ಈ ಹಣ್ಣುಗಳನ್ನು ಮಿಸ್ ಮಾಡದೇ ಸೇವಿಸಿ ; ಹೈ ಬಿಪಿ ನಿಯಂತ್ರಿಸಿ.!

Published on

spot_img
spot_img

ವಿವೇಕ ವಾರ್ತೆ : ಹೈಬಿಪಿ (ರಕ್ತದೊತ್ತಡ)ದ ಸಮಸ್ಯೆಯಿಂದ ಬಳಲುತ್ತಿರುವವ ಕೆಲವು ಆಹಾರ ಮತ್ತು ಜೀವನಶೈಲಿಯ ಬದಲಾವಣೆಗಳನ್ನು ಮಾಡುವ ಮೂಲಕ ಹೈ ಬಿಪಿ ಕಂಟ್ರೋಲ್ ಮಾಡಬಹುದು.

ಯಾರಾದರೂ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರೆ, ಅವರು ತಮ್ಮ ಆಹಾರದಿಂದ ಹೆಚ್ಚಿನ ಪ್ರಮಾಣದ ಟ್ರಾನ್ಸ್-ಕೊಬ್ಬುಗಳು, ಉಪ್ಪು ಮತ್ತು ಸಕ್ಕರೆಯನ್ನು ಹೊಂದಿರುವ ಆಹಾರವನ್ನು ಕಡಿಮೆ ಮಾಡುವುದು ಒಳ್ಳೆಯದು.

ಹೈ ಬಿಪಿ ಇದ್ದವರು ಈ ಕೆಳಗಿ ಹಣ್ಣುಗಳನ್ನು ಸೇವಿಸುವ ಮೂಲಕ ರಕ್ತದೊತ್ತಡವನ್ನು ಕಂಟ್ರೋಲ್‌ನಲ್ಲಿಡಲು ಸಾಧ್ಯವಾಗಬಲ್ಲದು.

* ​ಕಿತ್ತಳೆಹಣ್ಣು : ಇದರಲ್ಲಿ ಪೊಟ್ಯಾಷಿಯಂ ಹಾಗೂ ವಿಟಮಿನ್‌-ಸಿ ಯಿಂದ ಸಮೃದ್ಧವಾಗಿರುವ ಕಿತ್ತಳೆಯೊಳಗೆ ಹಲವು ಆರೋಗ್ಯಕರ ಗುಣಗಳಿದ್ದು ಬಿಪಿಯನ್ನು ನಿಯಂತ್ರಿಸುವಲ್ಲಿ ಉಪಯುಕ್ತವಾಗಿದೆ. ನೀವು ಈ ಹಣ್ಣನ್ನು ಸೇವಿಸಬಹುದು ಅಥವಾ ಜ್ಯೂಸ್ ಮಾಡಿಯೂ ಕುಡಿಯಬಹುದು.

* ನಿಂಬೆ ಮತ್ತು ದ್ರಾಕ್ಷಿಹಣ್ಣು : ಈ ಹಣ್ಣುಗಳು ಕೂಡಾ ಕಿತ್ತಳೆ ಹಣ್ಣಿನಲ್ಲಿರುವಂತಹ ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಗುಣಲಕ್ಷಣಗಳನ್ನು ಹೊಂದಿದೆ. ಇದು ಬಿಪಿ ಸಮಸ್ಯೆಯನ್ನು ನಿವಾರಿಸುತ್ತದೆ.

* ​ಬಾಳೆಹಣ್ಣು : ಸಾಮಾನ್ಯವಾಗಿ ಪೊಟ್ಯಾಷಿಯಂನಿಂದ ಸಮೃದ್ಧವಾಗಿರುವ ಈ ಬಾಳೆಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳು ಇರುತ್ತವೆ. ಇದನ್ನು ನಿಯಮಿತವಾಗಿ ಸೇವಿಸಿದರೆ ಅದರಲ್ಲೂ ಬೆಳಗ್ಗಿನ ಸಮಯದಲ್ಲಿ ಬಾಳೆಹಣ್ಣನ್ನು ಸೇವಿಸಿದರೆ ಬಿಪಿಯನ್ನೂ ನಿಯಂತ್ರಿಸಬಹುದು.

* ಕಿವಿ ಹಣ್ಣು : ಈ ಕಿವಿ ಹಣ್ಣು ರುಚಿಕರವಾಗಿದ್ದು, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮುಂತಾದ ಅನೇಕ ಅಗತ್ಯ ಪೋಷಕಾಂಶಗಳು ಈ ಹಣ್ಣಿನಲ್ಲಿದೆ. ಹೀಗಾಗಿ ಇದರ ಸೇವನೆಯಿಂದ ಬಿಪಿಯನ್ನೂ ನಿಯಂತ್ರಿಸಬಹುದು.

* ​ಅವಾಕಾಡೋ : ಇನ್ನು ಅವಾಕಾಡೋ ಹಣ್ಣಿನಲ್ಲಿ ಬಾಳೆಹಣ್ಣಿಗಿಂತಲೂ ಹೆಚ್ಚಿನ ಪೊಟ್ಯಾಷಿಯಂ ಇದೆ. ಬೆಣ್ಣೆಯಂತಿರುವ ಈ ಹಣ್ಣು ಸಾಕಷ್ಟು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ನಿಮ್ಮ ರಕ್ತದೊತ್ತಡ ಸಮಸ್ಯೆಯನ್ನು ಸರಿದೂಗಿಸಲು ಇದು ಸಹಕಾರಿಯಾಗಿದೆ.

* ಪೇರಳೆ ಹಣ್ಣು : ಪೇರಳೆ ಹಣ್ಣು ಉಷ್ಣವಲಯದ ಹಣ್ಣಾಗಿದ್ದು, ಸಾಕಷ್ಟು ಆರೋಗ್ಯ ಪ್ರಯೋಜನಗಳಿಂದ ತುಂಬಿದೆ ಮತ್ತು ಬಹುಶಃ ಅವುಗಳಿಗೆ ಕಡಿಮೆ ಮೌಲ್ಯಯುತವಾಗಿದೆ. ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಎರಡರ ವಿಷ್ಯಕ್ಕೂ ಬಂದಾಗ ಪೇರಳೆ ಹಣ್ಣು ಕಿತ್ತಳೆಗಿಂತ ಹೆಚ್ಚು ಶ್ರೀಮಂತವಾಗಿದೆ. ಇದು ನಿಮ್ಮ ಮಧುಮೇಹ ಹಾಗೂ ರಕ್ತದೊತ್ತಡವನ್ನೂ ಕಂಟ್ರೋಲ್‌ನಲ್ಲಿಡಲು ಸಹಕಾರಿಯಾಗಿದೆ.

* ​ಟೊಮೆಟೋ : ಟೊಮೆಟೋವನ್ನು ಹೆಚ್ಚಿನವರು ಅಡುಗೆಗೆ ತರಕಾರಿಯ ರೂಪದಲ್ಲಿ ಬಳಸುತ್ತಾರೆ. ಟೊಮೆಟೋ ಪೊಟ್ಯಾಷಿಯಂನಿಂದ ಕೂಡಿದೆ. ರಕ್ತದೊತ್ತಡದ ಸಮಸ್ಯೆ ಇರುವವರು ಇದನ್ನು ಹಾಗೆಯೇ ಸೇವಿಸಬಹುದು, ಇಲ್ಲವಾದರೆ ಜ್ಯೂಸ್ ಮಾಡಿಯೂ ಕುಡಿಯಬಹುದು. ಟೊಮೆಟೋ ರಸಂ, ಸೂಪ್‌ಗಳಲ್ಲೂ ಬಳಸಬಹುದು. ಆದರೆ ನೀವು ಟೊಮೆಟೋದಿಂದ ಯಾವುದೇ ಆಹಾರ ತಯಾರಿಸುವಾಗಲು ಉಪ್ಪನ್ನು ಮಾತ್ರ ಹೆಚ್ಚಾಗಿ ಬಳಸಬೇಡಿ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!