ವಿವೇಕವಾರ್ತೆ : ಅಪ್ರಾಪ್ತ ವಿಶೇಷ ಸಾಮರ್ಥ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮಂಗಳೂರಿನ (Mangaluru)ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಅತ್ಯಾಚಾರ ಎಸಗಲು ಸಹಕಿಸಿದ ಮಹಿಳೆ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ಹಲೀಂ (37) ಮತ್ತು ಶಮೀನಾ ಬಾನು (22) ಬಂಧಿತ ಆರೋಪಿಗಳಾಗಿದ್ದಾರೆ.
ಬೈಕ್ ಅಪಘಾತದಲ್ಲಿ ಅಬ್ದುಲ್ ಹಲೀಂ ಮತ್ತು ಆತನ ಸ್ನೇಹಿತ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರನ್ನು ನೋಡಲು ಮಹಿಳೆಯೊಬ್ಬಳು ಅಪ್ರಾಪ್ತ ಮಗಳನ್ನು ಕರೆದುಕೊಂಡು ಹೋಗಿದ್ದಾರೆ. ಹೀಗೆ ಬಂದಾಕೆ, ತನ್ನ ಮಗಳನ್ನ ಶಮೀನಾ ಬಾನು ಜೊತೆ ಬಿಟ್ಟು ಪೊಲೀಸ್ ಠಾಣೆಗೆ ಹೋಗಿದ್ದಾರೆ.
ಈ ನಡುವೆ ಆಸ್ಪತ್ರೆಯಲ್ಲಿ ಅಬ್ದುಲ್ ಹಲೀಂ ಮತ್ತು ಶಮೀನಾ ದೈಹಿಕ ಸಂಪರ್ಕ ನಡೆಸುತ್ತಿದ್ದಾಗ ಅಪ್ರಾಪ್ತ ಬಾಲಕಿ ನೋಡಿದ್ದಾಳೆ. ಹೀಗಾಗಿ ಈಕೆಯ ಮೇಲೆ ಅತ್ಯಾಚರಕ್ಕೆ ಅಬ್ದುಲ್ ಹಲೀಂ ಯತ್ನಿಸಿದಾಗ ಪ್ರತಿರೋಧವೊಡ್ಡಿದ್ದಾಳೆ. ಈ ವೇಳೆ ಶಮೀನಾ, ಬಾಲಕಿಯ ಕೈ ಹಿಡಿದು ಬಾಯಿ ಮುಚ್ಚಿ ಅತ್ಯಾಚರ ಮಾಡಲು ಸಹಕರಿಸಿದ್ದಾಳೆ.
ವಿಚಾರ ತಿಳಿದ ಬಾಲಕಿಯ ತಾಯಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅಬ್ದುಲ್ ಹಲೀಂ ಮತ್ತು ಶಮೀನಾಳನ್ನು ಬಂಧಿಸಿದ್ದಾರೆ.