್ರದೇಶಗಳಲ್ಲಿ ಬೆಕ್ಕುಗಳು ಹೆಚ್ಚಾಗಿ ಪಾರಿವಾಳಗಳ ಬೆನ್ನ ಹಿಂದೆ ಬೀಳುತ್ತವೆ.

“shouldhaveacat” ಎಂಬ ಹೆಸರಿನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಲಾಗಿದ್ದು, ಸದ್ಯ ವೈರಲ್ ಆಗಿರೋ ವಿಡಿಯೋದಲ್ಲಿ 3 ಪುಟ್ಟ ಬೆಕ್ಕುಗಳ ಗುಂಪೊಂದು ಒಂಟಿಯಾಗಿ ಕಾರಿನ ಮೇಲೆ ಕುಳಿತ ಪಾರಿವಾಳವನ್ನು ಹಿಡಿಯಲು ಹೋಗಿ ವಿಫಲವಾಗಿರುವ ದೃಶ್ಯ ನಮ್ಮ ಗಮನ ಸೆಳೆಯುತ್ತಿದೆ. ಒಂದು ಪಾರಿವಾಳ ಕಾರಿನ ಬಾನೇಟ್ ಮೇಲೆ ಕುಳಿತಿರುತ್ತದೆ. ಈ ಬಾನೇಟ್  ಮೇಲೆ ಕುಳಿತ ಪಾರಿವಾಳವನ್ನು ಬೇಟೆಯಾಡಲು ನೆಲದ ಮೇಲಿದ್ದ 3 ಪುಟ್ಟ ಬೆಕ್ಕುಗಳು ಹೊಂಚು ಹಾಕುತ್ತಿರುತ್ತವೆ.

ಸ್ವಲ್ಪವೇ ಸ್ವಲ್ಪ ಹೊತ್ತಿನ ಬಳಿಕ ಒಂದು ಬೆಕ್ಕು ಕಾರಿನ ಮೇಲೆ ಹತ್ತಿ ದಾಳಿ ಮಾಡಿಯೇ ಬಿಡುತ್ತದೆ. ಇನ್ನೇನು ಬೇಟೆ ಸಕ್ಸೇಸ್ ಆಗಿಯೇ ಬಿಡ್ತು ಎನ್ನುವಾಗ ಪಾರಿವಾಳ ಹಾರಿ ಹೋಗುತ್ತದೆ.

ಸದ್ಯ ವೈರಲ್ ಆಗಿರೋ ಈ ವಿಡಿಯೊವನ್ನು ಈಗಾಗಲೇ 7 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದು, ಹಲವರು ಕಮೆಂಟ್‌ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಕ್ಕುಗಳ ದುಃಸ್ಥಿತಿಯನ್ನು ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ, ಇನ್ನೊಬ್ಬರು ಆ ಒಂದು ಬೆಕ್ಕಿನ ಕಾರಣದಿಂದಾಗಿ ಪಾರಿವಾಳ ತಪ್ಪಿಸಿಕೊಂಡಿತು ಎಂದು ಹೇಳಿದ್ದಾರೆ.

ಹಾಗೇಯೇ “ಆ ಒಂದು ಬೆಕ್ಕು ಇಬ್ಬರ ಪ್ಲ್ಯಾನ್‌ ಹಾಳು ಮಾಡಿತುʼʼ ಎಂದು ಹೇಳಿದರೆ, ʼʼಎಲ್ಲ ಗುಂಪಿನಲ್ಲಿ ಅಂತಹ ಒಬ್ಬ ಸ್ನೇಹಿತ ಇದ್ದೇ ಇರುತ್ತಾನೆʼʼ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಅಲ್ಲದೆ “2 ಮಂದಿ ಸಂಚು ರೂಪಿಸಿದರೆ ಕೇವಲ 1 ಬೆಕ್ಕು ಮಾತ್ರ ಸಾಹಸ ಮಾಡಲು ಮುಂದಾಯಿತುʼʼ ಎಂದು ಮಗದೊಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಈ ಬೆಕ್ಕುಗಳು ಬೇಟೆಯಾಡಲೂ ಇನ್ನಷ್ಟು ಬಳಗಬೇಕಿದೆʼʼ ಎಂದು ಇನ್ನೊಬ್ಬರು ಕಮೆಂಟ್’ನಲ್ಲಿ ತಿಳಿಸಿದ್ದಾರೆ.

https://www.instagram.com/reel/CyKJhoZoYB1/?utm_source=ig_web_copy_link

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!