spot_img
spot_img
spot_img
spot_img
spot_img
spot_img

ಕಲಬುರಗಿಯಲ್ಲಿ ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ದಂಧೆ: ಕಣ್ಣಿದ್ದು ಕುರುಡರಾದ ಪೊಲೀಸರು, ಅಧಿಕಾರಿಗಳು

Published on

spot_img

ಕಲಬುರಗಿ: ನಗರದಲ್ಲಿ ಆಟೋ ಸೇರಿದಂತೆ ಇನ್ನಿತರ ವಾಹನಗಳಿಗೆ ಅಡುಗೆ ಸಿಲಿಂಡರ್​ಗಳನ್ನು ರಿಫಿಲ್ಲಿಂಗ್ ಮಾಡುವ ದೊಡ್ಡ ದಂಧೆ ನಡೆಯುತ್ತಿದೆ. ಸರ್ಕಾರ ಗೃಹ ಬಳಕೆಯ ಸಿಲಿಂಡರ್​ಗಳನ್ನು ವಾಣಿಜ್ಯ ಬಳಕೆಗೆ ಬಳಸುವುದಕ್ಕೆ ಅವಕಾಶ ನೀಡಿಲ್ಲ. ಆದರೂ ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ಬಳಸಲಾಗುತ್ತಿದೆ. ಆಟೋ ಮತ್ತು ಇನ್ನಿತರ ವಾಹನಗಳಿಗೆ ಬಳಸುವ ಗ್ಯಾಸ್​ ​ಕಡಿಮೆ ಧಹನಶಕ್ತಿ ಇರುತ್ತದೆ. ಆದರೆ ಅಡುಗೆ ಸಿಲಿಂಡರ್​ ಹೆಚ್ಚಿನ ಧಹನಶಕ್ತಿಯನ್ನು ಹೊಂದಿದ್ದು, ಸ್ವಲ್ಪ ಹೆಚ್ಚು ಕಡಿಮೆಯಾದರು ವಾಹನಗಳು ಸ್ಪೋಟಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅನೇಕ ಬಾರಿ ಅಡುಗೆ ಸಿಲಿಂಡರ್​ಗಳನ್ನು ವಾಹನಗಳಿಗೆ ರಿಫಿಲ್ಲಿಂಗ್ ಮಾಡುವಾಗ ಸ್ಟೋಟಗೊಂಡು ಸಾವನ್ನಪ್ಪಿರುವ ಉದಾಹರಣೆಗಳಿವೆ.

ಈಗಾಗಲೇ ನಗರದಲ್ಲಿ ಐವತ್ತಕ್ಕೂ ಹೆಚ್ಚು ಕಡೆ ಅಕ್ರಮವಾಗಿ ಇಂತಹದೊಂದು ದಂಧೆಯನ್ನು ಮಾಡಲಾಗುತ್ತಿದೆಯಂತೆ. ಕಲಬುರಗಿಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಆಟೋಗಳು ಪ್ರತಿನಿತ್ಯ ರಸ್ತೆಯಲ್ಲಿ ಓಡಾಡುತ್ತವೆ. ಇವುಗಳಲ್ಲಿ ಹೆಚ್ಚಿನ ಆಟೋಗಳು ಗ್ಯಾಸ್​ನ್ನು ಬಳಕೆ ಮಾಡುತ್ತದೆ. ಬಹುತೇಕ ಆಟೋ ಚಾಲಕರು, ಗ್ಯಾಸ್ ಸ್ಟೇಷನ್​ಗೆ ಹೋಗಿ ಗ್ಯಾಸ್​ನ್ನು ಭರ್ತಿ ಮಾಡುತ್ತಿಲ್ಲ. ಬದಲಾಗಿ ಅಡುಗೆ ಸಿಲಿಂಡರ್​ಗಳನ್ನು ಆಟೋಗಳಿಗೆ ಭರ್ತಿ ಮಾಡುತ್ತಿದ್ದಾರೆ. ಇದರಿಂದ ಆಟೋ ಚಾಲಕರಿಗೆ ಸ್ವಲ್ಪ ಹಣ ಉಳಿತಾಯವಾಗುತ್ತದೆಯಂತೆ. ಸದ್ಯ ಎಲ್.ಪಿ.ಜಿ ಸ್ಟೇಷನ್​ಗಳಲ್ಲಿ ಪ್ರತಿ ಲೀಟರ್ ಗ್ಯಾಸ್​ನ ಬೆಲೆ 64 ರೂಪಾಯಿ ಇದೆಯಂತೆ.

ಇನ್ನು ಪ್ರತಿ ಕಿಲೋ ಗ್ಯಾಸ್​ನ್ನು ನೂರರಿಂದ ನೂರಾ ಐದು ರೂಪಾಯಿ ಕೊಟ್ಟು ಆಟೋ ಚಾಲಕರು ಅಕ್ರಮವಾಗಿ ರಿಫಿಲ್ಲಿಂಗ್ ಮಾಡಿಸಿಕೊಳ್ಳುತ್ತಿದ್ದಾರಂತೆ. ಇನ್ನು ಒಂದು ಕಿಲೋ ಸಿಲಿಂಡರ್, 1.79 ಲಿಟರ್ ಗ್ಯಾಸ್​ಗೆ ಸಮವಾಗಿರುತ್ತದೆ. ಅಂದರೆ ಆಟೋ ಚಾಲಕರಿಗೆ ಗ್ಯಾಸ್ ಸ್ಟೇಷಸ್​ನಲ್ಲಿ ಗ್ಯಾಸ್ ಬರ್ತಿ ಮಾಡಿಸಿಕೊಳ್ಳುವುದಕ್ಕಿಂತ ತುಸು ಕಡಿಮೆ ದರದಲ್ಲಿ ಅಡುಗೆ ಸಿಲಿಂಡರ್ ಗ್ಯಾಸ್ ಸಿಗುತ್ತದೆಯಂತೆ. ಹೀಗಾಗಿ ಹೆಚ್ಚಿನ ಆಟೋ ಚಾಲಕರು ಅಡುಗೆ ಸಿಲಿಂಡರ್ ಗ್ಯಾಸ್ ಭರ್ತಿ ಮಾಡಿಸಿಕೊಳ್ಳುತ್ತಿದ್ದಾರೆ. ಅನೇಕ ಅಕ್ರಮ ದಂಧೆಕೋರರು, ಗ್ಯಾಸ್ ಪೂರೈಕೆದಾರರ ಜೊತೆ ಸಂಬಂಧ ಹೊಂದಿದ್ದು, ಜನರಿಗೆ ಪೂರೈಕೆ ಮಾಡುವ ಸಿಲಿಂಡರ್​ಗಳನ್ನು ಅಕ್ರಮವಾಗಿ ಸಂಗ್ರಹಿಸಿ, ಆಟೋ ಚಾಲಕರಿಗೆ ನೀಡುತ್ತಿದ್ದಾರೆ. ಇನ್ನು ಇಂತಹದೊಂದು ದಂಧೆಯ ಬಗ್ಗೆ ಕಲಬುರಗಿ ಪೊಲೀಸರಿಗೆ, ಆಹಾರ ಇಲಾಖೆಯವರಿಗೆ ಮಾಹಿತಿ ಇದೆಯಂತೆ. ಆದರೆ ಪೊಲೀಸರು ಮತ್ತು ಆಹಾರ ಇಲಾಖೆಯವರು ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ಅಕ್ರಮ ದಂಧೆ ಅವ್ಯಾಹುತವಾಗಿ ನಡೆಯುತ್ತಿದೆ.

ಒಟ್ಟಿನಲ್ಲಿ ಪ್ರಯಾಣಿಕರ ಜೊತೆ ಚೆಲ್ಲಾಟಾವಾಡುತ್ತಿರುವ ಆಟೋ ಚಾಲಕರು ಮತ್ತು ಅಕ್ರಮವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡುತ್ತಿರುವ ದಂಧೆಕೋರರ ವಿರುದ್ದ ಪೊಲೀಸರು ಮತ್ತು ಆಹಾರ ಇಲಾಖೆಯವರು ಕಠಿನ ಕ್ರಮ ಕೈಗೊಳ್ಳುವ ಮೂಲಕ ಅಕ್ರಮ ದಂಧೆಗೆ ಕಡಿವಾಣ ಹಾಕಿ, ಜನರ ಪ್ರಾಣವನ್ನು ರಕ್ಷಿಸುವ ಕೆಲಸ ಮಾಡಬೇಕಾಗಿದೆ.

ವರದಿ- ಅಪ್ಪರಾಯ ಬಡಿಗೇರ

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮೊಟ್ಟೆ ಬೇಯಿಸುವಾಗ ಯಾವಾಗಲೂ ಒಡೆದು ಹೋಗುತ್ತಾ!? – ಈ ಸಲಹೆ ಪಾಲಿಸಿ!

ಮೊಟ್ಟೆ ಬೇಯಿಸುವಾಗ ಒಡೆದು ಹೋಗುವುದನ್ನು ತಪ್ಪಿಸಲು ಈ ಟ್ರಿಕ್ಸ್ ಫಾಲೋ ಮಾಡಿ. ಹೀಗಾಗಿ ಹೆಚ್ಚಿನವರು ಬೇಯಿಸಿದ ಮೊಟ್ಟೆಯನ್ನು ತಿನ್ನಲು...

ಸಿನಿಮಾ ಅವಕಾಶವಿಲ್ದೆ ಬದುಕು ನಡೆಸಲು ಸೋಪು ಮಾರ್ತಿದ್ದ ನಟಿ ಲಕ್ಷ್ಮಿ ಮಗಳಿಗೆ ಕಾಮುಕರ ಕಾಟ

ನಮ್ಮ ಕನ್ನಡ ಚಿತ್ರರಂಗ ಮಾತ್ರವಲ್ಲ ಪಂಚ ಭಾಷೆಗಳಲ್ಲಿ ನಟಿಸಿ ಬಹುಭಾಷಾ ತಾರೆಯಾಗಿ ಮೆರೆದ ನಟಿ ಲಕ್ಷ್ಮಿ ಅವರ ಸೌಂದರ್ಯಕ್ಕೆ...

ಒಂದೇ ರಾತ್ರಿಯಲ್ಲಿ ನಿಮ್ಮ ಹಿಮ್ಮಡಿಗಳ ಸೀಳುವಿಕೆಯನ್ನು ಹೋಗಲಾಡಿಸಿ: ಇಲ್ಲಿದೆ ಹಿಮ್ಮಡಿ ಸೀಳಿಗೆ ಒಂದು ಉತ್ತಮ ಪರಿಹಾರ

ವಿವೇಕವಾರ್ತೆ :ಹಿಮ್ಮಡಿ ಸೀಳುವಿಕೆ ಅನೇಕ ಜನರ ಸಾಮಾನ್ಯ ಸಮಸ್ಯೆಯಾಗಿದೆ. ಇಂದಿನ ಲೇಖನದಲ್ಲಿ ಹಿಮ್ಮಡಿ ಸೀಳುವಿಕೆಯನ್ನು ಶೀಘ್ರದಲ್ಲಿ ಕಡಿಮೆ ಮಾಡುವ...

ಮುದ್ದಾದ ಪತ್ನಿಗಾಗಿ ಸ್ವಂತ ತಂದೆಯನ್ನು ಕಡೆಗಣಿಸಿದ ಜಡೇಜಾ, MLA ಹೆಂಡತಿಗಾಗಿ ಪೋಷಕರು ಬೀದಿಗೆ

ವಿವೇಕವಾರ್ತೆ :ತಮ್ಮ ತಂದೆ ಅನಿರುದ್ಧ್ ಸಿನ್ಹ ಜಡೇಜಾ ಮಾಡಿದ ಆರೋಪಗಳನ್ನು ಕ್ರಿಕೆಟಿಗ ರವೀಂದ್ರ ಜಡೇಜಾ ತಳ್ಳಿಹಾಕಿದ್ದಾರೆ. ಇತ್ತೀಚೆಗೆ ಗುಜರಾತಿ...
error: Content is protected !!