ವಿವೇಕ ವಾರ್ತೆ : ಗದಗ ಜಿಲ್ಲಾಧಿಕಾರಿ ಎಂ.ಎನ್.ವೈಶಾಲಿ ಅವರು, ನಗರಸಭೆ ಕಂದಾಯ ಅಧಿಕಾರಿಯನ್ನು ಕರ್ತವ್ಯ ಲೋಪದಡಿ ಅಮಾನತು ಮಾಡಿ ಎಂದು ಆದೇಶ ಹೊರಡಿಸಿದ್ದಾರೆ.
ನಗರಸಭೆ ಕಂದಾಯ ಅಧಿಕಾರಿ ಮಹೇಶ್ ಹಡಪದ ಎನ್ನುವವರನ್ನು ಕರ್ತವ್ಯ ಲೋಪದಡಿ ಸಸ್ಪೆಂಡ್ ಮಾಡಲಾಗಿದೆ.
ನಿರಪೇಕ್ಷಣಾ ಪತ್ರ ಪಡೆಯದೇ ಫಾರಂ ನಂ 03 ಅನ್ನು ವಿತರಿಸಿರುವ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ.
ಅಧಿಕಾರಿ ನಿಯಮ ಬಾಹಿರವಾಗಿ 3148 ನಿವೇಶನಗಳಿಗೆ ಫಾರಂ ನಂ 03 ವಿತರಣೆ ಮಾಡಿದ್ದರು. ಈ ಕುರಿತು ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ದೂರಿನ ಮೇರೆಗೆ ತನಿಖೆ ಮಾಡಿದ್ದ ಅಪರ ಜಿಲ್ಲಾಧಿಕಾರಿ ಎಡಿಸಿ ಅನ್ನಪೂರ್ಣ ಮುದುಕಮ್ಮನವರ್ ವರದಿ ಆಧರಿಸಿ ಅಮಾನತು ಮಾಡಲಾಗಿದೆ. ಮಹೇಶ್ ಹಡಪದ ಅಮಾನತುಗೊಳಿಸಿ ಡಿಸಿ ಎಂ. ಎನ್.ವೈಶಾಲಿ ಆದೇಶ ಹೊರಡಿಸಿದ್ದಾರೆ.