ವಿವೇಕವಾರ್ತೆ : ಹಮಾಸ್ ಉಗ್ರರು ನಡೆಸಿದ ದಾಳಿಯಿಂದ ಕೆರಳಿದ ಇಸ್ರೇಲ್, ತನ್ನ ಲಕ್ಷಾಂತರ ಸೈನಿಕರನ್ನು ಮತ್ತು ನೂರಾರು ಯುದ್ಧ ಟ್ಯಾಂಕರ್‌ಗಳನ್ನು ಗಾಜಾ ನಗರದತ್ತ ಕಳಿಸುತ್ತಿದೆ.
ಗಾಜಾಪಟ್ಟಿಯ ಹಮಾಸ್ ಉಗ್ರರನ್ನು ಸದೆಬಡೆದು ಇಸ್ರೇಲ್ ಸೇನೆಯು ಒತ್ತೆಯಾಳುಗಳಾಗಿ ಸಂಕಷ್ಟಕ್ಕೆ ಸಿಲುಕಿರುವ ನಾಗರಿಕರ ರಕ್ಷಣೆಯಲ್ಲೂ ಮುಂದಿದೆ.
ಇಸ್ರೇಲ್ ಡಿಫೆನ್ಸ್ ಫೋರ್ಸ್‌ನ ಶಯೇಟೆಟ್ ಫ್ಲೀಟ್ ಯುನಿಟ್‌ನ ಯೋಧರು ಸೂಫಾ ಔಟ್‌ಪೋಸ್ಟ್‌ನಲ್ಲಿ ದಾಳಿ ನಡೆಸಿ, ಸಿನಿಮಾ ರೀತಿಯ ಕಾರ್ಯಾಚರಣೆ ನಡೆಸಿ 60ಕ್ಕೂ ಹೆಚ್ಚು ಉಗ್ರರನ್ನೂ ಕೊಂದು ಹಾಕಿ 250 ನಾಗರಿಕರನ್ನು ರಕ್ಷಿಸಿದ್ದಾರೆ.
ಒಬ್ಬೊಬ್ಬನೇ ಉಗ್ರನನ್ನು ಹತ್ಯೆ ಮಾಡುತ್ತ, ನಿರಂತರ ಗುಂಡಿನ ದಾಳಿಯಲ್ಲಿ 60ಕ್ಕೂ ಹೆಚ್ಚಿನ ಉಗ್ರರನ್ನು ಹೊಡೆದುರುಳಿಸಿದ್ದಾರೆ. ಹಾಗು ಹಮಾಸ್ ಕಮಾಂಡರ್ ಸೇರಿ 26 ಉಗ್ರರನ್ನು ಬಂಧಿಸಿದ್ದಾರೆ.
ಇಸ್ರೇಲ್ ಡಿಫೆನ್ಸ್ ಫೋರ್ಸ್ ಕಾರ್ಯಾಚರಣೆಯ ವಿಡಿಯೊವನ್ನು ಅಪ್‌ಲೋಡ್ ಮಾಡಿದೆ. ಈ ವಿಡಿಯೊ ಇದೀಗ ವೈರಲ್ ಆಗಿದ್ದು, ಸೇನೆಯ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಗಾಜಾ ನಗರದಲ್ಲಿ ಹಮಾಸ್ ಉಗ್ರರು ಜನರ ಮನೆಗಳಲ್ಲಿ, ಗುಹೆಗಳಲ್ಲಿ ಮತ್ತು ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಅಡಗಿ ಕುಳಿತಿದ್ದಾರೆ ಎಂಬ ಮಾಹಿತಿ ಇಸ್ರೇಲ್‌ಗೆ ಲಭ್ಯವಾಗಿದೆ.
ಅಷ್ಟೆ ಅಲ್ಲದೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ರಾಕೆಟ್‌ಗಳನ್ನು ಇಟ್ಟುಕೊಂಡಿರುವ ಹಮಾಸ್ ಉಗ್ರರು ಎಂದಿಗೂ ತಲೆನೋವು ಎಂಬುದು ಇಸ್ರೇಲ್‌ಗೆ ಗೊತ್ತಾದ ಹಿನ್ನಲೆಯಲ್ಲಿ ಗಾಜಾ ನಗರದ ಮೇಲೆ ಪೂರ್ಣಪ್ರಮಾಣದ ದಾಳಿ ಮಾಡುವ ಮೂಲಕ ಇಡೀ ನಗರವನ್ನು, ಹಮಾಸ್ ಉಗ್ರರನ್ನು ನಾಶಗೊಳಿಸಬೇಕು ಎಂಬುದು ಇಸ್ರೇಲ್ ಉದ್ದೇಶವಾಗಿದೆ. ಹಾಗಾಗಿಯೇ, ನೂರಾರು ಬಂಕರ್‌ಗಳನ್ನು, ವಾಹನಗಳನ್ನು ಗಾಜಾ ನಗರದತ್ತ ಸಾಗಿಸುತ್ತಿದೆ ಎಂದು ತಿಳಿದುಬಂದಿದೆ.
https://twitter.com/i/status/1712579906423431208