ಉಗುರುಗಳ ಮೇಲಿರುವ ಅರ್ಧ ಚಂದ್ರಾಕೃತಿಯಿಂದ ಗೊತ್ತಾಗುತ್ತೆ ನಮ್ಮ ಆರೋಗ್ಯ ಹೇಗಿದೆ ಅಂತ.!

Published on

spot_img
spot_img

ವಿವೇಕವಾರ್ತೆ : ನಮ್ಮ ದೇಹದ ಒಂದು ಅಂಗಗಳಲ್ಲಿ ಉಗುರುಗಳು ಒಂದು. ನಿರಂತರವಾಗಿ ಬೆಳೆಯುತ್ತಿರುವ ಈ ಅಂಗವನ್ನು ಆಗಾಗ ಸ್ವಚ್ಛ ಮಾಡುವುದು ಮತ್ತು ಕತ್ತರಿಸುವುದು ಮಾಡುತ್ತೇವೆ.

ಉಗುರುಗಳ ಬುಡದಲ್ಲಿ ಬಿಳಿ ಬಣ್ಣದ ಅರ್ಧ ಚಂದ್ರ ಆಕಾರವು ನಾವು ಗಮನಿಸಬಹುದು. ಉಗುರಿನಲ್ಲಿ ಇರುವ ಈ ಚಿಹ್ನೆ ಯಾವೆಲ್ಲಾ ಸಂಗತಿಗಳನ್ನು ಪ್ರತಿಬಿಂಬಿಸುತ್ತದೆ ಎಯ ನಿಮಗೆ ಗೊತ್ತೇ.?

ಉಗುರಿನ ಕೆಳಗೆ ಚರ್ಮವು ತುಂಬಾ ಸೂಕ್ಷ್ಮ ಇರುವ ಕಾರಣ ಅದರ ರಕ್ಷಣೆ ಬಹಳ ಮುಖ್ಯ. ಉಗುರು ನಮ್ಮ ಬೆರಳುಗಳ ಸೂಕ್ಷ್ಮ ಚರ್ಮವನ್ನು ರಕ್ಷಣೆ ಮಾಡುತ್ತದೆ. ಇನ್ನೂ ಕೆಲವರು ಉಗುರುಗಳು ತುಂಬಾ ಗಟ್ಟಿಯಾಗಿದ್ದರೆ, ಇನ್ನೂ ಕೆಲವರ ಉಗುರುಗಳು ತುಂಬಾ ಮೃದುವಾಗಿರುತ್ತದೆ.

ಕೆಲವು ಜನರ ಉಗುರುಗಳ ಮೇಲೆ ಅರ್ಧ ಚಂದ್ರನ ಆಕೃತಿ ಮೂಡಿರುತ್ತದೆ. ಇದನ್ನು ಲುನುಲಾ ಎನ್ನುತ್ತಾರೆ. ಈ ಆಕೃತಿ ನಮ್ಮ ಆರೋಗ್ಯದ ಕುರಿತು ಸೂಚಿಸುತ್ತದೆ.

* ಉಗುರಿನಲ್ಲಿ ಮೂಡಿದ ಅರ್ಧ ಚಂದ್ರ ಬಿಳಿ ಮತ್ತು ಸ್ಪಷ್ಟವಾಗಿದ್ದರೆ, ನೀವು ಸಂಪೂರ್ಣವಾಗಿ ಉತ್ತಮ ಆರೋಗ್ಯವನ್ನು ಹೊಂದಿದ್ದೀರಿ ಎಂದರ್ಥ.

* ಹೆಬ್ಬೆರಳಿನ ಮೇಲೆ ಅರ್ಧ ಚಂದ್ರಾಕೃತಿ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಇತರ ಬೆರಳುಗಳ ಮೇಲೆ ಅಷ್ಟು ಸ್ಪಷ್ಟವಾಗಿ ಕಾಣಿಸುವುದಿಲ್ಲ.

* ಬಿಳಿ ಬಣ್ಣದ ಲುನುಲಾ ಉತ್ತಮ ಆರೋಗ್ಯ ಸ್ಥಿತಿ ಹಾಗೂ ಜೀವಸತ್ವಗಳು ಸಮತೋಲನದಲ್ಲಿ ಇರುವುದನ್ನು ತಿಳಿಸುವುದು. ಲುನುಲಾ ಅನುಪಸ್ಥಿತಿಯು ಹಲವಾರು ವಿಷಯಗಳನ್ನು ತಿಳಿಸುತ್ತದೆ. ದೇಹದಲ್ಲಿ ಜೀವಸತ್ವದ ಕೊರತೆ, ಖನಿಜದ ಕೊರತೆ ಹಾಗೂ ವಿಟಮಿನ್ ಬಿ 12 ಕೊರತೆಯನ್ನು ಬಿಂಬಿಸುತ್ತದೆ.

* ರಕ್ತ ಹೀನತೆ ಸಮಸ್ಯೆ ಇರುವವರ ಉಗುರಿನ ಮೇಲೆ ಅರ್ಧ ಚಂದ್ರಾಕೃತಿಯು ಇರುವುದಿಲ್ಲ. ಶ್ವಾಸಕೋಶದ ಸಮಸ್ಯೆ, ಹೃದಯ ರೋಗ, ಮಧುಮೇಹ, ಉಗುರುಗಳ ಸಿಂಡ್ರೋಮ್ ಇರುವವರಲ್ಲಿ ಈ ಲುನುಲಾ ಕಾಣಿಸಿಕೊಳ್ಳುವುದಿಲ್ಲ.

* ಯಕೃತ್‌ನ ಕಾಯಿಲೆ, ಹೃದಯದ ತೊಂದರೆ, ರಕ್ತಹೀನತೆಯಂತಹ ಕಾಯಿಲೆಗಳು ಬದಲಾಗುವ ಉಗುರಿನ ಬಣ್ಣದಿಂದ ತಿಳಿದುಬರುತ್ತದೆ.

* ಉಗುರುಗಳಲ್ಲಿ ಒಂದು ವೇಳೆ ಅಡ್ಡಲಾಗಿ ಒಂದು ರೇಖೆ ಗುಳಿಯಂತೆ ಬಿದ್ದರೆ ಇದು ಶರೀರದಲ್ಲಿ ಸತುವಿನ ಕೊರತೆ ಇದೆ ಎಂದರ್ಥ. ಸತುವಿನ ಕೊರತೆಯಿಂದ ಉಗುರುಗಳ ಕೆಳಗೆ ರಕ್ತ ಪರಿಚಲನೆ ಕಡಿಮೆಯಾಗಿ ಸೋಂಕು ತಗಲಿಸಬಹುದಾದ ಬ್ಯಾಕ್ಟೀರಿಯಾಗಳ ಇರುವಿಕೆಯನ್ನು ಖಾತ್ರಿಪಡಿಸುತ್ತದೆ.

* ಇನ್ನು ವ್ಯಕ್ತಿಯ ಉಗುರಿನಲ್ಲಿ ಕಂಡುಬರುವ ಲುನುಲಾ ಬಿಳಿ ಬಣ್ಣಕ್ಕೆ ಬದಲಾಗಿ ಹಳದಿ ಅಥವಾ ನೀಲಿ ಬಣ್ಣದಲ್ಲಿ ಕಾಣಿಸಿದರೆ ಆ ವ್ಯಕ್ತಿ ಮಧುಮೇಹಕ್ಕೆ ಬಲಿಯಾಗುವ ಸಾಧ್ಯತೆ ಇರುತ್ತದೆ.

* ಯಾರಲ್ಲಿ ಉಗುರುಗಳ ಮೇಲೆ ಲುನುಲಾ ಇರುವುದಿಲ್ಲವೋ ಅಂತಹವರು ಸದಾ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದರ್ಥವಲ್ಲ. ಕೆಲವು ಉಗುರುಗಳು ಲುನುಲಾ ಚರ್ಮದ ಕೆಳಭಾಗದಲ್ಲಿಯೇ ಅಡಗಿರಬಹುದು. ಇಲ್ಲವೇ ಸ್ವಲ್ಪ ಮಾತ್ರವೇ ಗೋಚರಿಸಿರಬಹುದು. ಹೀಗಾಗಿ ಉಗುರಿನಲ್ಲಿ ಲುನುಲಾ ಕಾಣಿಸಿಕೊಳ್ಳದಿದ್ದರೆ ಭಯಪಡಬೇಕಿಲ್ಲ.

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!