ವಿವೇಕವಾರ್ತೆ : ದಿನೇ ದಿನೇ ಚಿತ್ರ ವಿಚಿತ್ರ ಸಂಗತಿಗಳ ವಿಡಿಯೋ ವೈರಲ್ ಆಗುತ್ತಲೇ ಇರುತ್ತವೆ. ಅಕ್ಷರಸ್ಥರಾದ ನಾವೇ ಹಲವಾರು ಭಾರಿ ತಪ್ಪು ಹೆಜ್ಜೆಯನ್ನಿಟ್ಟು ಸಮಾಜದಲ್ಲಿ ತಲೆ ತಗಿಸ ಬೇಕಾದ ಪರಿಸ್ಥಿತಿಗಳನ್ನು ನಿರ್ಮಿಸಿಕೊಳ್ಳುತ್ತೇವೆ.
ಸದ್ಯ ವೈರಲ್ ಆಗಿರೋ ವಿಡಿಯೋದಲ್ಲಿ ಜೋಡಿಯೊಂದು ತಾವು ಎಲ್ಲಿದ್ದೇನೆ, ಎತ್ತ ಸಾಗುತ್ತಿದ್ದೇವೆ ಅನ್ನೋದನ್ನೇ ಮರೆತಂತೆ ಕಾಣುತ್ತಿದೆ. ಚಲಿಸುತ್ತಿರುವ ಕಾರಿನ ಸನ್‌ರೂಫ್ ಮೇಲೆ ಕುಳಿತು ಲಿಪ್ ಲಾಕ್ ಮಾಡಿದ್ದಾರೆ. ಹೆದ್ದಾರಿಯೋಂದಿಗೂ ಹೀಗೆಯೇ ಚುಂಬಿಸುತ್ತಾ ಸಾಗಿದ್ದಾರೆ. ಈ ವೈರಲ್ ವಿಡಿಯೋ ನೋಡಿದ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೈರಲ್ ವಿಡಿಯೋ ನಡೆದಿರುವುದು ಹೈದರಾಬಾದ್ ನಗರದ ಪಿ.ವಿ.ನರಸಿಂಹರಾವ್ ಎಕ್ಸ್‌ಪ್ರೆಸ್‌ವೇನಲ್ಲಿ ಎಂದು ಗೊತ್ತಾಗಿದೆ. ರಸ್ತೆಯಲ್ಲಿ ಕಾರು ವೇಗವಾಗಿ ಚಲಿಸುತ್ತಿರುವಾಗಲೇ ಈ ಜೋಡಿ ರೋಮ್ಯಾನ್ಸ್ ಆರಂಭಿಸಿದೆ. ವಿಡಿಯೋದಲ್ಲಿ ಕಾರಿನ ಸನ್‌ರೂಫ್ ತೆರೆದು ಟಾಪ್ ಮೇಲೆ ಕುಳಿತ ಜೋಡಿ, ಚುಂಬಿಸುತ್ತಲೇ ಸಾರ್ವಜನಿಕರತ್ತ ಕೈಬೀಸುತ್ತಾ ಸಾಗಿದ್ದಾರೆ. ಕಾರಿನ ಮ್ಯೂಸಿಕ್ ಸಿಸ್ಟಮ್‌ನಲ್ಲಿ ರೋಮ್ಯಾಟಿಂಗ್ ಹಾಡು ಹಾಕಿದ್ದಾರೆ.
ಎಕ್ಸ್ಪ್ರೆಸ್ವೇನಲ್ಲಿ ಯುವಕನ್ನು ಸನ್ರೂಫ್ ಮೇಲೆ ಕುಳಿತು ಯುವತಿಯನ್ನು ತಬ್ಬಿಕೊಂಡು ಚುಂಬಿಸುತ್ತಾ ಸಾಗುತ್ತಾರೆ. ಈ ಜೋಡಿಯ ರೋಮ್ಯಾನ್ಸ್ನ್ನು ಹಿಂಭಾಗದ ವಾಹನ ಸವಾರರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಡಿಯೋ ನೋಡಿದ ಅನೇಕ ನೆಟ್ಟಿಗರು ತಮ್ಮದೆ ಭಾವನೆಗೆ ತಕ್ಕತೆ ಪ್ರತಿಕ್ರಿಯಿಸಿದ್ದಾರೆ. ಸಾರ್ವಜನಿಕ ಪ್ರದರ್ಶನದಲ್ಲಿ ಅಪಾಯಕಾರಿ ಸ್ಟಂಟ್, ಇತರ ವಾಹನ ಸವಾರರ ಜೀವಕ್ಕೆ ಅಪಾಯ ತರುವಂತ ವಾಹನ ಚಾಲನೆ, ಸಾರ್ವಜನಿಕ ಪ್ರದೇಶದಲ್ಲಿ ಅಸಭ್ಯ ವರ್ತನೆ ಸೇರಿದಂತೆ ಹಲವು ಪ್ರಕರಣ ದಾಖಲಿಸಿ ಜೋಡಿಗಳನ್ನು ಜೈಲಿಗೆ ಅಟ್ಟುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದೆ. ಇದರ ಜೊತೆಗೆ ಆಕ್ರೋಶ ವ್ಯಕ್ತವಾಗಿದೆ. ಹೈದರಾಬಾದ್ ಟ್ರಾಫಿಕ್ ಪೊಲೀಸರು ಈ ವಾಹನ ಹಾಗೂ ಜೋಡಿಯನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
https://twitter.com/DharaniBRS/status/1713373024353947764?ref_src=twsrc%5Etfw%7Ctwcamp%5Etweetembed%7Ctwterm%5E1713373024353947764%7Ctwgr%5E7ff4300ea4fd865eab21c475138ce22fe1a2838d%7Ctwcon%5Es1_c10&ref_url=https%3A%2F%2Fapi-news.dailyhunt.in%2F