ವಿವೇಕವಾರ್ತೆ : ಬೆಳಗಾವಿ ನಗರದ ಕಪಲೇಶ್ವರ ಮಂದಿರದ ಹತ್ತಿರವಿರುವ ಕಪಿಲೇಶ್ವರ ಹೊಂಡದಲ್ಲಿ ಇಂದು ಬೆಳ್ಳಂ ಬೆಳಗ್ಗೆ (ದಿ.16) ಎರಡು ಶವಗಳು ಪತ್ತೆಯಾಗಿವೆ.
ಪತ್ತೆಯಾಗಿರುವ ಶವಗಳಲ್ಲಿ ಒಂದು ಹೆಣ್ಣು ಮತ್ತೊಂದು ಗಂಡು. ಹೀಗೆ ಎರಡು ಶವಗಳು ಕಪಿಲೇಶ್ವರ ಹೊಂಡದಲ್ಲಿ ತೇಲಾಡುತ್ತಿವೆ.
ಪತ್ತೆಯಾದ ಎರಡು ಶವಗಳ ಮುಖ ಕೆಳಗಾಗಿದ್ದರಿಂದ ಶವಗಳ ಗುರುತು ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ಒಂದು ಹೆಣ್ಣು ಮತ್ತು ಇನ್ನೊಂದು ಪುರುಷನ ಶವ ಎಂದು ಗೊತ್ತಾಗಿದ್ದು, ಕಪಿಲೇಶ್ವರ ಹೊಂಡದ ಸುತ್ತಲು ಜನ ಜಮಾಯಿಸಿದ್ದು ಪೋಲೀಸರು ಶವಗಳನ್ನು ಗುರುತಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಬುಧವಾರ ಬೆಳಗ್ಗೆ ವಾಕ್ ಮಾಡುವಾಗ ಹೊಂಡದಲ್ಲಿ ಎರಡು ಶವಗಳು ತೇಲಾಡುತ್ತಿರುವದನ್ನು ಗಮನಿಸಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಹಿರಿಯ ಪೋಲೀಸ್ ಅಧಿಕಾರಿಗಳು ದೌಡಾಯಿಸಿದ್ದು ಶವಗಳನ್ನು ಗುರುತಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ.